ಬೆಂಗಳೂರು: ಅಂತೂ ಸರ್ಕಾರ ಮತ್ತು ಸಾರಿಗೆ ನೌಕರರ ಫೈಟ್ ಮುಗೀತು ಎಂದು ಸಾರ್ವಜನಿಕರು ನಿಟ್ಟುಸಿರು ಬಿಡುತ್ತಿದ್ದ ಹಾಗೆ ಮತ್ತೆ ಎಲ್ಲ ಬಸ್‌ಗಳು ಡಿಪೋ ಕಡೆಗೆ ಯೂಟರ್ನ್ ಹೊಡೆದಿವೆ.
ಎರಡು ದಿನಗಳಿಂದ ನಗರದಲ್ಲಿ ಟ್ರೈನಿ ಚಾಲಕರಿಂದ ಬೆರಳೆಣಿಕೆಯಷ್ಟು ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿತ್ತು. ಇಂದು ಮುಂಜಾನೆಯಿಂದ 124 ಕೆಎಸ್‌ಆರ್‌ಟಿಸಿ ಬಸ್ಸುಗಳು ರಾಜ್ಯದ ವಿವಿಧ ಸ್ಥಳಗಳಿಗೆ ಸಂಚರಿಸಿದ್ದವು. ಬಿಎಂಟಿಸಿಯ 93 ಬಸ್ಸುಗಳು ನಗರದೊಳಗೆ ಸಂಚಾರ ಮಾಡಿದ್ದವು. ಇದೀಗ ಮತ್ತೆ ಸಾರಿಗೆ ಮುಖಂಡರ ಹೇಳಿಕೆ ಗೊಂದಲ ಸೃಷ್ಟಿಸಿದೆ.