ಬೆಂಗಳೂರು: ಕೆಪಿಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಸದ್ಯ ಅಂತಾರಾಷ್ಟ್ರೀಯ ಆಟಗಾರ ವಿನಯ್ ಕುಮಾರ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಇದೇ ಪ್ರಕರಣದಲ್ಲಿ ಎರಡು ದಿನಗಳ ಹಿಂದಷ್ಟೇ ರಾಜ್ಯದ ಪ್ರಮುಖ ಆಟಗಾರ ಅಭಿಮನ್ಯು ಮಿಥುನ್ ಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿಗೊಳಿಸಿತ್ತು.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ವಿಚಾರಣೆಗೆ ಹಾಜರಾಗಲು ಸಮಯ ಕೋರಿದ ಅಭಿಮನ್ಯು
ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿನಯ್ ಕುಮಾರ್ ಕೆಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಭಾಗಿಯಾಗಿದ್ದರೆ ಎಂಬ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ನೊಟೀಸ್ ನೀಡಿದ್ದಾರೆ. ವಿನಯ್ ಕುಮಾರ್ ಕೊಚ್ಚಿ ಟಸ್ಕರ್ಸ್ ಟೀಂ ಪರ ಹಲವು ವರ್ಷಗಳ ಕಾಲ ಆಟವಾಡಿದ್ದರು. ಅದೇ ರೀತಿ ಭಾರತ, ಭಾರತ ಎ, ಕೆಕೆಆರ್ ತಂಡಗಳಲ್ಲಿ ಮಿಂಚಿದ್ದರು.
ಹಗರಣ ಬಗೆದಷ್ಟು ಆಳ.. ಕೆಪಿಎಲ್ ನಿಷೇಧಕ್ಕೆ ಬಿಸಿಸಿಐಗೆ ಪತ್ರ ಬರೆಯುತ್ತಾರಾ ಕಮೀಷನರ್?
ಬುಕ್ಕಿಗಳ ಜೊತೆ ವಿನಯ್ ಕುಮಾರ್ ಸಂಪರ್ಕ ಹೊಂದಿದ್ದರಾ ಎನ್ನುವ ಅನುಮಾನ ಇರುವ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿ ಮಾಡಲಾಗಿತ್ತು. ಕಾಲ್ ಹಿಸ್ಟರಿಯಲ್ಲಿ ವಿನಯ್ ಕುಮಾರ್ ಹೆಸರು ಇರುವ ಬಗ್ಗೆ ಸಂಶಯ ಪೊಲೀಸರಿಗಿದೆ. ಇದೇ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿರುವ ಬೆಳಗಾವಿ ಪ್ಯಾಂಥರ್ಸ್ ತಂಡದ ಅಷ್ಪಕ್ ಆಲಿಯ ಜಾಮೀನು ಕೂಡ ರದ್ದಾಗಿದೆ. ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದರಿಂದ ಜಾಮೀನು ರದ್ದಾಗಿದೆ.