ETV Bharat / state

ಕೊಡಗನ್ನು ಸ್ವಿಟ್ಜರ್ಲೆಂಡ್‌‌, ಕಾಶ್ಮೀರ ಮಾಡಬೇಕಿಲ್ಲ: ಸಚಿವ ಅಶ್ವತ್ಥನಾರಾಯಣ್ - etv bharat kannada

ಮೈಸೂರು ಜಿಲ್ಲೆ ಪ್ರವಾಸೋದ್ಯಮದಲ್ಲಿ ವಿಶ್ವದ ಗಮನ ಸೆಳೆದಿದೆ. ಅಲ್ಲಿ ತ್ವರಿತವಾಗಿ ಅಭಿವೃದ್ಧಿ ಕಾರ್ಯ ಮಾಡಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಹೇಳಿದ್ದಾರೆ.

Minister Dr Aswatthanarayan
ಕೊಡಗನ್ನು ಸ್ವಿಟ್ಜರ್ಲೆಂಡ್‌‌, ಕಾಶ್ಮೀರ ಮಾಡಬೇಕಿಲ್ಲ: ಸಚಿವ ಅಶ್ವತ್ಥನಾರಾಯಣ್
author img

By

Published : Feb 20, 2023, 6:56 PM IST

ಬೆಂಗಳೂರು: "ರಾಜ್ಯದ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕೊಡಗನ್ನು ಸ್ವಿಟ್ಜರ್ಲೆಂಡ್‌‌ ಅಥವಾ ಕಾಶ್ಮೀರವನ್ನಾಗಿ ಮಾಡಬೇಕಿಲ್ಲ. ಕೊಡಗನ್ನು ಕೊಡಗಾಗಿಯೇ ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕಿದೆ" ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಹೇಳಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ.ತಿಮ್ಮಯ್ಯ ಪರ ನಾಗರಾಜ್ ಯಾದವ್ ಕೇಳಿದ ಪ್ರಶ್ನೆಗೆ ಆನಂದ್ ಸಿಂಗ್ ಪರ ಸಚಿವರು ಉತ್ತರಿಸಿದರು.

"ಮೈಸೂರು ಪ್ರವಾಸಿ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಸಾರಿಗೆ ಸೌಲಭ್ಯ, ವಸತಿ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪುಸಲು ಆಗುತ್ತಿರುವ ವಿಳಂಬ ತಡೆಗೆ ಕ್ರಮ ಕೈಗೊಂಡು, ತ್ವರಿತವಾಗಿ ಅಭಿವೃದ್ಧಿ ಕಾರ್ಯ ಮಾಡಲಿದ್ದೇವೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡಬೇಕು, ನೀವು ಏನು ಮಾಡಿಲ್ಲ ಅದನ್ನು ನಾವು ಮಾಡುತ್ತಿದ್ದೇವೆ ಅಲ್ಲಿಯವರೇ ಸಿಎಂ ಇದ್ದರೂ ಅಭಿವೃದ್ಧಿ ಮಾಡಿರಲಿಲ್ಲ" ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಟಾಂಗ್ ನೀಡಿದರು. ನಂತರ ಕೊಡಗನ್ನು ಸ್ವಿಟ್ಜರ್ಲೆಂಡ್‌‌ ಮಾದರಿ ಅಭಿವೃದ್ಧಿ ಮಾಡಬೇಕು ಎನ್ನುವುದನ್ನು ತಳ್ಳಿಹಾಕಿದ ಸಚಿವರು, "ಕೊಡಗನ್ನು ಸ್ವಿಟ್ಜರ್ಲೆಂಡ್‌‌, ಕಾಶ್ಮೀರ ಮಾಡಬೇಕಿಲ್ಲ, ಕೊಡಗನ್ನು ಕೊಡಗನ್ನಾಗಿಯೇ ಮಾಡಬೇಕಿದೆ" ಎಂದರು.

ಕರಾವಳಿ ಪ್ರವಾಸಿ ತಾಣಗಳ ಅಭಿವೃದ್ಧಿ: "ರಾಜ್ಯದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಮೂಲಸೌಕರ್ಯ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ" ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪರ ಅಶ್ವತ್ಥನಾರಾಯಣ್ ಉತ್ತರಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಅಭಿವೃದ್ಧಿ ಕಾರ್ಯ ನಡೆಸಲು ನಿಯಮಗಳೂ ಸರಳೀಕರಣಗೊಂಡಿವೆ ಹಾಗಾಗಿ ಕರಾವಳಿ ಪ್ರದೇಶದ ಪ್ರವಾಸೀತಾಣಗಳ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತದೆ" ಎಂದು ಹೇಳಿದರು.

ಪದೋನ್ನತಿ ಶಿಕ್ಷಕರ ವೇತನ ವಿಚಾರ: "ಪದೋನ್ನತಿ ಪಡೆದ ಶಿಕ್ಷಕರಿಗೆ ವೇತನದಲ್ಲಿ ಅನ್ಯಾಯವಾಗಿರುವುದು ನಿಜ. ಸ್ಟೆಪ್ ಆಫ್ ರೀತಿ ವ್ಯವಸ್ಥೆ ಜಾರಿ ಸೇರಿದಂತೆ ಎಲ್ಲ ಲೋಪ ಸರಿಪಡಿಸುವ ಕುರಿತ ಪರಿಶೀಲನೆ ನಡೆಸಲಾಗುತ್ತದೆ" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಎಸ್.ವಿ.ಸಂಕನೂರು ಮತ್ತು ಶಶಿಲ್ ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಬಡ್ತಿ ಪಡೆದ ಶಿಕ್ಷಕರಿಗೆ ವೇತನದಲ್ಲಿ ಅನ್ಯಾಯ ಆಗಿರುವುದು ನಿಜ, ಪದೋನ್ನತ ಪಡೆಯದವರಿಗೆ ಹೆಚ್ಚು ವೇತನ ಸಿಗುತ್ತಿದೆ. ಆದರೆ, ಬಡ್ತಿ ಪಡೆದವರಿಗೆ ಮಾತ್ರ ಕಡಿಮೆ ಇದೆ. ಏಳನೇ ವೇತನ ಆಯೋಗದಲ್ಲಿ ಅದನ್ನು ಸರಿಪಡಿಸಲಾಗುತ್ತದೆ‌. ಸ್ಟೆಪ್ ಆಫ್ ರೀತಿ ವ್ಯವಸ್ಥೆ ಜಾರಿ ಸೇರಿದಂತೆ ಎಲ್ಲ ಲೋಪ ಸರಿಪಡಿಸುವ ಕುರಿತ ಪರಿಶೀಲನೆ ನಡೆಸಲಾಗುತ್ತದೆ" ಎಂದು ತಿಳಿಸಿದರು.

ಪದೋನ್ನತಿ ನೀಡಲು ವಿವಿ ಸ್ವಾಯತ್ತ: ಕಲಾಪದಲ್ಲಿ ಬಿಜೆಪಿ ಸದಸ್ಯ ತಳವಾರ ಸಾಬಣ್ಣ ಪ್ರಶ್ನೆಗೆ ಉತ್ತರಿಸಿದ ಡಾ.ಅಶ್ವತ್ಥನಾರಾಯಣ್, "ವಿವಿಗಳಲ್ಲಿ ಬೋಧಕೇತರ ಸಿಬ್ಬಂದಿ ಪದೋನ್ನತ ಬೇಕಾದ ಕಾಲಕ್ಕೆ ಸಿಗುತ್ತಿಲ್ಲ. 75 ನೇರ ನೇಮಕಾತಿ 25 ಪದೋನ್ನತ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಪದೋನ್ನತಿ ಆಗುವ ಅವಕಾಶ ಬಹಳ ಕಡಿಮೆ ಇದೆ. ಇದನ್ನು ಪರಿಶೀಲನೆ ಮಾಡಿ ಸರಿಪಡಿಸಬೇಕಿದೆ ಎನ್ನುವ ಬೇಡಿಕೆಯನ್ನು ಸದಸ್ಯರು ಇಟ್ಟಿದ್ದಾರೆ, ಆದರೆ ವಿವಿಗಳಿಗೆ ಸಂಪೂರ್ಣ ಸ್ವಾಯತ್ತತೆ ಇದೆ, ಅದರಂತೆ ನೇರ ನೇಮಕಾತಿ, ಪದೋನ್ನತಿ ಕೆಲಸ ಅವರೇ ರೂಪಿಸಿಕೊಳ್ಳಲಿದ್ದಾರೆ. ವಿವಿ ಕಳಿಸುವ ಶಿಫಾರಸು ರಾಜ್ಯಪಾಲರಿಗೆ ಕಳಿಸುತ್ತೇವೆ ಅಷ್ಟೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ, ನೇಮಕಾತಿ, ಪದೋನ್ನತಿಗೆ ಎಲ್ಲ ಅವಕಾಶ ಇದೆ. ವಿವಿಗಳೇ ಅದನ್ನು ಮಾಡುತ್ತಿವೆ" ಎಂದರು.

ಕಾಡ್ಗಿಚ್ಚು ನಿಯಂತ್ರಣಕ್ಕೆ ಕ್ರಮ: "ಕಪ್ಪತ್ತಗುಡ್ಡ ಸೇರಿದಂತೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ಕಾಡಿಗೆ ಬೆಂಕಿ ಬೀಳುತ್ತಿರುವಿದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸಚಿವ ಅಶ್ವತ್ಥನಾರಾಯಣ್ ತಿಳಿಸಿದರು. ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು, "ಸಾಲುಮರದ ತಿಮ್ಮಕ್ಕ ಪಾರ್ಕ್, ಕಪ್ಪತ್ತಗುಡ್ಡ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು 55 ಹೆಕ್ಟೇರ್ ಅರಣ್ಯ ನಾಶವಾಗಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಕಪ್ಪತ್ತಗುಡ್ಡಕ್ಕೆ ಬೆಂಕಿ ಬೀಳುತ್ತಲೇ ಇದೆ ಇದರ ತಡೆ ಇನ್ನು ಆಗಿಲ್ಲ, ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು" ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ್, "ವನ್ಯ ಸಂರಕ್ಷಣೆ ನಮ್ಮ ಜವಾಬ್ದಾರಿ, ಇನ್ನಷ್ಟು ಹೆಚ್ಚಿನ ಜವಾಬ್ದಾರಿ ವಹಿಸಿ ಕಾಡಿಗೆ ಬೆಂಕಿ ಬಾರದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ, ಹಲವಾರು ವರ್ಷದಿಂದ ಎಲ್ಲಾ ಕಾಡುಪ್ರದೇಶಗಳು ಇದೇ ಸಮಸ್ಯೆ ಎದುರಿಸುತ್ತಿವೆ, ಹಾಗಾಗಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಆದ್ಯತೆ ಮೇಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ, ಉದ್ದೇಶ ಪೂರ್ವಕ ಬೆಂಕಿ ಹಾಕುವುದು ಮತ್ತು ಬೆಂಕಿ ಆಕಸ್ಮಿಕ ಎರಡೂ ಇದೆ. ಇದರ ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತದೆ" ಎಂದು ಹೇಳಿದರು.

ಹಿಟ್ ಅಂಡ್ ರನ್ ಗ್ರಾಮೀಣದಲ್ಲೇ ಹೆಚ್ಚು: "ನಗರ ಪ್ರದೇಶಗಳ ಹಿಟ್ ಅಂಡ್ ರನ್ ಕೇಸ್ ಪತ್ತೆಯಾಗುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿನ ಹಿಟ್ ಅಂಡ್ ರನ್ ಪ್ರಕರಣ ಪತ್ತೆ ಕ್ಲಿಷ್ಟಕರವಾದ ಕೆಲಸ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಹಿಟ್ ಅಂಡ್ ರನ್ ಅಪಘಾತಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, "ಹಿಟ್ ಅಂಡ್ ರನ್ ಕೇಸ್ ಗ್ರಾಮೀಣ ಪ್ರದೇಶದಲ್ಲಿ ಜಾಸ್ತಿ ಆಗುತ್ತಿದೆ. ನಗರದಲ್ಲಿ ಸಿಸಿಟಿವಿ ಇರುತ್ತದೆ, ಜನ ಇರುತ್ತಾರೆ. ಹಾಗಾಗಿ ಅಪಘಾತ ಮಾಡಿದವರು ಸಿಗುತ್ತಾರೆ. ಆದರೆ ಹಳ್ಳಿಗಳಲ್ಲಿ ಪತ್ತೆಯಾಗಲ್ಲ. ಅಲ್ಲಿನ ಪ್ರಕರಣ ಪತ್ತೆ ಬಹಳ ಕಷ್ಟದಾಯಕ" ಎಂದರು.

"ಅಪಘಾತ ಪ್ರಕರಣಗಳಲ್ಲಿ 2 ಲಕ್ಷ ರೂ ಪರಿಹಾರವನ್ನು ಕೇಂದ್ರದಿಂದ ನೀಡಲಾಗುತ್ತಿದೆ‌. ಇದನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು ಎನ್ನುವುದಕ್ಕೆ ನಮ್ಮ ಸಹಮತ ಇದೆ. ಕೇಂದ್ರದ ಜೊತೆ ಮಾತುಕತೆ ನಡೆಸಲಾಗುತ್ತದೆ" ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಭಾಷಣ ವಿರೋಧಿಸಿ ಸಭಾತ್ಯಾಗ ಮಾಡಿದ ಕಾಂಗ್ರೆಸ್ ಸದಸ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.