ETV Bharat / state

ಎಫ್​ಬಿಯಲ್ಲಿ ಪೋಸ್ಟ್​ ಮಾಡಿದ್ದ ಆರೋಪಿ ನವೀನ್ ವಿಚಾರದಲ್ಲಿ ತಾರತಮ್ಯ: ಡಿಕೆಶಿ - KPCC President DKShivkumar

ಫೇಸ್​ಬುಕ್ ಪೋಸ್ಟ್ ಮಾಡಿದ ಆರೋಪಿ ನವೀನ್ ವಿಚಾರದಲ್ಲಿ ಪೊಲೀಸರು ತಾರತಮ್ಯ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಬಳಸಿಕೊಂಡು ಈ ರೀತಿ ಮಾಡುವುದು ತಪ್ಪು. ಇಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
author img

By

Published : Aug 12, 2020, 5:17 PM IST

ಬೆಂಗಳೂರು: ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ನಿನ್ನೆ ನಡೆದ ಘಟನೆ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪೊಲೀಸರು ನಮ್ಮನ್ನ ರಕ್ಷಣೆ ಮಾಡುವವರು. ಅವರನ್ನ ಕಾಪಾಡುವುದು ನಮ್ಮ ಕರ್ತವ್ಯ. ಪೊಲೀಸರ ಜೊತೆ ನಾವು ಇದ್ದೇವೆ ಎಂಬ ಕಾರಣಕ್ಕೆ ಬಂದಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಎಂಎಲ್ಎ ಮನೆಯವರ ಪರಿಸ್ಥಿತಿ ನೋಡಿ ಬೇಸರವಾಗಿದೆ. ಈ ದೊಡ್ಡ ಡ್ಯಾಮೇಜ್ ಮಾಡಿದವರಿಗೆ ಶಿಕ್ಷೆ ಆಗಬೇಕು. ‌ಹಾಗೆ ಫೇಸ್​ಬುಕ್ ಪೋಸ್ಟ್ ಮಾಡಿದ ಆರೋಪಿ ನವೀನ್ ವಿಚಾರದಲ್ಲಿ ಪೊಲೀಸರು ತಾರತಮ್ಯ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಬಳಸಿಕೊಂಡು ಈ ರೀತಿ ಮಾಡುವುದು ತಪ್ಪು. ಇಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೆಳಿದರು.

ಘಟನೆ ಬಳಿಕ ಸಿಎಂ ಬಿಎಸ್​ವೈ ಮಾತ್ರ ಮಾತನಾಡುತ್ತಿದ್ದಾರೆ. ಎಲ್ಲರೂ ಈ ವಿಚಾರದ ಬಗ್ಗೆ ಮಾತನಾಡಬೇಕು. ಹಾಗೆ ಇಂದು ‌ಕೆಲ ಬಿಜೆಪಿ ನಾಯಕರು ಕೊಡುತ್ತಿರುವ ಹೇಳಿಕೆಗಳಿಂದ ಶಾಂತಿ ಭಂಗವಾಗಿದೆ ಎಂದು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.