ಬೆಂಗಳೂರು : ಜನರ ದನಿಯಾಗುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಜನಧ್ವನಿ ಕಾರ್ಯಕ್ರಮಕ್ಕೆ ಯಶಸ್ಸು ಸಿಗಲಿ ಎಂದು ಬೇಡಿಕೊಳ್ಳಲು ದೇವಾಲಯಕ್ಕೆ ತೆರಳುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ಕೋಲಾರದ ಮುಳುಬಾಗಿಲಿನ ಕೂಡುಮಲೆ (ಕುರುಡುಮಲೆ) ಗಣೇಶನ ದೇಗುಲಕ್ಕೆ ತೆರಳುವ ಮುನ್ನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ ಅವರು, ಮಾ.3 ರಂದು ನನ್ನ ಜನಧ್ವನಿ ಜಾಥಾ ಚಾಲನೆ ಪಡೆಯಲಿದೆ. ಪಕ್ಷದ ನಮ್ಮ ಧ್ವನಿ ಜನರನ್ನ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ.
ಈ ಕಾರ್ಯಕ್ರಮ ನಿರಾತಂಕವಾಗಿ ನಡೆಯಲು ಹಾಗೂ ಎದುರಾಗುವ ಎಲ್ಲ ವಿಘ್ನಗಳು ನಿವಾರಣೆಯಾಗಲಿ ಎಂದು ವಿಜಯಕ್ಕೆ ನಾಯಕನಾಗಿರುವ ವಿಘ್ನನಿವಾರಕ ಗಣೇಶನ ದರ್ಶನ ಮಾಡಿಕೊಂಡು ಬರಲು ತೆರಳುತ್ತಿದ್ದೇನೆ ಎಂದರು.
ಇದೇ ಸಂದರ್ಭ ಆಂಜನೇಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವುದಾಗಿ ತಿಳಿಸಿದ ಡಿಕೆಶಿ, ಕುರುಡುಮಲೆನತ್ತ ಪ್ರಯಾಣ ಬೆಳೆಸಿದ್ದು, ಕೆಆರ್ಪುರಂನಲ್ಲಿ ಅಭಿಮಾನಿಗಳ ಅಭಿನಂದನೆಯನ್ನು ಸಹ ಸ್ವೀಕರಿಸಿ ತೆರಳಿದ್ದಾರೆ.
ಓದಿ: ಜನ ಧ್ವನಿ ಕಾರ್ಯಕ್ರಮ : ಕೋಲಾರಕ್ಕೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ