ಬೆಂಗಳೂರು: ಕರ್ನಾಟಕ ಖಾಸಗಿ ಸ್ನಾತಕೋತ್ತರ ಕಾಲೇಜು ಸಂಘವು ಕರ್ನಾಟಕ ಮ್ಯಾನೇಜ್ಮೆಂಟ್ ಅಪ್ಯುಟ್ಯೂಡ್ ಟೆಸ್ಟ್ (ಕೆಎಂಎಟಿ) 2020ರ ಪ್ರವೇಶ ಪತ್ರವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಕೋವಿಡ್ ಪರಿಸ್ಥಿತಿಯ ನಡುವೆಯೂ ಅಕ್ಟೋಬರ್ 29ರಂದು ಕೆಎಂಎಟಿ ಪರೀಕ್ಷೆ ನಡೆಯಲಿದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮನೆಯಿಂದಲೇ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕೆಎಂಎಟಿ ಅಧಿಕೃತ ವೆಬ್ಸೈಟ್ https://www.kmatindia.com ಮೂಲಕ ಲಾಗಿನ್ ಆಗಿ https://admitcardbuilder.azurewebsites.net/app/E353K59214/ ಲಿಂಕ್ ಕ್ಲಿಕ್ ಮಾಡಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸೂಚನೆಗಳು :
- ವಿದ್ಯಾರ್ಥಿಗಳು ಪರೀಕ್ಷೆಯ ವೇಳೆ ಮೊಬೈಲ್/ ಟ್ಯಾಬ್ ಬಳಸುವಂತಿಲ್ಲ
- ಪರೀಕ್ಷೆಯು ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ವೆಬ್ ಕ್ಯಾಮ್ ಮತ್ತು ಮೈಕ್ರೋಫೋನ್ ಮೂಲಕ ನಡೆಯಲಿದೆ.
- ಮೊಬೈಲ್ ಮೂಲಕ ಪರೀಕ್ಷೆಗೆ ಹಾಜರಾಗುವಂತಿಲ್ಲ