ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನವರಿ 15 ರ ನಂತರ ಹೊಸ ನಾಯಕರು ಬರ್ತಾರೆ ಅಂತಾ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಇನ್ನೂ ಎರಡೂವರೆ ವರ್ಷ ನಾನೇ ಸಿಎಂ ಅಂತಾ ಯಡಿಯೂರಪ್ಪ ಹೇಳಿದ್ದು, ಬೇರೆ ಅರ್ಥ ಕೊಡುವಂತಿದೆ. ಅವರೇ ಸಿಎಂ ಆಗಿದ್ದಾರೆ. ಅವರು ಸಿಎಂ ಅಲ್ಲ ಅಂತಾ ಯಾರು ಹೇಳಿಲ್ವಲ್ಲ! ಮತ್ತೆ ಮತ್ತೆ ಎರಡೂವರೆ ವರ್ಷ ನಾನೇ ಸಿಎಂ ಅಂತಾ ಯಡಿಯೂರಪ್ಪ ಹೇಳಿಕೊಳ್ಳುವುದು ಏಕೆ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ನೀವು ಯಾವಾಗ ಇಳೀತಿರಿ ಅಂತ ನಾವು ಕೇಳಿಲ್ಲ. ಅವರೇ ಹೇಳಿದ್ದಾರೆ ಇನ್ನೂ ಎರಡು ವರ್ಷ ನಾನೇ ಸಿಎಂ ಅಂತ. ಅವರೇ ಸೆಲ್ಫ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಬಿಜೆಪಿ ಶಾಸಕರು ಸಹ ಮಾತನಾಡುತ್ತಿದ್ದಾರೆ. ಇದು ನೋಡಿದ್ರೆ ಬಿಜೆಪಿಯಲ್ಲಿ ಏನೋ ನಡೆಯುತ್ತಿದೆ ಅನ್ನೋದು ಗೊತ್ತಾಗುತ್ತಿದೆ. ಇಲಾಖಾವಾರು ಗುರಿ ಸಾಧಿಸುವಲ್ಲಿ ಹಿನ್ನಡೆ ವಿಚಾರವನ್ನ ಪ್ರತ್ಯೇಕವಾಗಿ ನಾನು ಮಾತನಾಡುತ್ತೇನೆ. ಇವತ್ತು ಬೇಡ ಎಂದು ಹೇಳಿದರು.
ಹೊಸ ವರ್ಷದ ರಾಜ್ಯದ ಜನತೆಗೆ ಶುಭಾಶಯಗಳು. ಕಳೆದ ವರ್ಷದ ನೆಮ್ಮದಿ ಮತ್ತು ಆರೋಗ್ಯಕ್ಕೆ ಸಂಕಟ ಆಗಿತ್ತು. ಅದೆಲ್ಲಾ ನಿವಾರಣೆ ಆಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಶಾಲೆ ಮುಚ್ಚಬೇಕು ಅಂತ ನಾನು ಹೇಳುವುದಿಲ್ಲ. ಶಾಲೆಗೆ ಬಹಳ ದಿನ ಬ್ರೇಕ್ ಹಾಕಬಾರದು. ಮಕ್ಕಳ ವರ್ತನೆ ಬದಲಾಗುತ್ತೆ. ಶಿಕ್ಷಣದ ಗುಣಮಟ್ಟದ ಮೇಲೆ ಸಮಸ್ಯೆ ಆಗುತ್ತದೆ. ಕೋವಿಡ್ ನಿಯಮ ಪಾಲನೆ ಮಾಡಿ ಓಪನ್ ಮಾಡಲಿ. ಇಲ್ಲ ಅಂದ್ರೆ ವಿದ್ಯಾರ್ಥಿಗಳ ಪ್ರಗತಿ ಮೇಲೆ ದುಷ್ಪರಿಣಾಮ ಬೀರುತ್ತೆ. ಮುಂಜಾಗ್ರತಾ ಕ್ರಮ ಕೈಗೊಂಡು ಶಾಲೆ ಓಪನ್ ಮಾಡಲಿ ಎಂದು ಸಲಹೆ ನೀಡಿದರು.
ಓದಿ : ಸಂಪುಟ ವಿಸ್ತರಣೆ: ಅರುಣ್ ಸಿಂಗ್‌ರತ್ತ ಬೆರಳು ಮಾಡಿದ ಸಿಎಂ ಬಿಎಸ್ವೈ...!
ಸರ್ಕಾರಕ್ಕೆ ಸಾಮಾನ್ಯ ಕನಿಷ್ಠ ಎಚ್ಚರಿಕೆ ಇಲ್ಲ. ಸರ್ಕಾರಕ್ಕೆ ಬೇಸಿಕ್ ಕಾಮನ್ ಸೆನ್ಸ್ ಇರಬೇಕಿತ್ತು. ಏರ್ಪೋರ್ಟ್ ನಲ್ಲಿ ಹಿಡಿದುಕೊಂಡು ಚೆಕ್ ಮಾಡಿಸಬೇಕಿತ್ತು. ಇವರಿಗೆ ಏನು ಕಷ್ಟ ಆಗಿತ್ತು. ಇವತ್ತು ಜನರು ಆತಂಕಕ್ಕೆ ಕಾರಣವಾಗಿದ್ದಾರೆ. ಆಡಳಿತ ವಿಚಾರದಲ್ಲಿ ಇವರ ವೈಫಲ್ಯ. ನಮ್ಮ ರಾಜ್ಯದವರು ಕೋವಿಡ್ ಹರಡಲಿಲ್ಲ. ಅವತ್ತು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದರು.
ರಾಜ್ಯ ಪ್ರವಾಸ ಮಾಡುತ್ತೇನೆ : ಪಂಚಾಯತ್ ಚುನಾವಣೆ ನನಗೆ ಖುಷಿ ತಂದಿದೆ. ಈ ರಿಸಲ್ಟ್ ನನಗೆ ಸಂತೋಷ ತಂದಿದೆ. ನಮ್ಮ ಬೆಂಬಲಿತ ಸದಸ್ಯರನ್ನ ಸೆಳೆಯುವ ಕೆಲಸ ಆಗುತ್ತಿದೆ. ಇವರ ದುಡ್ಡಿನ ನಡುವೆ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ಈ ವರ್ಷ ಸಂಘಟನೆಯ ವರ್ಷ ಹಾಗೂ ಹೋರಾಟದ ವರ್ಷ ಎಂದರು.