ETV Bharat / state

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷೆಯಂದು ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ - ksrtc free bus service

ಇದೇ ಜುಲೈ 19 ಹಾಗೂ 22 ರಂದು ನಡೆಯಲಿರೋ ಎಸ್​ಎಸ್​​ಎಲ್​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಉಚಿತ ಬಸ್​ ಪ್ರಯಾಣ ಸೌಲಭ್ಯ ನೀಡುವುದಾಗಿ ಕೆಎಸ್​ಆರ್​​ಟಿಸಿ ಹಾಗೂ ಬಿಎಂಟಿಸಿ ಎರಡೂ ನಿಗಮಗಳು ಘೋಷಿಸಿವೆ.

ksrtc and bmtc to provide free bus service for sslc students
ಪರೀಕ್ಷೆ
author img

By

Published : Jul 13, 2021, 4:48 PM IST

ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ಈ ಬಾರಿಯ ಎಸ್​ಎಸ್​​ಎಲ್​ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇದೇ ಜುಲೈ 19 ಹಾಗೂ 22 ರಂದು ಪರೀಕ್ಷೆಗಳು ನಡೆಯಲಿವೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​​ಟಿಸಿ) ಆದೇಶ ನೀಡಿತ್ತು. ಈಗ ಬಿಎಂಟಿಸಿ ಕೂಡ ಅನುಮತಿ ನೀಡಿದ್ದು ಈ ಬಗ್ಗೆ ಎರಡು ನಿಗಮಗಳು ಆದೇಶ ಹೊರಡಿಸಿದಂತಾಗಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಮಕ್ಕಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು ವಾಪಸ್ ಬರಲು ಈ ಅನುಮತಿ ನೀಡಲಾಗಿದೆ. ರಸ್ತೆ ಮಧ್ಯೆದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ ಅಲ್ಲಿ ಕೋರಿಕೆಯ ಮೇರೆಗೆ ನಿಲುಗಡೆಗೂ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಡ್ಡಾಯವಾಗಿ ಪರೀಕ್ಷೆ ಪ್ರವೇಶ ಪತ್ರ ಹೊಂದಿರಬೇಕು ಎಂದು ನಿರ್ದೇಶನ ನೀಡಲಾಗಿದೆ.

ಕೆಎಸ್​ಆರ್​​ಟಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಈಗಾಗಲೇ ಆದೇಶ ಹೊರಡಿಸಿದೆ. ಹಾಗೆಯೇ ಬಿಎಂಟಿಸಿ ಬೆಂಗಳೂರು ನಗರದ ಒಳಗೆ ಉಚಿತವಾಗಿ ಸಂಚರಿಸಲು ಅವಕಾಶ ನೀಡಿದ್ದು, ಹಾಲ್ ಟಿಕೆಟ್ ತೋರಿಸುವುದು ಕಡ್ಡಾಯ.

ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಉಚಿತ ಪ್ರಯಾಣವನ್ನು ಅನುಮತಿಸಲು ಸಾರಿಗೆ ಸಂಸ್ಥೆಗಳು ನಿಗಮದ ಎಲ್ಲಾ ಚಾಲಕ/ನಿರ್ವಾಹಕರುಗಳಿಗೆ ಸೂಚಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.