ETV Bharat / state

'ಆರ್‌ಆರ್‌ಆರ್‌' ಶೂಟಿಂಗ್‌ಗೆ ಬೆಂಗಳೂರಿನ ವಿಂಟೇಜ್ ಕಾರುಗಳು.. - ರವಿ ಪ್ರಕಾಶ್

ಬೆಂಗಳೂರಿನ ಕಾರು ಸಂಗ್ರಹಕಾರ ಡಾ.ರವಿ ಪ್ರಕಾಶ್ ಬಳಿಯಿರುವ ವಿಂಟೇಜ್ ಕಾರುಗಳನ್ನು ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಸಿನಿಮಾದ ಶೂಟಿಂಗ್​​​ಗೆ ತೆರಳಲು ಸಿದ್ಧವಾಗಿವೆ.

ವಿಂಟೇಜ್ ಕಾರು
author img

By

Published : Mar 24, 2019, 3:42 PM IST

ಬೆಂಗಳೂರು : ಭಾರತೀಯ ಚಿತ್ರರಂಗದ ಯಶಸ್ವಿ ನಿರ್ದೇಶಕರಾಜಮೌಳಿಯವರ ಬಹು ನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್' ಚಿತ್ರದಲ್ಲಿ ಬೆಂಗಳೂರಿನ ಡಾ.ರವಿ ಪ್ರಕಾಶ್ ಎಂಬುವರ ವಿಂಟೇಜ್ ಕಾರುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಸಿನಿಮಾದ ಶೂಟಿಂಗ್​​​ ತೆರಳಲು ಈಗ ಕಾರುಗಳು ಸಿದ್ಧವಾಗಿವೆ.

ಆರ್‌ಆರ್‌ಆರ್‌ ಚಿತ್ರ 1920ರ ದಶಕದಲ್ಲಿ ನಡೆದ ಕಥೆಯನ್ನು ಹೊಂದಿದೆ. ಈ ಕಥೆಗೆ ಹೊಂದಾಣಿಕೆ ಆಗುವ ಕಾರುಗಳು ರವಿ ಪ್ರಕಾಶ್ ಬಳಿ ಇವೆ. ಈಗಾಗಲೇ ರಾಜಮೌಳಿ ಕಾರುಗಳನ್ನು ಶೂಟಿಂಗ್​ಗೆ ನೀಡುವಂತೆ ಕೇಳಿದ್ದು, ಅವುಗಳನ್ನು ನೀಡಲು ರವಿ ಪ್ರಕಾಶ್ ಕೂಡ ಒಪ್ಪಿಗೆ ಸೂಚಿಸಿದ್ದಾರಂತೆ. ಎಲ್ಲವೂ ಅಂದುಕೊಂಡಂತಾದರೆ ಕಾರುಗಳು ಶೂಟಿಂಗ್​ಗಾಗಿ ಬೆಂಗಳೂರಿನಿಂದ ಕೋಲ್ಕತಾ ಹಾಗೂ ಪುಣೆ ನಗರಗಳಿಗೆ ತೆರಳಲಿವೆ.

vintage car
ವಿಂಟೇಜ್ ಕಾರು

ಕ್ಲೋಸಪ್ ಶಾಟ್‌ಗಳಿಗೆ ಒರಿಜಿನಲ್​ ಕಾರುಗಳು ಬೇಕಾಗುತ್ತವೆ. ಲಾಂಗ್ ಶಾಟ್‌ಗಳನ್ನು ಗ್ರಾಫಿಕ್ಸ್ ಮೂಲಕ ಮಾಡಿಕೊಳ್ಳಲಾಗುತ್ತದೆ. '225 ವಿಂಟೇಜ್ ಕಾರು" ತುಂಬಾ ಹೆಸರುವಾಸಿ. ಸಾಮಾನ್ಯವಾಗಿ ಜೈಪುರ ರಾಯಲ್ ಕುಟುಂಬಗಳು ಅಂತಹ ಕಾರುಗಳನ್ನು ಬಾಡಿಗೆಗೆ ನೀಡುತ್ತಾರೆ ಎನ್ನುತ್ತಾರೆ ಕಾರು ಸಂಗ್ರಹಕಾರ ರವಿ ಪ್ರಕಾಶ್.

ಬೆಂಗಳೂರಿನ ರವಿ ಪ್ರಕಾಶ್ ತಮ್ಮಲ್ಲಿರುವ ವಿಂಟೇಜ್ ಕಾರುಗಳನ್ನು ಮಲಯಾಳಂ ಸೂಪರ್ ಹಿಟ್ ಚಿತ್ರ 'ಬೆಂಗಳೂರು ಡೇಸ್' ಸೇರಿದಂತೆ ಹಲವಾರು ಚಿತ್ರಗಳಿಗೆ ತಮ್ಮ ಕಾರುಗಳನ್ನು ಬಾಡಿಗೆಗೆ ನೀಡಿದ್ದಾರೆ. ಈಗ ಅವರು ರಾಜಮೌಳಿ ಮನವಿ ಮೇರೆಗೆ 'ಆರ್‌ಆರ್‌ಆರ್' ಚಿತ್ರಕ್ಕೆ ಎರಡು ಕಾರು ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ತೆಲುಗು ಸ್ಟಾರ್‌ ನಟರಾದ ರಾಮ್‌ ಚರಣ್ ತೇಜ ಹಾಗೂ ಜೂನಿಯರ್ ಎನ್‌ಟಿಆರ್ ನಟಿಸಿರುವ, ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಚಿತ್ರವು 2020ರ ಕೊನೆಯಲ್ಲಿ ತೆರೆಗೆ ಬರಲಿದೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.