ಬೆಂಗಳೂರು: ಮೊನ್ನೆಯಷ್ಟೇ ವಿವಾಹವಾದ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಭ ಕೋರಿದ್ದಾರೆ.
![Kpcc president dk shivakumar](https://etvbharatimages.akamaized.net/etvbharat/prod-images/kn-bng-03-dks-tweet-script-7208077_19042020171755_1904f_1587296875_133.png)
ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಗೆ ತುಂಬು ಹೃದಯದ ಶುಭಾಶಯಗಳು. ಲಕ್ಷಾಂತರ ಮಂದಿ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿರಿಸಬೇಕೆಂದಿದ್ದವರು ಸರಳ ರೀತಿಯಲ್ಲಿ ವಿವಾಹವಾದ ವೈಖರಿ ಸಮಾಜಕ್ಕೆ ಮಾದರಿ. ಇದಕ್ಕೆ ಮೇಲ್ಪಂಕ್ತಿ ಹಾಕಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ರಾಮನಗರದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಕೆಲವೇ ಮಂದಿ ಕುಟುಂಬ ವರ್ಗದವರ ಸಮ್ಮುಖದಲ್ಲಿ ಏ. 17ರಂದು ವಿವಾಹ ಸಮಾರಂಭ ನೆರವೇರಿತ್ತು. ಕೊರೊನಾ ನಿರ್ಬಂಧ ಸಲುವಾಗಿ ಸರಳವಾಗಿ ನಡೆದ ಕಾರ್ಯಕ್ರಮದಿಂದಾಗಿ ರಾಜಕೀಯ ನಾಯಕರು ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.