ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಮೂರನೇ ದಿನಕ್ಕೆ ಜನ ಸಾಗರವೇ ಹರಿದು ಬಂದಿತ್ತು. ರಾಜ್ಯದ ಮೂಲೆಮೂಲೆಗಳಿಂದ ಕೃಷಿಕರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಸಾರ್ವಜನಿಕರು ಕೃಷಿಮೇಳದಲ್ಲಿ ಭಾಗವಹಿಸಿದರು.
ಬೆಳಗ್ಗೆಯೇ ಕೃಷಿಮೇಳಕ್ಕೆ ಆಗಮಿಸಿ, ಬಣ್ಣಹಚ್ಚಿ ನಿಂತಿದ್ದ ಗಾಂಧೀ ತಾತನ ಬಳಿ ಮಕ್ಕಳು ಫೋಟೋ ತೆಗಿಸಿಕೊಂಡರು. ಕೃಷಿ ಪದ್ಧತಿಯ ವಿವಿಧ ವಿಧಾನಗಳನ್ನು, ಕೃಷಿ ಮಳಿಗೆಗಳನ್ನು ವೀಕ್ಷಿಸಿದರು. ಈ ನಡುವೆ ಬೆಳಗ್ಗೆ ಸಭಾ ಕಾರ್ಯಕ್ರಮದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಕಣ್ತುಂಬಿಕೊಂಡರು. ಮಧ್ಯಾಹ್ನ ಮುದ್ದೆ ಊಟ, ಅನ್ನ ಸಾರು, ಕೇಸರಿಬಾತ್ ಸವಿದರು. ಜೊತೆಗೆ ದೀಪಾವಳಿಯ ವಿಶೇಷವಾಗಿ ಗೃಹಬಳಕೆ ವಸ್ತುಗಳನ್ನೂ ಖರೀದಿಸಿದರು..
ಒಟ್ಟಿನಲ್ಲಿ ನಾಲ್ಕನೇ ಶನಿವಾರವಾರ ರಜೆ ಇರುವದರಿಂದ ಹೆಚ್ಚಿನ ಜನ ಕೃಷಿಮೇಳಕ್ಕೆ ಬಂದು ಹೊಸ ಕೃಷಿ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡರು.