ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಬೈ ಎಲೆಕ್ಷನ್ ಮುಗಿದ ಬಳಿಕ ಮೊದಲ ಬಾರಿಗೆ ಸತೀಶ್ ಜಾರಕಿಹೊಳಿ, ಡಿಕೆಶಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ರೊಟೀನ್ ಭೇಟಿ: ಡಿಕೆಶಿ ಭೇಟಿ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ಇದು ರೊಟೀನ್ ಭೇಟಿ. ಚುನಾವಣೆ ಬಳಿಕ ಮೊದಲ ಭೇಟಿ ಯಾಗಿತ್ತು. ಬೆಳಗಾವಿ ಚುನಾವಣೆಯ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿದ್ದು, ಈ ಬಾರಿ ಗೆಲ್ಲುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೊಂದಲದ ಸರ್ಕಾರ:
ಸರ್ಕಾರದಲ್ಲಿ ಮೊದಲಿನಿಂದಲೂ ಗೊಂದಲ ಇದೆ. ಲಾಕ್ ಡೌನ್ ವಿಚಾರದಲ್ಲಿ ಗೊಂದಲ ಇದೆ, ಈಗಲೂ ಇದೆ. ಸಿಎಂ ಒಂದು ಹೇಳಿದ್ರೆ ಮಂತ್ರಿ ಒಂದು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಈಗ ರಾಜ್ಯಪಾಲರು ಬೇರೆ ಎಂಟ್ರಿಯಾಗಿದ್ದಾರೆ. ಬಿಜೆಪಿಯಲ್ಲಿ ಸಾಂಘಿಕ ನಿರ್ಧಾರವಿಲ್ಲ. ತಜ್ಞರ ಸಲಹೆ ಪಡೆಯುವಂತೆ ಗವರ್ನರ್ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಡ ಬಹುದಿತ್ತು.
ರಾಜ್ಯಪಾಲರು ಸಭೆ ಕರೆಯುವ ಬದಲು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕೊರೊನಾ ನಿಯಂತ್ರಣ ಆಗುವವರೆಗೂ ಮುಂದೂಡಿಕೆ ಮಾಡಬೇಕು ಎಂದರು.