ಬೆಂಗಳೂರು: ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸುವ ಸಂಬಂಧ ಪಕ್ಷದ ಮುಖಂಡರು ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿದ್ದೇವೆ. ಉಪಸಭಾಪತಿ ಗಳಾಗಿದ್ದ ಧರ್ಮೇಗೌಡ ಅವರು ಹಾಗೆ ಮಾಡಬಾರದಿತ್ತು. ಆ ಸ್ಥಾನಕ್ಕೆ ನಮ್ಮ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತೇವೆ. ಉಪಸಭಾಪತಿ ಸ್ಥಾನಕ್ಕೆ ಗೌರವ ಕೊಡುವ ರೀತಿಯಲ್ಲಿ ತೀರ್ಮಾನ ಮಾಡುತ್ತೇವೆ. ರಾಜಕೀಯದಲ್ಲಿ ಏನ್ ಬೇಕಾದ್ರು ಆಗುತ್ತೆ, ಕೌನ್ಸಿಲ್ ಘಟನೆ ಹೀಗೆ ಆಗುತ್ತೆ ಎಂದು ಗೊತ್ತಿತ್ತಾ ಎಂದು ಪ್ರಶ್ನಿಸಿದರು.
ಶಾಸಕಿ ಸೌಮ್ಯ ರೆಡ್ಡಿ ಮೇಲೆ ಎಫ್ ಐ ಆರ್ ವಿಚಾರ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು, ಸೌಮ್ಯ ರೆಡ್ಡಿ ಅವರನ್ನು ನಾನು ನೋಡುತ್ತಿದ್ದೆ. ಅವರನ್ನು ಪೊಲೀಸ್ ಎಳೆದಾಡಿದ್ರು, ಅದನ್ನ ನೀವು ಯಾರು ನೋಡಲಿಲ್ಲ. ಸೌಮ್ಯ ಸ್ವಯಂ ರಕ್ಷಣೆಗೋಸ್ಕರ ಹಾಗೆ ಮಾಡಿದ್ರು. ಕಬ್ಬಾಳದ ಹುಡುಗನಿಗೆ ಪೊಲೀಸ್ ಹೊಡೆದ್ರು, ಚನ್ನಪಟ್ಟಣ ಹುಡುಗನ ಬಟ್ಟೆ ಹರಿದಾಕಿದ್ರು. ಎಲ್ಲಾ ವ್ಯವಸ್ಥಿತವಾಗಿ ನೆಡೆದುಕೊಂಡ್ರು. ಆರ್ ಆರ್ ನಗರದಲ್ಲಿ ಯಾಕೆ ಸಿದ್ದರಾಮಯ್ಯ ಮೇಲೆ ಕೇಸ್ ಹಾಕಲಿಲ್ಲ. ಸೌಮ್ಯ ರೆಡ್ಡಿ ಪರವಾಗಿ ನಾನು ನಿಲ್ಲುತ್ತೇವೆ. ಸೌಮ್ಯ ಅವರು ಹೇಗೆ ಕೆಳಗೆ ಬಿದ್ರು ಅಂತ ನಾನು ನೋಡಿದ್ದೇನೆ. ಪೊಲೀಸ್ ತಮ್ಮ ಗೌರವ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಕೃತ್ಯಕ್ಕೆ ಸರ್ಕಾರದ ಸಪೋರ್ಟ್ ಇದೆ ಎಂದು ಆರೋಪಿಸಿದ್ರು.
ಸೌಮ್ಯ ರೆಡ್ಡಿ ಮೇಲೆ ಕೇಸ್ ಹಾಕಿದ್ದಾರೆ. ಜೈಲಿಗೂ ಹಾಕಲಿ ಇದಕ್ಕೆ ನಾವು ಹೆದರಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ. ಬೇರೆ ಬೇರೆ ಕಡೆ ಇವರ ಪಾರ್ಟಿ ಅವರು ಮಾಡಿದ ಘಟನೆಗಳ ಬಗ್ಗೆ ಕೇಸ್ ಹಾಕಿದ್ದಾರಾ. ಇಂತಹ ರಾಜಕಾರಣವನ್ನು ನಾವು ಸಹಿಸಲ್ಲ ಎಂದರು.
ಓದಿ : ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡಲ್ಲ: ಸಿಎಂ ಖಡಕ್ ಎಚ್ಚರಿಕೆ
ಪಾಪ ನಮ್ಮ ಸಾಮ್ರಾಟ್ ಅಶೋಕಣ್ಣ ಅನ್ ಎಂಪ್ಲಾಯ್ ಮೆಂಟ್ ಅಂತಾರೆ. ಸಿಎಂ ಯಡಿಯೂರಪ್ಪ ನಮ್ಮ ಸ್ನೇಹಿತರು. ನಮ್ಮ ಅಸ್ತಿತ್ವ ಅಲ್ಲ, ರಾಷ್ಟ್ರದ ರಾಜ್ಯದ ಜನರ ಅಸ್ತಿತ್ವದ ಪ್ರಶ್ನೆ ಎಂದ ಡಿಕೆಶಿ, ಕೆಪಿಸಿಸಿಯಲ್ಲಿ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಮತ್ತು ಮನೋಹರ ನಡುವೆ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಪಕ್ಷದ ರಾಜ್ಯಾಧ್ಯಕ್ಷ ನಿರಾಕರಿಸಿದರು.