ETV Bharat / state

ಭಾನುವಾರದಿಂದ ಕೆಆರ್ ಪುರ - ವೈಟ್ ಫೀಲ್ಡ್ ಮೆಟ್ರೋ ಸೇವೆ ಪ್ರಾರಂಭ: ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆವರೆಗೆ ಸಂಚಾರ

ಕೆ.ಆರ್.ಪುರ ಮತ್ತು ವೈಟ್ ಫೀಲ್ಡ್ ನಡುವೆ ಮೆಟ್ರೋ ಕಾರ್ಯಾಚರಣೆ ಭಾನುವಾರದಿಂದ ಆರಂಭವಾಗಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

kr-pura-and-whitefield-metro-service-start-from-sunday
ಭಾನುವಾರದಿಂದ ಕೆ.ಆರ್.ಪುರ-ವೈಟ್ ಫೀಲ್ಡ್ ಮೆಟ್ರೋ ಸೇವೆ ಪ್ರಾರಂಭ: ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆವರೆಗೆ ಸಂಚಾರ
author img

By

Published : Mar 25, 2023, 10:49 PM IST

ಬೆಂಗಳೂರು: ಪ್ರಧಾನಿ ಮೋದಿ ಉದ್ಘಾಟಿಸಿದ್ದ ಕೆ.ಆರ್.ಪುರ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ನಡುವಿನ ಮೆಟ್ರೋ ಕಾರ್ಯಾಚರಣೆ ಭಾನುವಾರದಿಂದ ಆರಂಭವಾಗಲಿದೆ. ಈ ಸಂಬಂಧ ಬಿಎಂಆರ್​ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರಧಾನ ಮಂತ್ರಿ ಮೋದಿ ಶನಿವಾರ ಉದ್ಘಾಟಿಸಿದ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಡುವಿನ ರೀಚ್-1 ವಿಸ್ತರಿಸಿದ ಮಾರ್ಗದ ವಾಣಿಜ್ಯ ಕಾರ್ಯಾಚರಣೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದ್ದು, ಕೊನೆಯ ರೈಲು ಸೇವೆ ಎರಡೂ ಟರ್ಮಿನಲ್​​ಗಳಿಂದ ರಾತ್ರಿ 11 ಗಂಟೆಯವರೆಗೆ ಕಾರ್ಯಾಚರಿಸಲಿದೆ ಎಂದು ಮಾಹಿತಿ ನೀಡಿದೆ.

ಸೋಮವಾರದಿಂದ ವಾಣಿಜ್ಯ ಸೇವೆ ಕೃಷ್ಣರಾಜಪುರ ಮತ್ತು ವೈಟ್‌ ಫೀಲ್ಡ್ (ಕಾಡುಗೋಡಿ) ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಲಭ್ಯ ವಿರುತ್ತದೆ. ಈ ಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರತ್ಯೇಕ ಟೋಕನ್‌ಗಳು, ಮೊಬೈಲ್ ಕ್ಯುಆರ್ ಟಿಕೆಟ್‌ಗಳನ್ನು ಖರೀದಿಸಿ ಪ್ರಯಾಣಿಸಬಹುದು. ಸ್ಮಾರ್ಟ್ ಕಾರ್ಡ್ ಹೊಂದಿರುವವರು ಕೂಡ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ.

ರುಪೇ ಮೊಬಿಲಿಟಿ ಕಾರ್ಡ್ ಬಳಸಿ ಮೋದಿ ಪಯಣ: ಶನಿವಾರ ನಮ್ಮ ಮೆಟ್ರೋದ ಮೊದಲ ರೂಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)ನ್ನು ಬಳಸಿ ಪ್ರಧಾನಮಂತ್ರಿ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಸಾರ್ವಜನಿಕರಿಗೆ ಮಾರ್ಚ್ 30 ರಿಂದ ಮೆಟ್ರೋ ನಿಲ್ದಾಣಗಳಲ್ಲಿ ಆರ್.ಬಿ.ಎಲ್ ಬ್ಯಾಂಕ್ ರೂಪೇ ಎನ್.ಸಿ.ಎಂ ಸಿ ಕಾರ್ಡ್‌ಗಳು ದೊರೆಯಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ವೈಟ್ ಫೀಲ್ಡ್- ಕೃಷ್ಣರಾಜಪುರ ಮೆಟ್ರೊ ಮಾರ್ಗ ಉದ್ಘಾಟನೆ.. ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ ಮೋದಿ

ದಿಲ್ಲಿ ಮೆಟ್ರೋ ವಿಮಾನ ನಿಲ್ದಾಣ ಮಾರ್ಗದಲ್ಲಿ 2020ರ ಡಿಸೆಂಬರ್‌ನಲ್ಲೇ ಮೊಬಿಲಿಟಿ ಕಾರ್ಡ್‌ ಬಳಕೆಗೆ ಚಾಲನೆ ನೀಡಲಾಗಿದೆ. ಎನ್‌ಸಿಎಂಸಿ ಕಾರ್ಡ್‌ ಅನ್ನು ಕೇವಲ ನಮ್ಮ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿಯೂ ಬೇಕಾದರೂ ಬಳಸಬಹುದಾಗಿದೆ. ಈ ಕಾರ್ಡ್‌ನ ಸಹಾಯದಿಂದಾಗಿ ಜನರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ.

ಬಸ್‌, ಪಾರ್ಕಿಂಗ್‌, ಎಲ್ಲಾ ಕಡೆಯ ಮೆಟ್ರೋ ಸಂಪರ್ಕ, ರೀಟೇಲ್‌ ಶಾಪಿಂಗ್‌ಗಳಲ್ಲಿ ಈ ಒಂದೇ ಕಾರ್ಡ್‌ ಮೂಲಕ ವ್ಯವಹರಿಸಬಹುದಾಗಿದೆ. ಬ್ಯಾಂಕ್‌ನಿಂದ ನೀಡಲಾಗುವ ರೂಪೇ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ನಂತೆಯೇ ಈ ಕಾರ್ಡ್‌ ಕೂಡ ಇರುತ್ತದೆ. ಈ ರೂಪೇ ಕಾರ್ಡ್​​ಅನ್ನು ಪಾಲುದಾರ ಬ್ಯಾಂಕ್‌ಗಳು ಡೆಬಿಟ್‌, ಕ್ರೆಡಿಟ್‌ ಅಥವಾ ಪ್ರಿಪೇಯ್ಡ್‌ ಕಾರ್ಡ್‌ ರೂಪದಲ್ಲಿ ನೀಡಬಹುದು. ಬಹಳ ದಿನಗಳಿಂದ‌ ನಮ್ಮ ಮೆಟ್ರೋದಲ್ಲಿ ಈ ಕಾರ್ಡ್ ಬಳಕೆಗೆ ತಯಾರಿ ನಡೆಸಲಾಗುತ್ತಿತ್ತು.‌ ಆದರೆ ನಾನಾ ಕಾರಣಗಳಿಂದ ಇದರ ಜಾರಿಗೆ ವಿಳಂಬವಾಗುತ್ತಲೇ ಇತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಶನಿವಾರ ಈ ಕಾರ್ಡ್ ಬಳಸಿ ಮೆಟ್ರೋ ಪ್ರಯಾಣವನ್ನು ಮಾಡಿದ್ಧಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.