ETV Bharat / state

ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಹಕ್ಕಿಲ್ಲ: ಗೃಹ ಇಲಾಖೆ ನಡೆಗೆ ವಿರೋಧ - KSP Amendment Rules 2022

ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ನಡವಳಿಕೆ ನಿಯಮಕ್ಕೆ ತಿದ್ದುಪಡಿ ತಂದಿರುವ ಗೃಹ ಇಲಾಖೆಯ ನಡೆಗೆ ಪೊಲೀಸ್ ಹಾಗೂ ಸಾರ್ವಜನಿಕ ವಲಯಗಳಿಂದ ವಿರೋಧ ವ್ಯಕ್ತವಾಗಿದೆ.

Representative image
ಸಾಂದರ್ಭಿಕ ಚಿತ್ರ
author img

By

Published : Sep 20, 2022, 7:11 AM IST

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ನಡವಳಿಕೆ ನಿಯಮಗಳಿಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ವಿರುದ್ಧ ಭಾರಿ ವಿರೋಧ‌ ವ್ಯಕ್ತವಾಗಿದೆ. ಈ ತಿದ್ದುಪಡಿ ಶಿಕ್ಷೆಯನ್ನು ಪ್ರಶ್ನಿಸುವ ಹಕ್ಕನ್ನೇ‌‌ ಮೊಟಕುಗೊಳಿಸುವ ಹುನ್ನಾರವಾಗಿದೆ ಎಂದು ಪೊಲೀಸರಿಂದಲೇ ದೂರುಗಳು ಪತ್ರಗಳ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಅಂಚೆ ಮೂಲಕ ಬರುತ್ತಿವೆ.

police letter to home dept
ಪೊಲೀಸರಿಂದ ಗೃಹ ಇಲಾಖೆಗೆ ದೂರು ಪತ್ರ

ಕಿರಿಯ ಪೊಲೀಸರು ಭ್ರಷ್ಟ್ರಚಾರ ಆಥವಾ ಕಾನೂನುಬಾಹಿರ ಚಟುವಟಿಕೆ ತೊಡಗಿಸಿಕೊಳ್ಳುವುದು, ಶಿಸ್ತು ಉಲ್ಲಂಘಿಸುವುದು ಕಂಡುಬಂದರೆ ಪೊಲೀಸ್ ಶಿಸ್ತು ಪ್ರಾಧಿಕಾರ ವಿಧಿಸುವ ಶಿಕ್ಷೆಯೇ ಅಂತಿಮ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ತಿದ್ದುಪಡಿ ನಿಯಮದಲ್ಲಿ ಹೇಳಲಾಗಿದೆ. ಆಕ್ಷೇಪಣೆ ಸಲ್ಲಿಸಲು ಸರ್ಕಾರ 15 ದಿನಗಳ ಕಾಲ ಗಡುವು ನೀಡಿದೆ.

police letter to home dept
ಪೊಲೀಸರಿಂದ ಗೃಹ ಇಲಾಖೆಗೆ ದೂರು ಪತ್ರ

ಇದಕ್ಕೆ ಪೊಲೀಸ್ ಹಾಗೂ ಸಾರ್ವಜನಿಕ ವಲಯಗಳಿಂದ ವಿರೋಧ ವ್ಯಕ್ತವಾಗಿದೆ. ಮೇಲ್ಮನವಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಹತ್ತಾರು ಪತ್ರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸ್ಪೀಡ್ ಪೋಸ್ಟ್ ಮೂಲಕ ಪೋಸ್ಟ್ ಮಾಡುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

police letter to home dept
ಪೊಲೀಸರಿಂದ ಗೃಹ ಇಲಾಖೆಗೆ ದೂರು ಪತ್ರ

ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ತಿಳಿದೋ ತಿಳಿಯದೇ ಮಾಡುವ ತಪ್ಪಿಗೆ ಶಿಸ್ತು ಪ್ರಾಧಿಕಾರ ನೀಡುವ ಶಿಕ್ಷೆಯೇ ಅಂತಿಮ ಆಗಕೂಡದು.‌ ಅಪರಾಧವೆಸಗುವ ಆರೋಪಿಗಳಿಗೆ ಕಾನೂನಿನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಆದರೆ ಕಾನೂನು ರಕ್ಷಕರಾದ ಪೊಲೀಸರಿಗೆ ಮೇಲ್ಮನವಿ ಅವಕಾಶವಿಲ್ಲದಿರುವುದು ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಪೊಲೀಸರಿಗಿಲ್ಲ ಶಿಕ್ಷೆ ಪ್ರಶ್ನಿಸುವ ಹಕ್ಕು: ಶಿಸ್ತು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವ ಅಧಿಕಾರ ಮೊಟಕು?!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.