ಬೆಂಗಳೂರು: ವೇತನ ಪರಿಷ್ಕರಿಸುವಂತೆ ಆಗ್ರಹಿಸಿ ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ 10ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ನೌಕರರ ಸಮರ ಮುಂದುವರೆದಿದ್ದು, ರಾಜ್ಯದಲ್ಲಿ ಇಂದೂ ಸಹ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಳಿದಿಲ್ಲ. ಎಂದಿನಂತೆ ಖಾಸಗಿ ಬಸ್ಗಳ ಕಾರ್ಯಾಚರಣೆ ಮುಂದುವರೆದಿದೆ.
ಇಂದು ಶಾಸಕರುಗಳ ಮನೆ ಮುಂದೆ ಪ್ರತಿಭಟನೆ
ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಇಂದು ಸಹ ನೌಕರರು ಬೀದಿಗಿಳಿಯಲಿದ್ದಾರೆ. ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ ಮಾಡಿದ್ದು, ಈ ಮೂಲಕ ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಲಿದ್ದಾರೆ.
ಇತ್ತ ಮುಷ್ಕರನಿರತ ಸಿಬ್ಬಂದಿ ಮೇಲೆ ಬಿಎಂಟಿಸಿ ಶಿಸ್ತು ಕ್ರಮ ಮುಂದುವರೆದಿದೆ. 213 ಸಿಬ್ಬಂದಿಯನ್ನು ಮತ್ತೆ ಸೇವೆಯಿಂದ ಅಮಾನತು ಮಾಡಿದೆ. ಕರ್ತವ್ಯಕ್ಕೆ ಬಾರದ ಸಿಬ್ಬಂದಿಯನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಕರ್ತವ್ಯಕ್ಕೆ ಗೈರು ಹಾಜರಾತಿ ಹಾಗೂ ಇತರೆ ನೌಕರರನ್ನು ಹಾಜರಾಗದಂತೆ ಪ್ರಚೋದನೆ ಮಾಡಿದ ನೌಕರರನ್ನೂ ಸಸ್ಪೆಂಡ್ ಮಾಡಲಾಗಿದೆ.