ಬೆಂಗಳೂರು: ಬೃಹತ್ ಮಹಾನಗರ ಪಾಲಿಕೆಯ ಪಶ್ಚಿಮ ವಲಯದಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ತ್ರಿಚಕ್ರ ವಾಹನ ವಿತರಣೆಯಲ್ಲಿ 3 ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಬಿಎಂಪಿಯ ಪಶ್ವಿಮ ವಿಭಾಗದ ಜಂಟಿ ಆಯುಕ್ತ ಚಿದಾನಂದ್ ಹಾಗೂ ಕಲ್ಯಾಣ ಅಧಿಕಾರಿ ಟಿ. ಲಲಿತಾ ಹಾಗೂ , ವಿಜಯ ರಾಜ, ಅರುಣ್, ಚಂದ್ರು ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಎಸಿಬಿಗೆ ದೂರು ನೀಡಿದ್ದಾರೆ.
2016 ,17,18,19ನೇ ಸಾಲಿನಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಸ್ವಾವಲಂಬಿಯಾಗಿ ಬದುಕಲು ಬಿಬಿಎಂಪಿಯಿಂದ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಲಾಗ್ತಿತ್ತು. 221 ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳು ಮಂಜೂರಾಗಿದ್ದವು. ಆದರೆ, ನಿಜವಾದ ಫಲಾನುಭವಿಗಳಿಗೆ ನೀಡದೇ ತಮಗಿಷ್ಟ ಬಂದ ಹಾಗೆ ಬೇಕಾದವರಿಗೆ ಅರ್ಹತೆಯೇ ಇಲ್ಲದವರ ಪಟ್ಟಿ ತಯಾರಿಸಿ ತ್ರಿಚಕ್ರ ವಾಹನಗಳನ್ನ ಹಂಚಿಕೆ ಮಾಡ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.