ETV Bharat / state

ಸಿಡಿ ಪ್ರಕರಣ: ಸರ್ಕಾರದ ವಿಶೇಷ ಅಭಿಯೋಜಕರಾಗಿ ಕಿರಣ್‌ ಜವಳಿ, ಪ್ರಸನ್ನ ಕುಮಾರ್ ನೇಮಕ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ವಾದ ಮಂಡನೆಗೆ ವಿಶೇಷ ಅಭಿಯೋಜಕರಾಗಿ ವಕೀಲರಾದ ಎಸ್.ಕಿರಣ್ ಜವಳಿ ಹಾಗೂ ಪಿ.ಪ್ರಸನ್ನ ಕುಮಾರ್ ಅವರನ್ನು ನೇಮಕ ಮಾಡಿ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

author img

By

Published : Apr 2, 2021, 5:02 PM IST

Kiran javali, Prasanna Kumar appointed as SPP
ಎಸ್ಪಿಪಿಗಳಾಗಿ ಕಿರಣ್ ಜವಳಿ, ಪ್ರಸನ್ನಕುಮಾರ್ ನೇಮಕ

ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡನೆಗೆ ವಿಶೇಷ ಅಭಿಯೋಜಕರಾಗಿ ಹೈಕೋರ್ಟ್ ವಕೀಲರಾದ ಎಸ್.ಕಿರಣ್ ಜವಳಿ ಹಾಗೂ ಪಿ.ಪ್ರಸನ್ನ ಕುಮಾರ್ ಅವರನ್ನು ಸರ್ಕಾರ ನೇಮಿಸಿದೆ.

ಈ ಕುರಿತು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಯೋಜನೆ ಪರ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್​​ನಲ್ಲಿ ವಾದ ಮಂಡಿಸಲಿದ್ದಾರೆ. ವಕೀಲಿಕೆಯಲ್ಲಿ 35 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಕಿರಣ್ ಜವಳಿ ಕ್ರಿಮಿನಲ್ ಪ್ರಕರಣ ನಡೆಸುವಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ.

ಅಂತೆಯೇ ಸಿಬಿಐ, ಎನ್‌ಐಎ ಪರ ವಕೀಲರಾದ ಪಿ.ಪ್ರಸನ್ನ ಕುಮಾರ್ ನಕಲಿ ಛಾಪಾ ಕಾಗದ ಹಗರಣ, ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧದ ಗಣಿ ಹಗರಣ ಸೇರಿ ಹಲವು ಪ್ರಮುಖ ಪ್ರಕರಣಗಳಲ್ಲಿ ಯಶಸ್ವಿ ವಾದ ಮಂಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.