ಕೆಆರ್ ಪುರ(ಬೆಂಗಳೂರು): ಕಳೆದೆರಡು ವಾರಗಳಲ್ಲಿ ಸುಮಾರು 6 ವ್ಹೀಲಿಂಗ್ ಪ್ರಕರಣ ದಾಖಲಿಸಿಕೊಂಡಿದ್ದ ಕೆ ಆರ್ ಪುರ ಸಂಚಾರಿ ಪೊಲೀಸರು, ಇಂದು ಮತ್ತೆ 3 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಪಿಎಸ್ಐ ಶಾಂತರಾಜು, ಡಿಸಿಪಿ ಶ್ರೀತಿಪ್ಪೇಸ್ವಾಮಿ, ಎಸಿಪಿಯವರ ನಿರ್ದೇಶನದಂತೆ ಠಾಣಾಧಿಕಾರಿ ಮಹಮದ್ ಅರವರು ಠಾಣಾ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವವರನ್ನು ಪತ್ತೆ ಹಚ್ಚಲು ವ್ಹೀಲಿಂಗ್ ಸ್ಕ್ವಾಡ್ ರಚನೆ ಮಾಡಿ ಕಾರ್ಯಾಚರಣೆ ಕೈಗೊಂಡಿದ್ದರು.
ಈ ವೇಳೆ ವ್ಹೀಲಿಂಗ್ ಮಾಡುತ್ತಿದ್ದ ಸಾಗರ್, ಫೈರೋಜ್, ಸಂಜಯ ಗೌಡ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು 3 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಓದಿ: ಬಿಜೆಪಿಗೆ ಸಿಹಿ.. ಎಂಇಎಸ್ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ!