ETV Bharat / state

ಪ್ರತಿದಿನ 25 ಸಾವಿರ ಟಿಕೆಟ್ ರೋಲ್ ತಯಾರು: ಹೇಗಿದೆ ಗೊತ್ತೇ ಕೆಎಸ್ಆರ್​ಟಿಸಿ ಮುದ್ರಣಾಲಯ?

1952ರಲ್ಲಿ ಆರಂಭವಾದ ಕೆಎಸ್ಆರ್​ಟಿಸಿ ಮುದ್ರಣಾಲಯ ಹೊಸ ಮೈಲಿಗಲ್ಲು ತಲುಪಿದೆ.

ಕೆಎಸ್ಆರ್​ಟಿಸಿ ಮುದ್ರಣಾಲಯ
ಕೆಎಸ್ಆರ್​ಟಿಸಿ ಮುದ್ರಣಾಲಯ
author img

By ETV Bharat Karnataka Team

Published : Dec 22, 2023, 7:03 PM IST

Updated : Dec 22, 2023, 9:47 PM IST

ಕೆಎಸ್ಆರ್​ಟಿಸಿ ಮುದ್ರಣಾಲಯದ ಹೊಸ ಮೈಲಿಗಲ್ಲು

ಬೆಂಗಳೂರು: ಮುದ್ರಣ ಸಾಮಗ್ರಿ ತಯಾರಿಕೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಸ್ವಾವಲಂಬನೆ ಸಾಧಿಸಿದೆ. ನಿಗಮಕ್ಕೆ ಬೇಕಾಗುವ ಮುದ್ರಣ ಸಾಮಗ್ರಿಗಳೊಂದಿಗೆ ಪ್ರತಿನಿತ್ಯ ಬೇಕಾಗುವ 25 ಸಾವಿರ ಟಿಕೆಟ್ ರೋಲ್​ಗಳನ್ನೂ ತಯಾರಿಸುತ್ತಿದೆ. ಸದ್ಯದಲ್ಲೇ ಇತರ ನಿಗಮಗಳಿಗೂ ಟಿಕೆಟ್ ರೋಲ್ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದು ಹೆಚ್ಚುವರಿ ಯಂತ್ರೋಪಕರಣಗಳ ಅಳವಡಿಕೆ ಕೆಲಸ ನಡೆಯುತ್ತಿದೆ.

ಕೆಎಸ್ಆರ್​ಟಿಸಿ ಕೇಂದ್ರ ಕಚೇರಿ, ಮುಖ್ಯ ಡಿಪೋಗಳು ಇರುವ ಬೆಂಗಳೂರಿನ ಶಾಂತಿನಗರದಲ್ಲಿ ಮುದ್ರಣಾಲಯವಿದೆ. ಸರ್ಕಾರದ ಅಗತ್ಯತೆಗಳನ್ನು ಪೂರೈಸಲು ಸರ್ಕಾರಿ ಮುದ್ರಣಾಲಯ ಸ್ಥಾಪಿಸಿರುವಂತೆ ಕೆಎಸ್ಆರ್​ಟಿಸಿ ಬಸ್​ಗಳು, ಡಿಪೋಗಳ ನಿರ್ವಹಣೆಗೆ ಬೇಕಾಗುವ ಮುದ್ರಣ ಸಾಮಗ್ರಿಗಳನ್ನು ಪೂರೈಸಿಕೊಳ್ಳಲು 1952ರಲ್ಲೇ ಮುದ್ರಣಾಲಯ ಆರಂಭಿಸಿದ್ದು, ಇದೀಗ ಈ ಮುದ್ರಣಾಲಯಕ್ಕೆ ಏಳು ದಶಕ ಪೂರ್ಣಗೊಂಡಿದ್ದರೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.

ಮುದ್ರಣಾಲಯದ ಒಳಗಡೆ ಕಾಲಿಟ್ಟರೆ ಮುದ್ರಣ ಲೋಕ ಅನಾವರಣಗೊಳ್ಳುತ್ತದೆ. ಕಣ್ಣಾಯಿಸಿದಲ್ಲೆಲ್ಲಾ ಮುದ್ರಣ ಯಂತ್ರಗಳು, ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಸಿಬ್ಬಂದಿ, ಮುದ್ರಣ ಕಾಗದದ ಬಂಡಲ್ ಗಳು, ಯಂತ್ರಗಳ ಸದ್ದು ಕೇಳುತ್ತದೆ. ಬಸ್ ಟಿಕೆಟ್​ ರೋಲ್​ಗಳು, ಬಸ್ ಪಾಸ್‌ಗಳು, ಟ್ರಿಪ್ ಶೀಟ್‌ಗಳು, ಗೇಟ್ ಪಾಸ್‌ಗಳು, ಪ್ರಮಾಣ ಪತ್ರಗಳು, ಲೆಕ್ಕಪುಸ್ತಕಗಳು ಸೇರಿದಂತೆ ಹಲವು ರೀತಿಯ ಮುದ್ರಣ ಸಾಮಗ್ರಿಗಳ ತಯಾರಿಕೆ ಕಣ್ಮುಂದೆ ಬರುತ್ತದೆ. ಯಾವುದೋ ಆಧುನಿಕ ಖಾಸಗಿ ಮುದ್ರಣಾಲಯ ಎನ್ನುವಂತೆ ಸಾರಿಗೆ ನಿಗಮದ ಪ್ರೆಸ್ ಕಂಡರೆ ಅಚ್ಚರಿಯೂ ಇಲ್ಲ.

ಕಾಲಕಾಲಕ್ಕೆ ಉನ್ನತೀಕರಣಗೊಳ್ಳುತ್ತಾ ಬಂದಿರುವ ಮುದ್ರಣಾಲಯ ಲಾಭದಲ್ಲಿಯೇ ನಡೆಯುತ್ತಿದೆ. ಟಿಕೆಟ್‌ಗಳು, ಪಾಸ್‌ಗಳು ಹಾಗೂ ಲೇಖನ ಸಾಮಗ್ರಿಗಳ ಮುದ್ರಣ ಹಾಗೂ ಸರಬರಾಜು ಕಾರ್ಯಕ್ಕಾಗಿ ಮುದ್ರಣಾಲಯವನ್ನು ಪ್ರಾರಂಭಿಸಲಾಗಿತ್ತು. ಬಳಿಕ ಟಿಕೆಟ್‌, ಇಟಿಎಂ ರೋಲ್‌ಗಳು, ಗಣಕ ಯಂತ್ರ ಲೇಖನ ಸಾಮಗ್ರಿ, 176 ಬಗೆಯ ಮುದ್ರಣ ಸಾಮಗ್ರಿಗಳು, ವಾರ್ಷಿಕ ಆಡಳಿತ ಮತ್ತು ಲೆಕ್ಕ ಪತ್ರ ಪುಸ್ತಕಗಳು, ಲೆಟರ್‌ ಹೆಡ್‌, ವಿಸಿಟಿಂಗ್‌ ಕಾರ್ಡ್‌, ಕರಪತ್ರಗಳು ಇತ್ಯಾದಿ ಮುದ್ರಣ ಕಾರ್ಯಗಳನ್ನು ನಡೆಸಲಾಗುತ್ತಿದೆ.

100ಕ್ಕೂ ಹೆಚ್ಚಿನ ಸಿಬ್ದಂದಿಯಿಂದ ನಿರ್ವಹಿಸಲ್ಪಡುತ್ತಿದ್ದ ಮುದ್ರಣಾಲಯ ಇಂದು 52 ಸಿಬ್ಬಂದಿಯಿಂದ ನಿರ್ವಹಿಸಲ್ಪಡುತ್ತಿದೆ. ಕನಿಷ್ಠ ಸಿಬ್ಬಂದಿ ಇದ್ದರೂ ಪಾಳಿಯನುಸಾರ ಕರ್ತವ್ಯ ನಿರ್ವಹಿಸುತ್ತಾ ನಿಗಮಗಳ ಮುದ್ರಣ ಸಾಮಗ್ರಿಗಳ ಅಗತ್ಯತೆ ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಸಿಬ್ಬಂದಿಯೂ ಮುದ್ರಣಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಂತ್ರಗಳ ನಿರ್ವಹಣೆ, ಮುದ್ರಣ ಕಾರ್ಯ ನಡೆಸುತ್ತಿದ್ದಾರೆ. ಪ್ರಿಂಟಿಂಗ್, ಬೈಂಡಿಂಗ್, ಪರ್ಪೆಷನ್ ಹೀಗೆ ಎಲ್ಲವೂ ಇಲ್ಲಿಯೇ ನಡೆಯುತ್ತದೆ. ಆಧುನಿಕ ಯಂತ್ರೋಪಕರಣಗಳಿಂದ ಹಿಡಿದು ಹಿಂದಿನ ತಲೆಮಾರಿನ ಯಂತ್ರಗಳೂ ಇಲ್ಲಿ ಬಳಕೆಯಲ್ಲಿರುವುದು ವಿಶೇಷ.

ಟಿಕೆಟಿಂಗ್ ವ್ಯವಸ್ಥೆ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದು, ಟಿಕೆಟ್ ವಿತರಣೆಗೆ ಇಟಿಎಂ ಯಂತ್ರಗಳನ್ನು ಬಳಸಲಾಗುತ್ತಿದೆ. ಕೆಎಸ್ಆರ್​ಟಿಸಿ ಒಂದು ನಿಗಮಕ್ಕೇ ಪ್ರತಿದಿನ 25 ಸಾವಿರ ಟಿಕೆಟ್ ರೋಲ್​ಗಳು ಬೇಕಾಗಲಿದೆ. ಅಷ್ಟೂ ರೋಲ್​ಗಳ ಮುದ್ರಣ ಕಾರ್ಯವನ್ನು ಪ್ರೆಸ್​ನಲ್ಲಿ ಮಾಡಲಾಗುತ್ತಿದೆ. ಖಾಸಗಿಯವರಿಂದ ರೋಲ್ ಖರೀದಿಸಿದರೆ ಪ್ರತಿ ರೋಲ್​ಗೆ 12-13 ರೂ. ಆಗಲಿದೆ. ಆದರೆ ತನ್ನದೇ ಮುದ್ರಣಾಲಯದಲ್ಲಿ ಟಿಕೆಟ್ ರೋಲ್ ಮುದ್ರಣಗೊಳ್ಳುತ್ತಿರುವುದರಿಂದ 9 ರೂ.ಗೆ ಪ್ರತಿ ರೋಲ್ ಲಭ್ಯವಾಗುತ್ತಿದೆ. ಒಂದು ರೋಲ್​ಗೆ ಕನಿಷ್ಠ 3 ರೂ. ಉಳಿತಾಯವಾಗಲಿದೆ. ಹಾಗಾಗಿ 75 ಸಾವಿರ ರೂ.ಗಳ ಉಳಿತಾಯವಾಗುತ್ತಿದೆ.

ಪ್ಲಾಸ್ಟಿಕ್ ಫ್ರೀ ಈ ಟಿಕೆಟ್ ರೋಲ್​ನ ವಿಶೇಷವಾಗಿದೆ. ರೋಲ್ ಅನ್ನು ಪ್ಲಾಸ್ಟಿಕ್​ಗೆ ಅಂಟಿಸಿ ಬಳಸಿ ಎಸೆಯುವ ಮಾದರಿ ಬದಲು ಮರು ಬಳಿಕೆ ಮಾಡುವ ರೀತಿ ಮಾಡಲಾಗಿದೆ. ಕೇವಲ ಯಾವ ನಿರ್ವಾಹಕ ಎಷ್ಟು ರೋಲ್ ಬಳಸಿದ್ದಾರೆ ಎನ್ನುವ ಲೆಕ್ಕ ಹಾಕಲು ರೋಲ್​ನ ಪ್ಲಾಸ್ಟಿಕ್ ಬಳಸಲಾಗುತ್ತದೆ. ರೋಲ್ ಖಾಲಿಯಾದ ನಂತರ ಅದರ ಪ್ಲಾಸ್ಟಿಕ್ ರೋಲ್ ನೀಡಿದರೆ ಡಿಪೋದಲ್ಲಿ ಹೊಸ ಪೇಪರ್ ರೋಲ್ ನೀಡಲಾಗುತ್ತದೆ. ಇದರಿಂದಾಗಿ ಎಷ್ಟು ರೋಲ್ ಬಳಕೆಯಾಗುತ್ತಿದೆ ಎನ್ನುವ ಲೆಕ್ಕ ಸಿಗುತ್ತದೆ. ಈ ರೀತಿ ಪ್ಲಾಸ್ಟಿಕ್ ಫ್ರೀ ರೋಲ್ ಸದ್ಯ ಕೆಎಸ್ಆರ್​ಟಿಸಿಯಲ್ಲಿ ಮಾತ್ರ ತಯಾರಿಸಲಾಗುತ್ತಿದೆ.

ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಪ್ರತಿಕ್ರಿಯೆ: ಪ್ರೆಸ್​ನಲ್ಲಿ ಟಿಕೆಟ್ ರೋಲ್ ಹೊರತುಪಡಿಸಿ ಇತರ ಎಲ್ಲಾ ಮುದ್ರಣ ಸಾಮಗ್ರಿಗಳನ್ನೂ ಕೆಎಸ್ಆರ್​ಟಿಸಿಗೆ ಮಾತ್ರವಲ್ಲದೆ ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ವಾಯುವ್ಯ ಸಾರಿಗೆ ನಿಗಮಕ್ಕೂ ಪೂರೈಕೆ ಮಾಡಲಾಗುತ್ತಿದೆ. ನಾಲ್ಕೂ ನಿಗಮಕ್ಕೆ ಬೇಕಾದಷ್ಟು ಪ್ರಮಾಣದ ಮುದ್ರಣ ಸಾಮಗ್ರಿಗಳ ಮುದ್ರಣ ಕಾರ್ಯ ನಡೆಯುತ್ತಿದೆ. ಆದರೆ ನಾಲ್ಕೂ ನಿಗಮಕ್ಕೆ ಪ್ರತಿ ದಿನ 70 ಸಾವಿರ ಟಿಕೆಟ್ ರೋಲ್​ಗಳ ಅಗತ್ಯವಿದೆ.

ಆದರೆ ಅಷ್ಟು ಪ್ರಮಾಣದ ರೋಲ್​ಗಳ ತಯಾರಿಕೆಗೆ ಬೇಕಾದ ಯಂತ್ರೋಪಕರಣಗಳು ಲಭ್ಯವಿಲ್ಲದ ಕಾರಣ ಕೆಎಸ್ಆರ್​ಟಿಸಿಗೆ ಬೇಕಾದ 25 ಸಾವಿರ ರೋಲ್‌ಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಇತರ ನಿಗಮಗಳಿಗೂ ಟಿಕೆಟ್ ರೋಲ್ ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹೊಸ ಯಂತ್ರೋಪಕರಣಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಹೊಸ ಯಂತ್ರೋಪಕರಣಗಳ ಅಳವಡಿಕೆಯಾಗಲಿದ್ದು, ನಂತರ ಪ್ರತಿ ದಿನ ಟಿಕೆಟ್ ರೋಲ್ ಗಳ ತಯಾರಿಕೆ ಪ್ರಮಾಣ 25 ಸಾವಿರದಿಂದ 70 ಸಾವಿರಕ್ಕೆ ಹೆಚ್ಚಳ ಮಾಡಲಿದ್ದು, ಎಲ್ಲಾ ನಿಗಮಕ್ಕೂ ಇಲ್ಲಿಂದಲೇ ಟಿಕೆಟ್ ರೋಲ್ ಸರಬರಾಜು ಮಾಡಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದರು.

ಸಾರಿಗೆ ಸಚಿವರು ಹೇಳಿದ್ದೇನು?: ಮುದ್ರಣಾಲಯವು ನಾಲ್ಕೂ ನಿಗಮಗಳಿಗೆ ಮುದ್ರಣ ಸಾಮಗ್ರಿ ಸರಬರಾಜು ಮಾಡುತ್ತಿದೆ. ಪ್ರತಿ ವರ್ಷ ರೂ.15 ಕೋಟಿಗಳ ವಹಿವಾಟು ನಿರ್ವಹಿಸುತ್ತಿದ್ದು, 5 ಕೋಟಿಯಷ್ಟು ಲಾಭಗಳಿಸುತ್ತಿದೆ. ಸಾರಿಗೆ ನಿಗಮಗಳು ಲಾಭದತ್ತ ಈಗ ತಿರುಗುತ್ತಿದ್ದರೂ ನಿಗಮದ ಮುದ್ರಣಾಲಯ ಮಾತ್ರ ಲಾಭದಲ್ಲಿಯೇ ನಡೆಯುತ್ತಿದೆ. ಪ್ರಸ್ತುತ ಮುದ್ರಣಾಲಯವನ್ನು 39.83 ಲಕ್ಷಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದ್ದು, ಹೊಸ ಯಂತ್ರಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಹೊಸ ಯಂತ್ರಗಳ ಬರುತ್ತಿದ್ದಂತೆ ಮುದ್ರಣ ಕಾರ್ಯ ಮತ್ತಷ್ಟು ವೇಗವಾಗಿ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಕಾಲುವೆ,ಕೆರೆ, ಜಲಾಶಯಗಳಿಂದ ಒದಗಿಸುವ ನೀರಿಗೆ ಪ್ರತಿ‌ ಎಂಸಿ‌ಎಫ್​ಟಿಗೆ 3 ಲಕ್ಷ ರೂ. ರಾಜಧನ ನಿಗದಿ

Last Updated : Dec 22, 2023, 9:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.