ಬೆಂಗಳೂರು: ಇದೇ ತಿಂಗಳಲ್ಲಿ ಮಂಡನೆಯಾಗಲಿರುವ ಪಾಲಿಕೆ ಬಜೆಟ್ಗೆ ವಿವಿಧ ವಿಭಾಗಗಳಿಂದ ಮಾಹಿತಿ, ಸಲಹೆ ಸಂಗ್ರಹ ಕೆಲಸ ಚಾಲ್ತಿಯಲ್ಲಿದೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರಿಂದ ಸಲಹೆ ಕೇಳಲು ಬಾಕ್ಸ್ ಅಳವಡಿಸಲಾಗಿದೆ. ಅಲ್ಲದೆ ಇಂದು ಪಾಲಿಕೆ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್ ಶ್ರೀನಿವಾಸ್ ಮಾಧ್ಯಮ ಪ್ರತಿನಿಧಿಗಳ ಜೊತೆ ಸಭೆ ನಡೆಸಿ, ನಗರದ ಅಭಿವೃದ್ಧಿಗೆ ಪೂರಕವಾದ ಬಜೆಟ್ಗೆ ಸಲಹೆಗಳನ್ನು ಕೇಳಿದರು.
ಬಳಿಕ ಮಾತನಾಡಿದ ಅವರು, ಯುಗಾದಿ ಬಳಿಕ ಬಜೆಟ್ ಮಂಡನೆ ಮಾಡಲಾಗುವುದು. ನಗರದ ಶಾಲೆಗಳು, ಪಾರ್ಕ್, ಕೆರೆಗಳು ಮತ್ತು ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಟ್ಟು ಅನುದಾನ ಮೀಸಲಿಡಲಾಗುವುದು. ಹಾಗೇ ವೈಜ್ಞಾನಿಕ ಬಜೆಟ್ ಮಂಡನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.