ETV Bharat / state

ಮದ್ಯಪಾನ ಮಾಡುವಾಗ ಗೆಳಯರ ನಡುವೆ ಗಲಾಟೆ : ಯುವಕನಿಗೆ ಚೂರಿ ಇರಿತ - ಆನೇಕಲ್​​​ನಲ್ಲಿ ಮಧ್ಯಪಾನ ಮಾಡುವಾಗ ಗೆಳಯರ ನಡುವೆ ಗಲಾಟೆ

ಪ್ರಾಥಮಿಕ ಚಿಕಿತ್ಸೆ ನೀಡಿ ಅನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆನೇಕಲ್ ವೃತ್ತ ನಿರೀಕ್ಷಕ ಮಹಾನಂದ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ..

ಯುವಕನಿಗೆ ಚೂರಿ ಇರಿತ
ಯುವಕನಿಗೆ ಚೂರಿ ಇರಿತ
author img

By

Published : Jan 23, 2022, 7:03 PM IST

ಆನೇಕಲ್ : ಕುವೆಂಪು ಬಗರ ದಿನ್ನೆಯಲ್ಲಿ ಇಂದು ಗೆಳೆಯರೆಲ್ಲರು ಸೇರಿ ಎಣ್ಣೆ ಪಾರ್ಟಿ ಮಾಡುವಾಗ ಮಾತಿಗೆ ಮಾತು ಬೆಳೆದು ಓರ್ವ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ.

ಬನ್ನೇರುಘಟ್ಟ ಸಮೀಪದ ಕಲ್ಕೆರೆಯ ರಾಮಯ್ಯ ಎಂಬುವರ ಮಗ ವಿಜಯ್ ಚೂರಿ ಇರತಕ್ಕೆ ಒಳಗಾದ ಯುವಕನಾಗಿದ್ದಾನೆ. ಬಲಭಾಗದ ಎದೆಗೆ ಆಳಕ್ಕೆ ಚೂರಿಯಿಂದ ಇರಿಯಲಾಗಿದೆ. ಕೂಡಲೇ ಯುವಕರ ತಂಡ ಆಟೋದಲ್ಲಿ ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಅನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆನೇಕಲ್ ವೃತ್ತ ನಿರೀಕ್ಷಕ ಮಹಾನಂದ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.