ಬೆಂಗಳೂರು : ಝಿಕಾ ವೈರಸ್ ಆತಂಕದಲ್ಲಿರುವ ಕೇರಳ ರಾಜ್ಯದ ವಿವಿಧ ಭಾಗಗಳಿಗೆ ಇಂದಿನಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಪುನಾರಂಭಗೊಳ್ಳಲಿದ್ದು, ಜನರಿಗೆ ಸಂತಸದ ನಡುವೆ ಆಂತಕ ಶರುವಾಗಿದೆ. ಇಂದು ರಾತ್ರಿ ಕೇರಳದ ವಿವಿಧ ಜಿಲ್ಲೆಗಳಿಗೆ ಬಸ್ ಸಂಚಾರ ಪುನಾರಂಭವಾಗಲಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರು ಸೇರಿದಂತೆ ಹಲವೆಡೆಯಿಂದ ಬಸ್ಗಳ ಬಸ್ಗಳು ಸಂಚರಿಸಲಿವೆ. ಆದರೆ, ಕೇರಳದಲ್ಲಿ ಝಿಕಾ ಎಂಬ ಹೊಸ ರೋಗ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿದ ಕೋವಿಡ್ ನೆಗೆಟಿವ್ ರಿಪೋರ್ಟ್ ತರಬೇಕು ಅಥವಾ ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ತರಬೇಕು ಎಂದು ಸೂಚಿಸಲಾಗಿದೆ.
ಜುಲೈ 7 ರಂದು ಕೇರಳ ರಾಜ್ಯಕ್ಕೆ ಬಸ್ ಸಂಚಾರ ಪುನಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿತ್ತು. ಜುಲೈ 12 ರಿಂದ (ಇಂದಿನಿಂದ) ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರಿನಿಂದ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಸಂಸ್ಥೆ ತಿಳಿಸಿತ್ತು.
ಶಿಕ್ಷಣ, ವ್ಯವಹಾರ ಇನ್ನಿತರೆ ಕಾರಣಕ್ಕೆ ನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರು 15 ದಿನಗಳಿಗೊಮ್ಮೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು ಎಂದು ಕೆಎಸ್ಆರ್ಟಿಸಿ ಸೂಚಿಸಿದೆ. ಜೊತೆಗೆ ಇತರ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.