ಬೆಂಗಳೂರು: ಸರ್ಕಾರಕ್ಕೆ ಕಾಮನ್ ಸೆನ್ಸ್ ಇರಬೇಕು, ಹೋರಾಟಗಾರರನ್ನು ಕುಗ್ಗಿಸುವ ಕೆಲಸ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಂಡಿತ ರೈತರಿಗೆ ನಮ್ಮ ಬೆಂಬಲ ಇದೆ. ನಿನ್ನೆ ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿಯವರು ಕೊರೊನಾ ಸಂದರ್ಭದಲ್ಲಿ ಮತೀಯ ಹೇಳಿಕೆ ನೀಡಿದರೂ ಒಂದು ಕೇಸ್ ಹಾಕಲಿಲ್ಲ. ಈಗ ನೋಡಿದರೆ ರಾಕೇಶ್ ಟಿಕಾಯತ್ ವಿರುದ್ಧ ಕೇಸ್ ಹಾಕಿಸಿದ್ದಾರೆ. ಸರ್ಕಾರಕ್ಕೆ ಕಾಮನ್ ಸೆನ್ಸ್ ಇರಬೇಕು. ಹೋರಾಟಗಾರರನ್ನು ಕುಗ್ಗಿಸುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.
ಓದಿ: ಸಿಡಿ ಪ್ರಕರಣದ ಯುವತಿಯ ಮೂರನೇ ವಿಡಿಯೋ ಬಿಡುಗಡೆ.. ಆಕೆ ಹೇಳಿದ್ದೇನು?
ಇದೇ ವೇಳೆ ಮರಳವಾಡಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ತಮ್ಮ ಬೆಂಬಲಿಗರ ನಡುವೆ ನಡೆದ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಹುಡುಗರು ಮಾತನಾಡುತ್ತಾರೆ ಎಂದು ನಾವು ತಲೆ ಕೆಡಿಸಿಕೊಳ್ಳುವುದಕ್ಕೆ ಆಗುತ್ತಾ. ನಾನು ಏನು ಮಾಡಿದ್ದೇನೆ ಎಂದು ಜನರಿಗೆ ಗೊತ್ತಿದೆ. ಸತ್ಯಕ್ಕೂ, ಸುಳ್ಳಿಗೂ ವ್ಯತ್ಯಾಸವಿದೆ ಎಂದರು.
ಕಿವಿಯಲ್ಲಿ ಕೇಳಿರುವುದು ಸುಳ್ಳು ಇರಬಹುದು. ಕಣ್ಣಲ್ಲಿ ಕಂಡದ್ದು ಸತ್ಯ ಇರುತ್ತದೆ. ತಾಲೂಕಿನ ಜನ ಗುರುತಿಸುತ್ತಾರೆ. ಜನ ನೋಡಿದ್ದಾರೆ, ಹುಡುಗರ ಬಗ್ಗೆ ನಾನು ಯಾಕೆ ಮಾತಾಡಲಿ ಎಂದರು.