ETV Bharat / state

ಬೆಂಗಳೂರಿನಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ : ಕೋವಿಡ್​ನಿಂದಾಗಿ ಇಳಿಮುಖವಾದ ಭಕ್ತರ ಸಂಖ್ಯೆ - krishna Janmashtami celebration

ಕೊರೊನಾ ಮೂರನೆಯ ಅಲೆಯ ಭೀತಿಯ ನಡುವೆಯೂ ಜನರು ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದ್ದಾರೆ. ಆನ್​ಲೈನ್​ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವ್ರತಾಚರಣೆ ಪೂರ್ಣಗೊಳಿಸಲು ಇದು ಸಹಕಾರಿಯಾಗಿದೆ ಎನ್ನುತ್ತಾರೆ ಭಕ್ತರು..

krishna-janmashtami
ಶ್ರೀಕೃಷ್ಣ ಜನ್ಮಾಷ್ಟಮಿ
author img

By

Published : Aug 30, 2021, 5:47 PM IST

ಬೆಂಗಳೂರು : ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದಲ್ಲಿನ ಹಲವು ಕೃಷ್ಣ ದೇಗುಲಗಳಲ್ಲಿ ಹಾಗೂ ಇಸ್ಕಾನ್ ದೇವಸ್ಥಾನಗಳಲ್ಲಿ ಸಂಭ್ರಮ ಕಂಡು ಬಂತು. ಆದರೆ, ಕೋವಿಡ್ 3ನೇ ಅಲೆ ಭೀತಿಯ ಹಿನ್ನೆಲೆ ಜನರು ಆನ್​ಲೈನ್​ ದರ್ಶನದ ಮೊರೆ ಹೋಗಿದ್ದರಿಂದ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.

ಇಸ್ಕಾನ್​ ದೇವಾಲಯದಲ್ಲಿ ಕಂಡು ಬಂದ ಶ್ರೀಕೃಷ್ಣ ಜನ್ಮಾಷ್ಟಮಿ

ಭಗವಾನ್​ ವಿಷ್ಣುವಿನ ಅವತಾರಗಳಲ್ಲಿ ಒಂದಾಗಿರುವ ಕೃಷ್ಣಾವತಾರವು ಜಗತ್ತಿನ ಆಗು-ಹೋಗುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶ್ರೀಕೃಷ್ಣನ ಜನ್ಮದಿನದ ಆಚರಣೆ ಪ್ರತಿವರ್ಷ ಭಾದ್ರಪದ ತಿಂಗಳಿನ ಕೃಷ್ಣ ಪಕ್ಷದ 8ನೇ ದಿನ ನಡೆಯುತ್ತದೆ. ಕೃಷ್ಣ, ಪುರಾಣಗಳಲ್ಲಿ ವಿಭಿನ್ನ ಅವತಾರಗಳಲ್ಲಿ ಕಂಡು ಬಂದಿದ್ದಾನೆ ಎಂಬ ಉಲ್ಲೇಖವಿದೆ.

ಜನರನ್ನು, ಆತನನ್ನು ನಂಬಿದ ಭಕ್ತರನ್ನು ವಿಧವಿಧವಾಗಿ ರಕ್ಷಣೆ ಮಾಡಿದ್ದಾನೆ. ಆದ್ದರಿಂದಲೇ ಆತನ ಜನ್ಮದಿನ ಅಷ್ಟಮಿಯನ್ನು ಅಚ್ಚುಕಟ್ಟಾದ ವಿಧಿ-ವಿಧಾನಗಳ ಮೂಲಕ ಆಚರಣೆ ಮಾಡಲಾಗುತ್ತಿದೆ. ಹರೇ ಕೃಷ್ಣ ಜಪ ಮಾಡಿದರೆ ಕಷ್ಟ-ಕಾರ್ಪಣ್ಯಗಳು ದೂರವಾಗುತ್ತದೆ ಎನ್ನುತ್ತಾರೆ ರಾಧಾ ಪತಿ ಮಾಧವ್ ದಾಸ್.

ಭಕ್ತರ ಸಂಖ್ಯೆ ಇಳಿಕೆ : ಕರ್ನಾಟಕದಲ್ಲಿ ಕೃಷ್ಣಾಷ್ಟಮಿ ಆಚರಣೆ ಅಂದರೆ ಮೊದಲಿಗೆ ನೆನಪಾಗುವುದು ಬೆಂಗಳೂರಿನ ಇಸ್ಕಾನ್​ ರಾಧಾಕೃಷ್ಣ ದೇವಾಲಯ. ಆದರೆ, ಈ ಬಾರಿ ಕೊರೊನಾದಿಂದ ಈ ಆಚರಣೆಗೆ ಕಡಿವಾಣ ಬಿದ್ದಿದೆ. ಭಕ್ತರ ಸಂಖ್ಯೆ ಗಣನೀಯವಾಗಿ ಇಳಿದಿದೆ ಹಾಗೂ ನಾವು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಸಂಖ್ಯೆಯನ್ನು ನಿಯಂತ್ರಿಸಿದ್ದೇವೆ ಎಂದು ಇಸ್ಕಾನ್ ಸ್ವಯಂ ಸೇವಕರು ತಿಳಿಸುತ್ತಾರೆ.

ದೇವರ ದರ್ಶನಕ್ಕೆ ಅವಕಾಶ : ಕೊರೊನಾ ಮೂರನೆಯ ಅಲೆಯ ಭೀತಿಯ ನಡುವೆಯೂ ಜನರು ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದ್ದಾರೆ. ಆನ್​ಲೈನ್​ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವ್ರತಾಚರಣೆ ಪೂರ್ಣಗೊಳಿಸಲು ಇದು ಸಹಕಾರಿಯಾಗಿದೆ ಎನ್ನುತ್ತಾರೆ ಭಕ್ತರು.

ಓದಿ: SSLC ಪೂರಕ ಪರೀಕ್ಷೆ : ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ವಿಸ್ತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.