ಬೆಂಗಳೂರು: ಹಣದ ಆಸೆಗೆ ಬಿದ್ದವನೊಬ್ಬ ತನ್ನ ಸ್ನೇಹಿತನನ್ನೇ ಅಪಹರಣ ಮಾಡಿದ ಪ್ರಕರಣವೊಂದು ನಗರದಲ್ಲಿ ನಡೆದಿದೆ. ಆದರೆ, ಈ ಆರೋಪಿಯನ್ನ ಕೆಲವೇ ಗಂಟೆಯಲ್ಲಿ ಬಂಧಿಸುವಲ್ಲಿ ಉತ್ತರ ವಿಭಾಗದ ಮಲ್ಲೇಶ್ವರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಯದ್ ರಾಹೀಲ್ ಎಂಬಾತ ಬಂಧಿತ ಆರೋಪಿ. ಮಲ್ಲೇಶ್ವರಂನಲ್ಲಿ ಬ್ಯುಸಿನೆಸ್ ಮಾಡ್ತಿರುವ ಸುದೀಪ್ ಎಂಬುವರ ಜತೆಗೆ ಆರೋಪಿ ರಾಹೀಲ್‌ಗೆ ಸ್ನೇಹವಿತ್ತು. ಆದರೆ, ಮೊನ್ನೆ ಫೆಬ್ರವರಿ 9ರಂದು ಏಕಾಏಕಿ ಸ್ನೇಹಿತ ಸುದೀಪ್‌ನ ಕಿಡ್ನ್ಯಾಪ್ ಮಾಡಿದ್ದ ರಾಹೀಲ್ ಮತ್ತವನ ತಂಡ, ಕೆಲವೇ ಕ್ಷಣಗಳಲ್ಲಿ ಸುದೀಪ್ ಅಕ್ಕನಿಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿತ್ತು.
ತಕ್ಷಣ ಸುದೀಪ್ ಅಕ್ಕ ಮೊದಲು ಕೆಆರ್‌ಪುರಂ ಠಾಣೆಗೆ ದೂರು ನೀಡಿದ್ದಾರೆ. ನಂತರ ಮಲ್ಲೇಶ್ವರಂ ಠಾಣೆಗೂ ತೆರಳಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಪೊಲೀಸರು ಆರೋಪಿಯ ಜಾಡು ಹಿಡಿದು ಹೊರಟಾಗ ಸುಳಿವು ಸಿಕ್ಕಿದೆ. ತಕ್ಷಣ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣ ಬೇಧಿಸಿ ಗೋರಿಪಾಳ್ಯದ ಸ್ಮಶಾನದ ಬಳಿ ಕಿಡ್ನ್ಯಾಪರ್ ಸಯ್ಯದ್ ರಹೀಲ್ ಹಾಗೂ ಆತನ ಸಂಗಡಿಗರನ್ನ ಬಂಧನ ಮಾಡಿ, ಸುದೀಪ್ ಅವರನ್ನ ರಕ್ಷಣೆ ಮಾಡಿದ್ದರು.
ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದಾಗ ಸೈಯದ್ ರಾಹೀಲ್ ಮತ್ತು ಸಂದೀಪ್ ಸುಮಾರು ವರ್ಷಗಳ ಸ್ನೇಹಿತರಾಗಿರುವ ವಿಚಾರ ಬಾಯಿಬಿಟ್ಡಿದ್ದ. ಹಾಗೆ ಸೈಯದ್ ರಾಹೀಲ್ ಹಣ ಇಲ್ಲದೇ ಬಿಕಾರಿಯಾಗಿದ್ದ. ಸುದೀಪ್ ಬಳಿ ಹಣ ಇರುವ ಕಾರಣಕ್ಕಾಗಿಯೇ ಕಿಡ್ನ್ಯಾಪ್ ಮಾಡಿರೋದಾಗಿ ಬಾಯಿ ಬಿಟ್ಟಿದ್ದಾನೆ.