ETV Bharat / state

ಪಿಎಸ್​​ಐ, ಹೆಡ್​ಕಾನ್ಸ್​ಟೇಬಲ್​ರಿಂದಲೇ ಆರೋಪಿ ಅಪಹರಿಸಿ ಹಣಕ್ಕೆ ಬೇಡಿಕೆ ಆರೋಪ: ಪೊಲೀಸಪ್ಪ ಸೇರಿ ಮೂವರ ಬಂಧನ​ - ಮಾರತಹಳ್ಳಿ ಪೊಲೀಸರು

ಪೊಲೀಸರು ಆರೋಪಿಯನ್ನು ಅಪಹರಿಸಿ ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

Kidnapping by the police  demand for money  Arrest of three including head constable  ಹೆಡ್​ಕಾನ್ಸ್​ಟೇಬಲ್​ನಿಂದ ಕಿಡ್ನ್ಯಾಪ್  ಗನ್​ನಿಂದ ಬೆದರಿಕೆ  ಪೋಲಿಸಪ್ಪ ಸೇರಿ ಮೂವರ ಬಂಧನ  ಕಿಡ್ನ್ಯಾಪ್​ ಮಾಡಿ ಲಕ್ಷ ಲಕ್ಷ ಹಣಕ್ಕೆ ಡಿಮ್ಯಾಂಡ್  ಬಾಗಲೂರು ಪೊಲೀಸರಿಗೆ ತನಿಖೆ ವೇಳೆ ಕಿಡ್ನ್ಯಾಪ್  ನಗರದಲ್ಲಿ ಶಾಕಿಂಗ್​ ಪ್ರಕರಣ  ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಇಬ್ಬರು ಪೊಲೀಸರು  ಮಾರತಹಳ್ಳಿ ಪೊಲೀಸರು  ಬಾಗಲೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ
Kidnapping by the police
author img

By

Published : Mar 22, 2023, 10:20 PM IST

Updated : Mar 23, 2023, 9:10 AM IST

ಬೆಂಗಳೂರು: ಕಳ್ಳತನ, ಅಪಹರಣದ ಇನ್ನಿತರ ಅಪರಾಧಕ್ಕೆ ಸಂಬಂಧಿಸಿದಂತೆ ದೂರುಗಳು ಬಂದ್ರೆ ಅವುಗಳನ್ನು ದಾಖಲಿಸಿಕೊಂಡು ತಕ್ಷಣ ಕ್ರಮ ಕೈಗೊಳ್ಳುವುದು ಪೊಲೀಸರ ಕೆಲಸ. ಆದ್ರೆ ಇಲ್ಲಿ ಪೊಲೀಸರೇ ಕಿಡ್ನಾಪರ್ಸ್​ ಆಗಿದ್ದಾರೆ. ಇಂತಹದೊಂದು ವಿಚಿತ್ರ ಆರೋಪ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.

ಹೌದು, ನಗರದಲ್ಲಿ ಶಾಕಿಂಗ್​ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಆರೋಪದಡಿ ಇಬ್ಬರು ಪೊಲೀಸರು ಸಿಲುಕಿಕೊಂಡಿದ್ದಾರೆ. ಪ್ರಕರಣ ಭೇದಿಸುವವರೆಗೂ ಬಾಗಲೂರು ಪೊಲೀಸರಿಗೆ ಆರೋಪಿಗಳು ಪೊಲೀಸರೆಂದು ಗೊತ್ತಿರಲಿಲ್ಲ. ಪ್ರಕರಣ ಭೇದಿಸಿದ ಬಳಿಕ ಆರೋಪಿ ಪಿಎಸ್​ಐ ಮತ್ತು ಹೆಡ್​ ಕಾನ್ಸ್​ಟೇಬಲ್​ ಎಂಬುದು ತಿಳಿದು ಬಂದಿದೆ.

ಏನಿದು ಪ್ರಕರಣ: ಶನಿವಾರ ಹುಲಿ ಉಗುರು, ಚರ್ಮವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾರತಹಳ್ಳಿ ಪೊಲೀಸರು ಕರೆದೊಯ್ದಿದ್ದರು. ಆತನ ವಿರುದ್ಧ ಪ್ರಕರಣ ದಾಖಲಿಸದೇ ಮತ್ತು ಪೊಲೀಸ್​ ಠಾಣೆಗೆ ಕರೆದೊಯ್ಯದೇ ಬೇರೆ ಕಡೆ ಆರೋಪಿಯನ್ನು ಬಚ್ಚಿಟ್ಟಿದ್ದರು. ನಂತರ ಆರೋಪಿಯ ಸಂಬಂಧಿಕರಿಗೆ ಕರೆ ಮಾಡಿ 40 ಲಕ್ಷಕ್ಕೆ ಡಿಮ್ಯಾಂಡ್​ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿ ಕುಟುಂಬಸ್ಥರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬಾಗಲೂರು ಪೊಲೀಸರು ಕಿಡ್ನಾಪ್​ ಮಾಡಿದವರ ಪತ್ತೆಗೆ ಜಾಲ ಬೀಸಿದ್ದರು.

ಬಾಗಲೂರು ಪೊಲೀಸರಿಗೆ ತನಿಖೆ ವೇಳೆ ಕಿಡ್ನಾಪ್ ಮಾಡಿದ್ದವರು ಮಾರತಹಳ್ಳಿ ಠಾಣೆ ಪಿಎಸ್​ಐ ರಂಗೇಶ್ ಮತ್ತು ಹೆಡ್ ಕಾನ್ಸ್​ಟೇಬಲ್ ಹರೀಶ್ ಎಂಬುದು ತಿಳಿದು ಬಂದಿದೆ. ಪ್ರಕರಣವೊಂದರ ಸಂಬಂಧ ಆರೋಪಿಯನ್ನ ಇಬ್ಬರು ಪೊಲೀಸರು ಕರೆದೊಯ್ದಿದ್ದರು. ಈ ವೇಳೆ ಪಿಎಸ್​ಐ ರಂಗೇಶ್​ ಆರೋಪಿ ತಲೆಗೆ ಗನ್ ಇಟ್ಟು ಹಣ ಕೊಡುವಂತೆ ಅವರ ಕಡೆಯವರಿಗೆ ಕರೆ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರೇ ಕಿಡ್ನಾಪ್​ ಮಾಡಿದ್ದಾರೆ ಎಂಬುದರ ಬಗ್ಗೆ ಕಮಿಷನರ್ ಪ್ರತಾಪ್ ರೆಡ್ಡಿಗೆ ಮಾಹಿತಿ ರವಾನಿಸಲಾಗಿತ್ತು.

ಇದನ್ನೂ ಓದಿ.. ರಮೇಶ್ ಚೌಹಾನ್​​ ಏಕೈಕ ಪುತ್ರಿ ಜಯಂತಿ ಈಗ ಬಿಸ್ಲೇರಿ ಕಂಪನಿ ಉತ್ತರಾಧಿಕಾರಿ..

ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಕಮಿಷನರ್ ಪ್ರತಾಪ್ ರೆಡ್ಡಿ ಸೂಚನೆ ಕೊಟ್ಟಿದ್ದರು. ಕಮಿಷನರ್​ ಸೂಚನೆ ಮೇರೆಗೆ ಮಂಗಳವಾರ ಹೆಡ್ ಕಾನ್ಸ್​ಟೇಬಲ್​ ಹರೀಶ್​​ನನ್ನು ಬಂಧಿಸಿರುವ ಬಾಗಲೂರು ಪೊಲೀಸರು ತಲೆಮರೆಸಿಕೊಂಡಿರುವ ಪಿಎಸ್​ಐ ರಂಗೇಶ್​ಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಈ ಘಟನೆ ಕುರಿತು ಬಾಗಲೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಎಂ ಶಿವರಾಮಯ್ಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ರಾಮಾಂಜನಿಯನ್ನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಾಗಿದೆ. ಶಬ್ಬೀರ್, ಜಾಕೀರ್, ಪೊಲೀಸರಾದ ಪಿಎಸ್ಐ ರಂಗೇಶ್, ಕಾನ್ಸ್​ಟೇಬಲ್​ ಹರೀಶ್ ಕೆ.ಎಲ್, ಮಹದೇವ ನಾಯಕ್, ಮಹೇಶ್ ಅವರ ಮೇಲೆ ದೂರು ದಾಖಲಾಗಿದೆ.

ಎ-2 ಆರೋಪಿ ಹರೀಶ್, ಎ-3 ಆರೋಪಿ ಶಬ್ಬೀರ್ ಹಾಗೂ ಎ-4 ಆರೋಪಿ ಜಾಕೀರ್ ಸೇರಿ ಮೂವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಓದಿ: ಕಲಬುರಗಿಯಲ್ಲಿ ಹಾಡಹಗಲೇ ನ್ಯಾಯವಾದಿಯ ಬರ್ಬರ ಕೊಲೆ..!

Last Updated : Mar 23, 2023, 9:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.