ದೇವನಹಳ್ಳಿ: ಕೆಆರ್ಎಸ್ ಡ್ಯಾಂ ಬಗ್ಗೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್ ಅಶೋಕ್ , ಕೆಆರ್ಎಸ್ ಡ್ಯಾಂ ಸುರಕ್ಷಿತವಾಗಿದೆ. ಈ ಹಿಂದೆಯೇ ರಿಪೇರಿ ಕೆಲಸ ಮಾಡಲಾಗಿದೆ. ಈ ಬಗ್ಗೆ ನಾನು ಸೇರಿದಂತೆ ಗಣಿ ಸಚಿವರು, ಜಿಲ್ಲಾಧಿಕಾರಿಗಳು, ನೀರಾವರಿ ಇಂಜಿನಿಯರ್ ಸ್ವಷ್ಟಪಡಿಸಿದ್ದಾರೆಂದು ಹೇಳಿದರು.
ರಾಜ್ಯಕ್ಕೆ ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮನವಾಗಿದ್ದು, ಸರ್ಕಾರದ ಪರವಾಗಿ ಅವರಿಗೆ ಸ್ವಾಗತ ಕೊರಲು ಕಂದಾಯ ಸಚಿವ ಆರ್ ಅಶೋಕ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದೇ ವೇಳೆ ಕೆಆರ್ಎಸ್ ಡ್ಯಾಂ ಬಿರುಕು ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ಈ ಹಿಂದೆಯೆ ಡ್ಯಾಂ ಚೆನ್ನಾಗಿದೆ ಅಂತ ಹೇಳಿದೆ. ಆದ್ರು ಪದೇ ಪದೇ ಕೆಲ ಮಾಧ್ಯಮಗಳಲ್ಲಿ ಡ್ಯಾಂ ವಿಚಾರದಲ್ಲಿ ಸರ್ಕಾರ ಮೌನವಾಗಿದೆ ಅಂತ ತೋರಿಸುತ್ತಿದ್ದಾರೆ. ನಾನು ಸೇರಿದಂತೆ ಗಣಿ ಸಚಿವರು ಜಿಲ್ಲಾಧಿಕಾರಿಗಳು ನೀರಾವರಿ ಇಂಜಿನಿಯರ್ಗಳು ಡ್ಯಾಂ ಸುರಕ್ಷಿತವಾಗಿದೆ ಎಂದೂ ಸ್ವಷ್ಟ ಪಡಿಸುತ್ತಿದ್ದೇವೆ ಎಂದರು.
ಈ ಹಿಂದೆಯೇ ಬೇಕಾದ ರಿಪೇರಿ ಎಲ್ಲ ಮಾಡಿದೆ, ಅದನ್ನ ರಾಜಕೀಯ ದಾಳವಾಗಿ ಮಾಡಬಾರದು. ಯಾರಿಗೂ ನೋವುಂಟು ಮಾಡುವ ಕೆಲಸ ಮಾಡಬಾರದು, ಮೈಸೂರು ಮಂಡ್ಯ ಬೆಂಗಳೂರಿಗೆ ಅದು ಜೀವನದಿಯಾಗಿದೆ. ಈ ಹಿಂದಿನ ಲೋಕಸಭಾ ಚುನಾವಣೆಯ ರಿಪ್ಲೆಕ್ಷನ್ ನಿಂದ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಡ್ಯಾಂ ಬಗ್ಗೆ ಇಬ್ಬರು ಮಾತನಾಡಬಾರದು ಅಂತ ನಾನು ಇಬ್ಬರಿಗೂ ಮನವಿ ಮಾಡ್ತೀನಿ. ಕೆಆರ್ಎಸ್ ಡ್ಯಾಂ ಬಗ್ಗೆ ಏನೇ ಇದ್ರು ಸರ್ಕಾರದ ಬಳಿ ಬಂದು ಹೇಳಲಿ, ಅವರಿಬ್ಬರ ಈ ಹೇಳಿಕೆಗಳು ಕೆಆರ್ಎಸ್ ಡ್ಯಾಂಗೆ ಸಂಬಂಧಿಸಿದಲ್ಲ. ಹಿಂದೆ ಬೇರೆನೇ ಏನೋ ಇದೆ, ಇದನ್ನ ಇಲ್ಲಿಗೆ ಮುಕ್ತಾಯ ಮಾಡೋದು ಒಳ್ಳೆದು ಅಂತ ತಾವು ವಿನಂತಿ ಮಾಡುವುದಾಗಿ ಹೇಳಿದರು.