ಬೆಂಗಳೂರು: "ತಪ್ಪು ಮಾಡಿಲ್ಲಾ ಅಂದ್ರೆ ಸದನ ನಡೆಸುತ್ತೀರಿ, ತಪ್ಪು ಮಾಡಿದ್ದೀರಿ ಅಂದ್ರೆ ಕಲಾಪ ಮೊಟಕುಗೊಳಿಸಲು ಯತ್ನಿಸುತ್ತೀರಿ" ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾರ್ಚ್ ಬಳಿಕ ಈಗ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಹತ್ತು ದಿನ ಎಂದು ಹೇಳಿದ್ದಾರೆ. ಆದರೆ, ನಾವು ಇನ್ನೂ ಒಂದು ವಾರ ವಿಸ್ತರಿಸಲು ಹೇಳಿದ್ದೇವೆ. ಸಾಕಷ್ಟು ಭ್ರಷ್ಟಾಚಾರದ ಬಗ್ಗೆ, ಜಿಎಸ್ಟಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಆಗಬೇಕು. ಮಸೂದೆಗಳ ಬಗ್ಗೆ ಚರ್ಚೆ ಮಾಡಲು ಸಮಯ ಬೇಕಿದೆ ಎಂದರು.
ನಮ್ಮ ಪಕ್ಷದಲ್ಲಿ ತೀರ್ಮಾನ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಅಧಿವೇಶನ ಮೊಟಕುಗೊಳಿಸಲು ಅವಕಾಶ ಕೊಡುವುದಿಲ್ಲ. ಒಟ್ಟು 1,600 ಪ್ರಶ್ನೆಗಳನ್ನ ಕೇಳಲಾಗಿದೆ. ಸರ್ಕಾರ ಹೆದರಿಕೊಳ್ಳುತ್ತಿದೆ. ಅವರಿಗೆ ಉತ್ತರ ಕೊಡಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.