ಬೆಂಗಳೂರು: ಜಿಕೆವಿಕೆ ಕೃಷಿ ವಿವಿಯಲ್ಲಿ ನಡೀತಿರೋ ಕೃಷಿ ಮೇಳದಲ್ಲಿ ಹೆಲಿಕಾಪ್ಟರ್ ಶಬ್ದ ಮಾಡುತ್ತಾ ಬೆಳೆಗಳ ಮೇಲೆ ಹಾರಾಡುತ್ತಿದ್ದ ಡ್ರೋನ್, ಕೃಷಿ ವಿವಿ ರೈತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಅಂದ ಹಾಗೆ ಇದು ಡ್ರೋನ್ ಮಾಂಟೆಡ್ ಸ್ಪ್ರೇಯರ್, ಅಂದ್ರೆ ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿರುವ ಔಷಧಿ ಸಿಂಪಡನೆ ಮಾಡುವ ಡ್ರೋನ್. ಇದರಲ್ಲಿ ಇಪ್ಪತ್ತು ಲೀಟರ್ ಔಷಧಿ ತುಂಬುವ ಸಾಮರ್ಥ್ಯ ಇದ್ದು, ಇದರ ಬೆಲೆ ₹ 19 ಲಕ್ಷ. ವಿಜ್ಞಾನ ವಿವಿ ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ವಿಜ್ಞಾನಿಗಳು 2 ವರ್ಷಗಳ ಕಾಲ ಅಧ್ಯಯನ ಮಾಡಿ ಈ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.
ಡಾ.ಎಂ ವೀರಣ್ಣಗೌಡ, ಡಾ. ಕಿ ವಿ ಪ್ರಕಾಶ್, ಡಾ.ಮರಿಯಪ್ಪ, ಇಂಜಿನಿಯರ್ ಮುರುಳಿ, ಉದಯಕುಮಾರ್ ಹಾಗೂ ನರೇಶ್ ಅವರ ತಂಡ ಇದನ್ನು ಅಭಿವೃದ್ಧಿ ಪಡಿಸಿದೆ. ತೋಟಗಾರಿಕಾ ಬೆಳೆಗಳಾದ ಮಾವಿನತೋಟ, ಗದ್ದೆ, ಎತ್ತರದ ಬೆಳೆಗಳಿಗೆ ಔಷಧಿ ಸಿಂಪಡಿಸಲು ಇದು ಹೇಳಿಮಾಡಿಸಿದ ಸಾಧನ. ಇದು ಬ್ಯಾಟರಿ ಚಾಲಿತವಾಗಿದ್ದು, ಒಂದು ಬಾರಿಗೆ 45 ನಿಮಿಷ ಹಾರಾಡಲಿದ್ದು ಐದಾರು ಎಕರೆಗೆ ಔಷಧ ಸಿಂಪಡಿಸಲಿದೆ ಎಂದು ವಿವಿಯ ಸಹಾಯಕ ಪ್ರಧ್ಯಾಪಕರಾದ ಡಾ.ಕಿ ವಿ ಪ್ರಕಾಶ್ ಅವರು ತಿಳಿಸಿದರು.