ETV Bharat / state

ಕೆಪಿಎಲ್ ಹಗರಣ: ಫಿಕ್ಸಿಂಗ್ ಹಿಂದೆ ಇದ್ರಂತೆ ಚಿಯರ್ ಗರ್ಲ್ಸ್!

author img

By

Published : Nov 22, 2019, 10:04 AM IST

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಗೆ ದಿನಕ್ಕೊಂದು ಅಚ್ಚರಿಯ ಮಾಹಿತಿ ಸಿಗುತ್ತಿದೆ. ರಾಜ್ಯ ಕ್ರಿಕೆಟ್‌ಗೆ ಕಳಂಕ ತಂದಿಟ್ಟ ಈ ಹಗರಣದ ಆಳಕ್ಕೆ ಇಳಿಯುತ್ತಾ ಹೋದ ಹಾಗೆ ಪ್ರಕರಣದಲ್ಲಿ ಅಚ್ವರಿಯ ವಿಚಾರಗಳೇ ಬಯಲಾಗ್ತಿವೆ.

ಕೆಪಿಎಲ್ ಹಗರಣ: ಫಿಕ್ಸಿಂಗ್ ಹಿಂದೆ ಇದ್ರಂತೆ ಚಿಯರ್ ಗರ್ಲ್ಸ್

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಗೆ ದಿನಕ್ಕೊಂದು ಅಚ್ಚರಿಯ ಮಾಹಿತಿ ದೊರೆಯುತ್ತಿದೆ. ಬ್ಯಾಟ್ಸ್‌ಮನ್‌, ಬೌಲರ್‌ಗಳನ್ನು ಫಿಕ್ಸ್ ಮಾಡೋದಕ್ಕೆ ಸ್ವತ: ಚಿಯರ್ ಗರ್ಲ್ಸ್ ಬರ್ತಾ ಇದ್ರು ಅನ್ನೋ ಸಂಗತಿ ಗೊತ್ತಾಗಿದೆ.

ಇತ್ತೀಚೆಗಷ್ಟೇ ನಗರ ಆಯುಕ್ತ ಭಾಸ್ಕರ್ ರಾವ್ ಅವರು, ಕೆಪಿಎಲ್‌ ಕ್ರಿಕೆಟ್‌ನಲ್ಲಿ ಪ್ರತಿಷ್ಠಿತ ಆಟಗಾರರನ್ನು ಬೆಟ್ಟಿಂಗ್ ಹಾಗೂ ಫಿಕ್ಸಿಂಗ್‌ನಲ್ಲಿ ಸಿಲುಕಿಸಲು ಬುಕ್ಕಿಗಳು ಹನಿಟ್ರ್ಯಾಪ್ ವಿಧಾನ ಅನುಸರಿಸುತ್ತಿದ್ದರು ಅನ್ನೋ ವಿಚಾರವನ್ನು ತಿಳಿಸಿದ್ದರು. ಆದ್ರೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತನಿಖಾ ತಂಡ ಪ್ರಕರಣದ ಆಳಕ್ಕಿಳಿದು ಮತ್ತಷ್ಟು ಅಚ್ಚರಿಯ ವಿಚಾರಗಳನ್ನು ಹೊರಗೆಡಹುತ್ತಿದೆ. ಫಿಕ್ಸಿಂಗ್ ಮಾಡೋದಕ್ಕೆ ಚಿಯರ್ ಗರ್ಲ್ಸ್ ಬಳಸಿಕೊಳ್ತಿದ್ದಿದ್ದು ಲೇಟೆಸ್ಟ್‌ ನ್ಯೂಸ್ ಅಪ್ಡೇಟ್‌!

ಚಿಯರ್ ಗರ್ಲ್ಸ್ ಮೂಲಕ ಫಿಕ್ಸಿಂಗ್

ಮ್ಯಾಚ್ ಎಲ್ಲೇ ನಡೆಯಲಿ ಅಲ್ಲಿ ಸ್ಟೇಡಿಯಂನ ಎರಡು ಮೂರು ಭಾಗದಲ್ಲಿ ನಾಲ್ಕೈದು ಹುಡುಗಿಯರು ಬಣ್ಣಬಣ್ಣದ ಬಟ್ಟೆ ಧರಿಸಿ, ಕುಣಿದು ಕ್ರಿಕೆಟಿಗರು ಹಾಗೂ ವೀಕ್ಷಕರ ಗಮನವನ್ನು ತಮ್ಮತ್ತ ಸೆಳೆಯುತ್ತಾರೆ. ಇವರು ಮ್ಯಾಚ್‌ನಲ್ಲಿ ಆಟಗಾರರು ಸಿಕ್ಸ್ ಹಾಗೂ ಫೋರ್ ಹೊಡೆದಾಗ ಕೈಯಲ್ಲಿ ಬಣ್ಣದ ಕಾಗದ ಹಿಡಿದು ಚಿಯರ್ ಮಾಡ್ತಾರೆ. ಇದೇ ಸುಂದರಿಯರನ್ನು ಬಳಸಿಕೊಳ್ತಿದ್ದ ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದರು. ಈ ವಿಚಾರದ ಬಗ್ಗೆ ತನಿಖೆ ಮಾಡುತ್ತಿರುವ ಸಿಸಿಬಿ, ಚಿಯರ್ ಗರ್ಲ್ಸ್‌ಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಎಲ್ಲಾ ಕೆಪಿಎಲ್ ತಂಡದ ಮಾಲೀಕರು ಹಾಗೂ ನಿರ್ವಾಹಕರಿಗೆ ಸಿಸಿಬಿ ಚಾಟಿ ಬೀಸಿದ್ದು ಸ್ಪಷ್ಟನೆ ನೀಡುವಂತೆ 7 ತಂಡಗಳ ಫ್ರಾಂಚೈಸಿ ಮಾಲೀಕರು ಹಾಗೂ ಕೆಪಿಎಲ್ ಆಯೋಜಿಸುತ್ತಿರುವ ರಾಜ್ಯ ಕ್ರಿಕೆಟ್ ಮಂಡಳಿಗೆ ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಆದರೆ ಇಲ್ಲಿಯವರೆಗೆ ಮೈಸೂರು, ಬೆಂಗಳೂರು ತಂಡ ಮಾತ್ರ ಮಾಹಿತಿ ನೀಡಿದೆ. ಇನ್ನು ಕೆಲ ತಂಡಗಳು ಹಿಂದೇಟು ಹಾಕಿದ್ದು ಸಿಸಿಬಿ ಮತ್ತೆ ನೋಟಿಸ್ ನೀಡುವ ಸಾಧ್ಯತೆ ಇದೆ.

Intro:ಕೆಪಿಎಲ್ ಹಗರಣ
ಫಿಕ್ಸಿಂಗ್ ಮಾಡಲು ರಾಣಿ ಜೇನು ಬರ್ತಿತ್ತು ತನೀಕೆಯಲ್ಲಿ ಬಯಲು

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಗೆ ದಿನ್ನಕ್ಕೊಂದು ತನೀಕೆ ಯಲ್ಲಿ ಅಚ್ಚರಿ ಕಾಣಿಸ್ತಿದೆ. ಯಾಕಂದ್ರೆ ಕೆಪಿಎಲ್ ಹಗರಣದ ಅಳಕ್ಕೆ ಇಳಿತ ಇದ್ದಾ ಹಾಗೆ ಪ್ರಕರಣದಲ್ಲಿ ಒಂದೊಂದು ವಿಚಾರಗಳು ಬಟಾಬಯಲಾಗ್ತಿದೆ. ಇಷ್ಟು ದಿನ ಬ್ಯಾಟ್ಸ್‌ಮನ್‌, ಬೌಲರ್ ಗಳು ಫಿಕ್ಸಿಂಗ್ ಆಗ್ತಾ ಇದ್ರು ಆದರೆ ಇದೀಗ
ಈ ಬ್ಯಾಟ್ಸ್‌ಮನ್‌, ಬೌಲರ್ ಗಳನ್ನು ಫಿಕ್ಸ್ ಮಾಡೋದಕ್ಕೆ ರಾಣಿ ಜೇನು ಬರ್ತಿತ್ತು ಅನ್ನೋ ವಿಚಾರ ಬಯಲಾಗಿದೆ.

ಮೊನ್ನೆ ತಾನೆ ನಗರ ಆಯುಕ್ತ ಭಾಸ್ಕರ್ ರಾವ್ ಅವರ್ ಕೆಪಿಎಲ್ ನಲ್ಲಿ ಪ್ರತಿಷ್ಠಿತ ಆಟಗಾರರನ್ನ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಭಾಗಿಯಾಗಲು ಹನಿಟ್ರಾಪ್ ಮಾಡ್ತಿದ್ರು ಅನ್ನೋ ವಿಚಾರ ಹೇಳಿದ್ರು .ಆದ್ರೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತನಿಖೆ ಮಾಡ್ತಾ ಹೋದಾ ಹಾಗೆ ಫಿಕ್ಸಿಂಗ್ ಮಾಡೋದಕ್ಕೆ ಚಿಯರ್ ಗರ್ಲ್ಸ್ ಅನ್ನು ಬಳಸಿಕೊಳ್ತಾ ಇರುವ ವಿಚಾರ ತಿಳಿದು ಬಂದಿದೆ

ಯಾರಿ ಚಿಯರ್ ಗರ್ಲ್ಸ್.ಃ

ಮ್ಯಾಚ್ ಎಲ್ಲೆ ನಡೆಯಲಿ ಅಲ್ಲಿ ಗ್ರೌಂಡ್ ನ ಎರಡು ಮೂರು ಭಾಗದಲ್ಲಿ ನಾಲ್ಕು ಐದು ಹುಡುಗಿಯರು ಬಣ್ಣ ಬಣ್ಣದ ಬಟ್ಟೆ ಹಾಕಿ ಕ್ರಿಕೆಟ್ ಗರು ಹಾಗೂ ವಿಕ್ಷಕರು ಅವರನ್ನ ನೋಡುವ ಹಾಗೆ ಆಟ್ರಾಕ್ ಮಾಡ್ತಾರೆ. ಇವರು ಮ್ಯಾಚ್ ನಲ್ಲಿ ಆಟಗಾರರು ಸಿಕ್ಸ್ ಹಾಗೂ ಫೋರೊ ಹೊಡೆದಾಗ ಕೈಯಲ್ಲಿ ಬಣ್ಣ ಬಣ್ಣದ ಕಾಗದ ಹಿಡಿದು ಚಿಯರ್ ಮಾಡ್ತಾರೆ.ಸದ್ಯ ಈ ಸುಂದರಿಯರನ್ನ ಬಳಸಿಕೊಂಡು ಬುಕ್ಕಿಗಳುಮ್ಯಾಚ್ ಫಿಕ್ಸಿಂಗ್ ಮಾಡೋದಕ್ಕೆ ನಿಂತಿದ್ರು .ಸದ್ಯ ಈ ವಿಚಾರದ ಬಗ್ಗೆ ತನಿಖೆ ಮಾಡುತ್ತಿರುವ ಸಿಸಿಬಿ ಚಿಯರ್ ಗರ್ಲ್ಸ್ ಗು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚನೆ ‌ನೀಡಲು ನಿರ್ಧಾರ ಮಾಡಿದ್ದಾರೆ

ಮತ್ತೊಂದೆಡೆ ಬಂಧನವಾದ ಆಟಗಾರರು ತನಿಖೆ ವೇಳೆ ಕೆಲ ಮಾಹಿತಿಗಳು ಬಹಿರಂಗ ಮಾಡಿದ್ರು‌. ಹೀಗಾಗಿ ಸದ್ಯ ಕೆಎಸ್ಸಿಎ ಹಾಗೂ ಎಲ್ಲಾ ಕೆಪಿಎಲ್ ತಂಡದ ಮಾಲಿಕರು ಹಾಗೂ ನಿರ್ವಾಹಕರಿಗೆ ಸಿಸಿಬಿ ಚಾಟಿ ಬೀಸಿ ಸ್ಪಷ್ಟನೆ ನೀಡುವಂತೆ ಎಲ್ಲಾ 7 ತಂಡಗಳ ಫ್ರಾಂಚೈಸಿ ಮಾಲೀಕರು, ಹಾಗೂ ಕೆಪಿಎಲ್ ಆಯೋಜಿಸುತ್ತಿರುವ ರಾಜ್ಯ ಕ್ರಿಕೆಟ್ ಮಂಡಳಿಗೆ ತನೀಕೆಯ ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಮೈಸೂರು ತಂಡ, ಹಾಗೂ ಬೆಂಗಳೂರು ತಂಡ ಮಾತ್ರ ಮಾಹಿತಿ ದಾಖಲೆ ನೀಡಿದೆ. ಇನ್ನು ಕೆಲ ತಂಡ ಹಿಂದೆಟು ಹಾಕಿದ್ದು ಸಿಸಿಬಿ ಮತ್ತೆ ನೋಟಿಸ್ ನೀಡುವ ಸಾದ್ಯತೆ ಇದೆBody:KN_bNG_01_KPL_7204498Conclusion:KN_bNG_01_KPL_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.