ETV Bharat / state

ಸೆ.27ರಂದು ಕೆ-ಸೆಟ್ ಪರೀಕ್ಷೆ ; 28 ಪ್ರಾಧ್ಯಾಪಕರು ಪರಿವೀಕ್ಷಕರಾಗಿ ನೇಮಕ - ಕೆ-ಸೆಟ್ ಪರೀಕ್ಷೆ

ಪರೀಕ್ಷೆಯು ಸುಗಮವಾಗಿ ನಡೆಯಲು ಬೆಂಗಳೂರು ವಿವಿ ಕುಲಸಚಿವರು ವಿಶ್ವವಿದ್ಯಾಲಯದ 28 ಪ್ರಾಧ್ಯಾಪಕರನ್ನು ಸಂಬಂಧಿಸಿದ ಕಾಲೇಜುಗಳ ಪರಿವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ..

KSET exam
ಕೆ-ಸೆಟ್ ಪರೀಕ್ಷೆ
author img

By

Published : Sep 25, 2020, 9:18 PM IST

ಬೆಂಗಳೂರು : ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಅನುಮತಿಯೊಂದಿಗೆ ಕೆ-ಸೆಟ್‌ ಪರೀಕ್ಷೆಯನ್ನು ಸೆಪ್ಟೆಂಬರ್ 27ರಂದು ಕರ್ನಾಟಕದ 10 ವಿಶ್ವವಿದ್ಯಾಲಯಗಳ ಸಹಕಾರದೊಂದಿಗೆ ನಡೆಸಲಿದೆ.

ಬೆಂಗಳೂರು ವಿಶ್ವವಿದ್ಯಾಲಯ ನೋಡಲ್‌ ಕೇಂದ್ರದಲ್ಲಿ ಈ ಬಾರಿ 18,741 ವಿದ್ಯಾರ್ಥಿಗಳು ಕೆ-ಸೆಟ್‌ ಪರೀಕ್ಷೆಯನ್ನು 41 ವಿಷಯಗಳಲ್ಲಿ ತೆಗೆದುಕೊಂಡಿದ್ದಾರೆ. ಒಟ್ಟು ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 28 ಕಾಲೇಜುಗಳನ್ನು ಪರೀಕ್ಷಾ ಉಪಕೇಂದ್ರಗಳಾಗಿ ತೆಗೆದುಕೊಳ್ಳಲಾಗಿದೆ.

ಬೆಂಗಳೂರು ನೋಡಲ್‌ ಕೇಂದ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ ಆರ್ ವೇಣುಗೋಪಾಲ್‌ ಅವರ ಮಾರ್ಗದರ್ಶನದಲ್ಲಿ ಕೆ-ಸೆಟ್‌ ಪರೀಕ್ಷೆ ಸಿದ್ಧತೆಯನ್ನು ನೋಡಲ್‌ ಅಧಿಕಾರಿಗಳಾದ ಡಾ.ಸಿ ನಾಗಭೂಷಣರು ಸಿದ್ಧತೆ ಮಾಡಿಕೊಂಡಿದ್ದಾರೆ. ಪರೀಕ್ಷೆಯು ಸುಗಮವಾಗಿ ನಡೆಯಲು ಬೆಂಗಳೂರು ವಿವಿ ಕುಲಸಚಿವರು ವಿಶ್ವವಿದ್ಯಾಲಯದ 28 ಪ್ರಾಧ್ಯಾಪಕರನ್ನು ಸಂಬಂಧಿಸಿದ ಕಾಲೇಜುಗಳ ಪರಿವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ.

ಕೋವಿಡ್-19 ಮುಂಜಾಗ್ರತೆಯ ಕ್ರಮವಾಗಿ ಈಗಾಗಲೇ 28 ಕಾಲೇಜುಗಳ ಪ್ರಾಚಾರ್ಯರುಗಳೊಂದಿಗೆ ಪೂರ್ವಾಭಾವಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೋವಿಡ್‌-19 ಸಲುವಾಗಿ ಅನುಸರಿಸಬೇಕಾದ ಮುಂಜಾಗ್ರತಾ ಮಾರ್ಗದರ್ಶನ, ಸೂಚನೆಗಳನ್ನು ಚರ್ಚಿಸಿ, ಅದರಂತೆ ಪರೀಕ್ಷಾ ದಿವಸದಂದು ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಿಕೆ, ಸ್ಯಾನಿಟೈಸೇಶನ್‌ ಮುಂತಾದ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡು ಕೆ-ಸೆಟ್‌ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸೂಚಿಸಲಾಗಿದೆ.

ಕೆ-ಸೆಟ್‌ ಪರೀಕ್ಷೆಗೆ ಸಂಬಂಧಪಟ್ಟ ಹಾಗೆ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇದ್ದಲ್ಲಿ ಕೆಳಕಂಡ ಸಹಾಯವಾಣಿಯನ್ನು ಸಂಪರ್ಕಿಸಲು ಕೋರಲಾಗಿದೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 7022229110, 9036885734, 9986770148, 9448104615, 9845637247.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.