ETV Bharat / state

ಕೆ.ಆರ್.ಪುರಂ ಶೂಟೌಟ್ ಪ್ರಕರಣ ; ಎರಡು ಪಿಸ್ತೂಲ್ ಜಪ್ತಿ - ETv Bharat Kannada news

ಕೆ.ಆರ್.ಪುರಂ ಶೂಟೌಟ್ ಪ್ರಕರಣದಲ್ಲಿ ಬಳಸಲಾಗಿದ್ದ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Two country made pistols seized
ಎರಡು ಕಂಟ್ರಿ ಮೇಡ್ ಪಿಸ್ತೂಲ್ ಜಪ್ತಿ
author img

By

Published : Dec 22, 2022, 3:36 PM IST

ಬೆಂಗಳೂರು : ಮದನಪಲ್ಲಿಯ ರೌಡಿಶೀಟರ್ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಗಳನ್ನು ಕೆ.ಆರ್.ಪುರಂ ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಪಲೂರಿ ಶಂಕರ್‌ ಹಾಗೂ ಭವಾನಿ ಶಂಕರ್​ನನ್ನು ಬಂಧಿಸಿದ್ದ ಪೊಲೀಸರು, ಅವರ ಮಾಹಿತಿಯನ್ವಯ ಕೃತ್ಯಕ್ಕೆ ಬಳಸಲಾಗಿದ್ದ ಎರಡು ಪಿಸ್ತೂಲ್ ಗಳನ್ನು ಮದನಪಲ್ಲಿಯ ಸಮೀಪದ ಧರ್ಮಾವರಪಲ್ಲಿ ಬಳಿ ವಶಕ್ಕೆ ಪಡೆದಿದ್ದಾರೆ‌.

ಡಿಸೆಂಬರ್ 8ರಂದು ಬೆಂಗಳೂರಿನ ಹೊರವಲಯದ ಕುರುಡುಸೊಣ್ಣೇನಹಳ್ಳಿಯಲ್ಲಿ ಮದನಪಲ್ಲಿಯ ರೌಡಿಶೀಟರ್ ಶಿವಶಂಕರ್ ರೆಡ್ಡಿಯ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಲಾಗಿತ್ತು. ಎರಡು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಶಿವಶಂಕರ್ ರೆಡ್ಡಿ ಹಾಗೂ ಚಾಲಕ ಅಶೋಕ್ ರೆಡ್ಡಿಯ ಮೇಲೆ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಅಶೋಕ್ ರೆಡ್ಡಿಯ ಕಾಲಿಗೆ ಗಾಯಗಳಾಗಿತ್ತು.

ಇದನ್ನೂ ಓದಿ :ಬೆಂಗಳೂರು ಶೂಟೌಟ್ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.