ETV Bharat / state

ಉಪ ಚುನಾವಣೆ ಬಳಿಕ ಮತ್ತೆ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಹೈಕಮಾಂಡ್​ಗೆ ಬಿಟ್ಟ ವಿಚಾರ: ಜಾರ್ಜ್​

author img

By

Published : Nov 27, 2019, 9:13 PM IST

ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರ ಉಪ ಚುನಾವಣೆ ನಂತರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೆ ಜಾರ್ಜ್ ಹೇಳಿಕೆ,kj george talks about kr puram by election
ಕೆ.ಜೆ.ಜಾರ್ಜ್

ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಬಳಿಕ ಮತ್ತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ವಿಚಾರ ಪಕ್ಷದ ಹೈಕಮಾಂಡ್​ಗೆ ಬಿಟ್ಟಿದ್ದು. ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವು ಬದ್ಧ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಅನೈತಿಕ ಸರ್ಕಾರ ಅಧಿಕಾರದಲ್ಲಿದೆ. ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರ ಉಪ ಚುನಾವಣೆ ನಂತರ ಅಸ್ತಿತ್ವ ಕಳೆದುಕೊಳ್ಳಲಿದೆ. ನಂತರ ಹೊಸ ಸರ್ಕಾರ ರಚಿಸುವ ತೀರ್ಮಾನ ಪಕ್ಷದ ಹೈಕಮಾಂಡ್ ಮಾಡಲಿದೆ ಎಂದರು.

ಭೈರತಿ ಬಸವರಾಜು ಸೇರಿ ಯಾರೇ ಸವಾಲು ಹಾಕಿದರೂ ನಾನು ಸ್ವೀಕರಿಸಲ್ಲ. ಈಗಾಗಲೇ ಕೆ.ಆರ್.ಪುರಂ ಮತದಾರ ಬಸವರಾಜುರನ್ನ ಸೋಲಿಸೋ ತೀರ್ಮಾನ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಭೈರತಿ ಬಸವರಾಜ್ ಈ ಬಾರಿ ಕೆ.ಆರ್.ಪುರಂನಲ್ಲಿ ಶೇ. 100ರಷ್ಟು ಸೋಲುತ್ತಾರೆ ಎಂದಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ನಾನು ಗೃಹ ಸಚಿವನಾಗಿದ್ದವನು. ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡಬೇಕು. ಇದೇ ರೀತಿಯಲ್ಲಿ ಪೊಲೀಸ್ ದೌರ್ಜನ್ಯ ಮುಂದುವರೆದರೆ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Intro:NEWSBody:ಉಪಚುನಾವಣೆ ಬಳಿಕ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೈಕಮಾಂಡ್ಗೆ ಬಿಟ್ಟದ್ದು: ಜಾರ್ಜ್

ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಬಳಿಕ ಮತ್ತೆ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ವಿಚಾರ ಪಕ್ಷದ ಹೈಕಮಾಂಡ್ಗೆ ಬಿಟ್ಟದ್ದು, ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತೋ ಅದಕ್ಕೆ ನಾವು ಬದ್ಧ ಎಂದು ಮಾಜಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಅನೈತಿಕ ಸರ್ಕಾರ ಅಧಿಕಾರದಲ್ಲಿದೆ. ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರ ಉಪ ಚುನಾವಣೆ ನಂತರ ಅಸ್ಥಿತ್ವ ಕಳೆದುಕೊಳ್ಳಲಿದೆ. ನಂತರ ಹೊಸ ಸರ್ಕಾರ ರಚಿಸುವ ತೀರ್ಮಾನ ಪಕ್ಷದ ಹೈಕಮಾಂಡ್ ಮಾಡಲಿದೆ ಎಂದರು.
ಬೈರತಿ ಬಸವರಾಜು ಸೇರಿ ಯಾರೇ ಸವಾಲು ಹಾಕಿದರೂ ನಾನು ಸ್ವೀಕರಿಸಲ್ಲ. ಈಗಾಗಲೇ ಕೆ ಆರ್ ಪುರಂದ ಮತದಾರ ಬಸವರಾಜರನ್ನ ಸೋಲಿಸೋ ತೀರ್ಮಾನ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು ಇಂದಾಗಿ ಕೆಲಸ ಮಾಡ್ತಿದ್ದೇವೆ. ನಾವು ಗೆಲ್ತೇವೆ. ಬೈರತಿ ಬಸವರಾಜ್ ಈ ಬಾರಿ ಕೆ ಆರ್ ಪುರಂ ನಲ್ಲಿ ಶೇ.100 ರಷ್ಟು ಸೋಲುತ್ತಾರೆ. ಜನ ಅವರನ್ನು ವಿರೋಧ ಮಾಡುತ್ತಿದ್ದಾರೆ. ಕೋರ್ಟ್ ಅವರನ್ನು ಅನರ್ಹರು ಅಂತ ಹೇಳಿದೆ. ಕಳೆದಬಾರಿ ಲೋಕಸಭಾ ಚುನಾವಣೆಯಲ್ಲಿ ಅವರು 15 ಸಾವಿರ ಮತ ಕಡಿಮೆ ಕೊಡಿಸಿದ್ರು. ಈ ಬಾರಿ ಅವರು ನಮ್ಮ ಪಕ್ಷದ ಗುರುತು , ಹಾಗೆ ನಾರಾಯಣ ಸ್ವಾಮಿ ಅವರ ನೇತ್ರತ್ವದಲ್ಲಿ ನಾವು ಗೆಲ್ಲುತ್ತೇವೆ. ಕೆ ಆರ್ ಪುರ ಜನರು ಅವರನ್ನು ಶಾಶ್ವತವಾಗಿ ಸೋಲಿಸುತ್ತಾರೆ. ಅದು ಕಾಂಗ್ರೆಸ್ ಕ್ಷೇತ್ರ. ಅಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅವರು ಇದೇ ಮೊದಲ ಬಾರಿ ಬಿಜೆಪಿ ಮೂಲಕ ನಿಂತಿದ್ದಾರೆ. ನಾನೇನು ಮತದಾರ ಅಲ್ಲ ಅವರು ಮಾಡಿರುವುದಕ್ಕೆ ಮತದಾರರು ಬೇಜಾರಾಗಿದ್ದಾರೆ. ಬಿಜೆಪಿ ಅವರೆ ಅವರನ್ನು ಬೆಂಬಲಿಸುತ್ತಿಲ್ಲ ಎಂದರು.
ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪೋಲಿಸ್ ದೌರ್ಜನ್ಯ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ , ನಾನು ಗೃಹ ಸಚಿವನಾಗಿದ್ದವನು. ಪೋಲಿಸರು ನ್ಯಾಯಯುತವಾಗಿ ಕೆಲಸ ಮಾಡಬೇಕು. ಇದೇ ರೀತಿಯಲ್ಲಿ ಪೋಲಿಸ್ ದೌರ್ಜನ್ಯ ಮುಂದುವರೆದರೆ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
Conclusion:NEWS
ETV Bharat Logo

Copyright © 2024 Ushodaya Enterprises Pvt. Ltd., All Rights Reserved.