ETV Bharat / state

ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ, ಇಲ್ಲವಾದರೆ ನಾಳೆಯೂ ಮುಷ್ಕರದ ಬಿಸಿ ಎದುರಿಸಲಿ: ಕೋಡಿಹಳ್ಳಿ ಎಚ್ಚರಿಕೆ - ಸಾರಿಗೆ ನೌಕರರ ಪ್ರತಿಭಟನೆ

ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದು, ನಾಳೆಯೂ ಪ್ರತಿಭಟನೆ ಮುಂದುವರೆಯಲಿದೆ ಎಂದಿದ್ದಾರೆ.

Transport workers protest
ಕೋಡಿಹಳ್ಳಿ ಚಂದ್ರಶೇಖರ್
author img

By

Published : Apr 7, 2021, 6:35 PM IST

ಬೆಂಗಳೂರು : ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಸತ್ಯಾಗ್ರಹ ಇಂದಿನಿಂದ ಆರಂಭವಾಗಿದ್ದು, ನಾಳೆಯೂ ಮುಂದುವರೆಯಲಿದೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಸಾರಿಗೆ ನೌಕರರ ಸತ್ಯಾಗ್ರಹ ಬೆಳಗ್ಗೆ 6 ಗಂಟೆಯಿಂದಲ್ಲೇ ಶುರುವಾಗಿದ್ದು, ಮುಂದುವರೆದಿದೆ. ಮುಷ್ಕರದ ವೇಳೆ‌ ಕೋವಿಡ್ ನಿಯಮ ಉಲ್ಲಂಘನೆಯಾಗಲಿ, ಅಹಿತಕರ ಘಟನೆಯಾಗಲಿ ಆಗಿಲ್ಲ. ಶಿಸ್ತಿನೊಂದಿಗೆ ಸತ್ಯಾಗ್ರಹ ಮುಂದುವರೆದಿದೆ.‌ ನೌಕರರು ಕರ್ತ್ಯವಕ್ಕೆ ಹಾಜರಾಗಿಲ್ಲ. ಇವತ್ತು ಹೇಗೆ ಮುಷ್ಕರ ಮುಂದುವರೆದಿದೆಯೋ, ನಾಳೆಯೂ ಹಾಗೆಯೇ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಕೋಡಿಹಳ್ಳಿ ಚಂದ್ರಶೇಖರ್

ಏಪ್ರಿಲ್ 10 ರಂದು 4 ನಿಗಮಕ್ಕೆ ಸಂಬಂಧಪಟ್ಟ ಹಾಗೆ ವಿಭಾಗ ಸಭೆ ಮಾಡಲಾಗುತ್ತದೆ. ಬೆಳಗಾವಿಯಲ್ಲಿ ನಿಗಮಗಳ ಮುಖ್ಯಸ್ಥರ ಜೊತೆಗೆ ಸಭೆ ಮಾಡುತ್ತೇವೆ. ಅನಿರ್ದಿಷ್ಟಾವಧಿ ಸತ್ಯಾಗ್ರಹದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಏಪ್ರಿಲ್ 11 ರಂದು ಗುಲ್ಬರ್ಗಾ ವಿಭಾಗದ ಬೀದರ್​ನಲ್ಲಿ ಸಭೆ ಮಾಡಿ ಕುಂದು ಕೊರತೆ ಕುರಿತು ಚರ್ಚಿಸುತ್ತೇವೆ ಎಂದು ಹೇಳಿದರು.

ನಮ್ಮ ಉದ್ದೇಶ ಇಷ್ಟೇ, ಪಕ್ಕದ ಆಂಧ್ರದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡಲಾಗಿದೆ. ಅದೇ ರೀತಿ ನಮ್ಮಲ್ಲಿ ಸಾರಿಗೆ ಸಚಿವರ ಮಾತಿನಂತೆ ಆರನೇ ವೇತನ ಆಯೋಗ ಜಾರಿ ಮಾಡಬೇಕು. ಅದು ಬಿಟ್ಟು ಕೊರೊನಾ ಸಂದರ್ಭದಲ್ಲಿ ಈ ಮುಷ್ಕರ ಸರಿಯಲ್ಲ ಅಂತಾರೆ.‌ ಮಠ-ಮಂದಿರ ಜಾತಿ ಸಂಸ್ಥೆಗಳಿಗೆ ಇಲ್ಲದ ಆರ್ಥಿಕ ಹೊರೆಯ ಕಾರಣ, ನಮಗೆ ಯಾಕೆ ಎಂದು ಪ್ರಶ್ನಿಸಿದರು.

ಓದಿ : ಸಾರಿಗೆ ನೌಕರರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ: ಯಡಿಯೂರಪ್ಪ

ಬಜೆಟ್​ನಲ್ಲಿ ಬೇರೆಯವರಿಗೆಲ್ಲ ಉದಾರವಾಗಿ ನೀಡುತ್ತೀರಿ,‌ ನಮಗೆ ಯಾಕೆ ನೀಡುವುದಿಲ್ಲ. ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮನ್ನು ಶೋಷಣೆ ಮಾಡಲು ಮುಂದಾಗಿದೆ, ಇದು ಸರಿಯಾದ ಕ್ರಮವಲ್ಲ. ಅರ್ಧ ಕೂಲಿ ಕೊಟ್ಟು ಕೆಲಸ ಮಾಡು ಎಂಬುವುದು ಸರಿಯಲ್ಲ. ತಕ್ಷಣ ಈಗ ಆಗಿರುವ ತಪ್ಪುಗಳನ್ನು ಸರಿದೂಗಿಸಲು ಸಿಎಂಗೆ ಮನವಿ ಮಾಡುತ್ತೇವೆ. ಅಧಿಕಾರ ನಿಮ್ಮ ಕೈನಲ್ಲಿ ಇದ್ದು, ಸಮಸ್ಯೆಗೆ ಪರಿಹಾರ ಕೊಡಿ. ನೀವು ಯಾವತ್ತು ಕರೆದರೂ ನಾವು ಸಭೆಗೆ ಬಂದು ಮಾತನಾಡುತ್ತೇವೆ. ಸದ್ಯ ಸರ್ಕಾರದ ಕಡೆಯಿಂದ ಯಾವುದೇ ಮಾತುಕತೆಗೆ ಆಹ್ವಾನ ಬಂದಿಲ್ಲ. ‌ಇತ್ತ ಕೊಟ್ಟ ಮಾತಿನಿಂದ ದೂರ ಹೋಗದೇ, ಸಾರಿಗೆ ಸಚಿವರು ಮುಂದೆ ಬರಬೇಕು ಎಂದರು.

ಎಸ್ಮಾ ಜಾರಿ ಅಂದರೆ ಕಾರಣ ಕೊಡಿ : ಎಸ್ಮಾ ಅನ್ನೋದು ವಿಶೇಷ ಸಂದರ್ಭದಲ್ಲಿ ಬಳಕೆ ಆಗಬೇಕು. ‌ಕರ್ನಾಟಕದಲ್ಲಿ ಅಂತಹ ಸನ್ನಿವೇಶ ಸೃಷ್ಟಿಯಾಗಿಲ್ಲ. ಇದರಲ್ಲಿ ಸರ್ಕಾರದ ವೈಫಲ್ಯ‌ ಕಾಣ್ತಿದೆ. ಸಾರಿಗೆ ಸಚಿವರು ಮಾತುಕತೆ ಮಾಡಿಲ್ಲ. ಹೀಗಾಗಿ ಸತ್ಯಾಗ್ರಹ ಅನಿರ್ವಾಯ ಆಯ್ತು. ಎಸ್ಮಾ ಜಾರಿ ಮಾಡಿ ನಮ್ಮನ್ನು ಬಂಧಿಸುವ ತೀರ್ಮಾನವಾಗಿದ್ದರೆ, ಕಾರಣ ಕೊಟ್ಟು ಮಾಡಲಿ ಎಂದು ಹೇಳಿದರು.

ವೇತನ ಕಡಿತ : ಮಾರ್ಚ್ ತಿಂಗಳ ವೇತನ ‌ಕೊಡುವುದಿಲ್ಲ ಎಂದರೆ ತಪ್ಪು ಅಲ್ವಾ. ದುಡಿದಿರುವ ವೇತನ ಕೊಡುವುದಿಲ್ಲ ಅಂದರೆ ಹೇಗೆ..? ಆ ತಪ್ಪು ಸರ್ಕಾರ ಮಾಡಬಾರದು. ನೋ ವರ್ಕ್ ನೋ ಪೇ ಓಕೆ. ಆದರೆ, ಕೆಲಸ ಮಾಡಿದ್ದರ ವೇತನ ತಡೆಹಿಡಿಯುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯೇಂದ್ರಗೆ ವಾಸ್ತವ ಸ್ಥಿತಿ ಗೊತ್ತಿಲ್ಲ : ಮುಷ್ಕರ ಕೈ ಬಿಡಬೇಕು ಎಂಬ ಬಿ.ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್,
ವಿಜಯೇಂದ್ರಗೆ ವಾಸ್ತವ ಸ್ಥಿತಿ ಗೊತ್ತಿಲ್ಲ, ಅದನ್ನ‌ ಅರ್ಥ ಮಾಡಿಕೊಳ್ಳಬೇಕು. ಈ ಸಮಸ್ಯೆ ಅರ್ಥ ಮಾಡಿಕೊಂಡು ನಿಮ್ಮ ಸರ್ಕಾರಕ್ಕೆ ಹೇಳಿ, ಶೋಷಣೆ ಮುಕ್ತ ಸಾರಿಗೆ ಮಾಡಿ ಎಂದು ಮನವಿ ಮಾಡಿದರು.

ಕೆಎಸ್​ಆರ್​ಟಿಸಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸರ್ಕಾರದಿಂದ‌ ಯಾವುದೇ ಭರವಸೆ ನೀಡದ ಕಾರಣ ನಾಳೆಯೂ ನಮ್ಮ‌ ಮುಷ್ಕರ ಮುಂದುವರೆಯಲಿದೆ. ವಿಜಯೇಂದ್ರ ಅವರು ಒಂದು ಸಮಾರಂಭದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂದು ಹೇಳಿದ್ದೀರಿ. ಹೀಗಿರುವಾಗ, ನಿಮ್ಮ ಸರ್ಕಾರ ಕೊಟ್ಟ ಮಾತಿಗೆ ತಪ್ಪುವುದು ಸರಿಯಲ್ಲ. 2016ರಲ್ಲಿ ವಿರೋಧ ಪಕ್ಷದಲ್ಲಿ ಇದ್ದಾಗ ಯಡಿಯೂರಪ್ಪ ಸಮಸ್ಯೆ ಬಗೆಹರಿಸುವಂತೆ ಆಗಿನ ಆಡಳಿತ ಪಕ್ಷಕ್ಕೆ ಹೇಳಿದ್ದರು. ಇದೀಗ ನೀವೇ ಅಧಿಕಾರದಲ್ಲಿ ಇದ್ದೀರಿ. ಅಂದು ಇಂದು ಕೊಟ್ಟ ಮಾತಿನಂತೆ ನಡೆಯಿರಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.