ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಆರಂಭಗೊಂಡಿದ್ದ ಫೀವರ್ ಕ್ಲಿನಿಕ್ಗಳನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುತ್ತಿದ್ದು, ಏಪ್ರಿಲ್ 11 ರೊಳಗೆ ಶೇ.50 ರಷ್ಟು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಫೀವರ್ ಕ್ಲಿನಿಕ್ಗಳನ್ನಾಗಿ ಪರಿವರ್ತನೆ ಮಾಡುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕೋವಿಡ್-19 ರೋಗವು ಬಹುಮುಖವಾಗಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಅತಿಸಾರ ಬೇದಿ ಮುಖಾಂತರ ಕಾಣಿಸಿಕೊಳ್ಳುತ್ತಿದ್ದು, ಇದರಲ್ಲಿ ಹೆಚ್ಚಾಗಿ ಜ್ವರ ಪ್ರಕರಣಗಳು ದಾಖಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜ್ವರ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚುವ ಅವಶ್ಯಕತೆ ಇರುವ ಕಾರಣದಿಂದ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಫೀವರ್ ಕ್ಲಿನಿಕ್ಗಳನ್ನಾಗಿ ಪರಿವರ್ತನೆ ಮಾಡುವಂತೆ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ.
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ನಗರ ಪ್ರದೇಶಗಳಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಶೇ.50 ರಷ್ಟು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಜ್ವರ ಪ್ರಕರಣಗಳ ಅಗತ್ಯತೆಗನುಗುಣವಾಗಿ ಫೀವರ್ ಕ್ಲಿನಿಕ್ಗಳನ್ನಾಗಿ, ಏಪ್ರಿಲ್ 11 ರೊಳಗೆ ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೂ ಮಾರ್ಪಡಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ನಗರ ಪ್ರದೇಶಗಳಲ್ಲಿ "ಫೀವರ್ ಕ್ಲಿನಿಕ್” ಸ್ಥಾಪನೆಗೆ ಸುತ್ತೋಲೆ 1.“ಫೀವರ್ ಕ್ಲಿನಿಕ್” ಗಳನ್ನಾಗಿ ಮಾರ್ಪಡಿಸಿದ ನಗರ ಆರೋಗ್ಯ ಕೇಂದ್ರಗಳಿಗೆ ಬರುವಂತಹ ರೋಗಿಗಳು ಸಮೀಪದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯುವುದು. 2. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಸಂಪನ್ಮೂಲಗಳಿಂದ ಫೀವರ್ ಕ್ಲೀನಿಕ್‌ಗಳನ್ನು ನಡೆಸುವುದು. 3, “ಫೀವರ್ ಕ್ಲಿನಿಕ್‌ಗೆ ಅವಶ್ಯವಾದ ಆರೋಗ್ಯ ಸಲಕರಣೆ ಮತ್ತು ಸಾಮಗ್ರಿಗಳಾದ ಥರ್ಮಲ್ ಸ್ಕ್ಯಾನರ್, ಎನ್-95 ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಸ್ವರಕ್ಷಾ ಕವಚಗಳನ್ನು ಜಿಲ್ಲೆಯಲ್ಲಿನ ವಿಪತ್ತು ನಿರ್ವಹಣಾ ಅನುದಾನದಲ್ಲಿ ಭರಿಸುವುದು. 4. ಫೀವರ್ ಕ್ಲಿನಿಕ್‌ಗಳ ನಿರ್ದಿಷ್ಟ ಮಾರ್ಗಸೂಚಿಯನ್ನು, ಈ ಪತ್ರದೊಂದಿಗೆ ಅನುಬಂಧ-1ರಲ್ಲಿ ಲಗತ್ತಿಸಿದ್ದು, ಇದರನ್ವಯ ಕ್ರಮಕೈಗೊಳ್ಳುವುದು. 5. ಪ್ರತಿ ದಿನದ ಫೀವರ್ ಕ್ಲಿನಿಕ್ ಗಳ ವರದಿಗಳನ್ನು http://covid.karnataka.tech/ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವುದು. 6. "ಫೀವರ್ ಕ್ಲಿನಿಕ್"ಗಳಲ್ಲಿ ಉಪಯೋಗಿಸಿದ ಮಾಸ್ಕ್, ಗ್ಲೌಸ್ ಹಾಗೂ ಇತರ ವಸ್ತುಗಳನ್ನು ಎಚ್ಚರಿಕೆಯಿಂದ ಜೈವಿಕ ವೈದ್ಯಕೀಯ ತಾಜ್ಯ ನಿರ್ವಹಣೆ ಕಾಯ್ದೆ ಅನ್ವಯ ವಿಲೇವಾರಿ ಮಾಡುವುದು. 7. ಆಪ್ತ ಸಮಾಲೋಚನೆ ಮತ್ತು ಐ.ಇ.ಸಿ ಚಟುವಟಿಕೆಗಳನ್ನು ನಡೆಸುವುದು.ಖಾಸಗಿ ಕ್ಲಿನಿಕ್/ ಆಸ್ಪತ್ರೆಗಳು “ಫೀವರ್ ಕ್ಲಿನಿಕ್"ಗಳಾಗಿ ಕಾರ್ಯನಿರ್ವಹಿಸಲು ಇಚ್ಚಿಸಿದಲ್ಲಿ ಅವರನ್ನು ನೋಂದಾಯಿಸಿಕೊಂಡು ಅವರಿಗೆ ಅವಶ್ಯ ತರಬೇತಿ ಮತ್ತು ಎನ್-95 ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಸ್ವರಕ್ಷಾ ಕವಚಗಳನ್ನು ಜಿಲ್ಲೆಯಲ್ಲಿನ ವಿಪತ್ತು ನಿರ್ವಹಣಾ ಅನುದಾನದಲ್ಲಿ ಭರಿಸುವುದು. ಕಡ್ಡಾಯವಾಗಿ ಪೋರ್ಟಲ್‌ನಲ್ಲಿ ವರದಿಗಳನ್ನು ಸಲ್ಲಿಸಲು ಸೂಚಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.