ETV Bharat / state

ಹ್ಯಾಕರ್​ ಸ್ನೇಹಿತನ ಕಿಡ್ನಾಪ್​ ಪ್ರಕರಣ : ಡ್ರಗ್ಸ್​ ಆರೋಪಿ ವಿರುದ್ಧ ಮತ್ತೊಂದು ಕೇಸ್​! - ಬೆಂಗಳೂರು ಅಪರಾಧ,

ಬೆಂಗಳೂರಿನ ಕೆಂಪೇಗೌಡನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಳಿ ಡ್ರಗ್ಸ್ ಕೇಸ್​ನಲ್ಲಿ ಬಂಧನವಾದ ಡ್ರಗ್ಸ್​ ಪ್ರಕರಣದ ಆರೋಪಿ ವಿರುದ್ಧ ಕಿಡ್ನಾಪ್ ಕೇಸ್ ದಾಖಲಾಗಿದೆ.

Kidnap case register, Kidnap case register on Drug accused, Kidnap case register on Drug accused in Bangalore, Bangalore crime, Bangalore crime news, ಕಿಡ್ನಾಪ್ ಕೇಸ್ ದಾಖಲು, ಡ್ರಗ್ ಆರೋಪಿ ಮೇಲೆ ಕಿಡ್ನಾಪ್ ಕೇಸ್ ದಾಖಲು, ಬೆಂಗಳೂರಿನಲ್ಲಿ ಡ್ರಗ್ ಆರೋಪಿ ಮೇಲೆ ಕಿಡ್ನಾಪ್ ಕೇಸ್ ದಾಖಲು, ಬೆಂಗಳೂರು ಅಪರಾಧ, ಬೆಂಗಳೂರು ಅಪರಾಧ ಸುದ್ದಿ,
ಹ್ಯಾಕರ್​ ಸ್ನೇಹಿತನ ಕಿಡ್ನಾಪ್​ ಪ್ರಕರಣ
author img

By

Published : Dec 23, 2020, 9:02 AM IST

ಬೆಂಗಳೂರು: ಕೆಂಪೇಗೌಡನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಳಿ ಡ್ರಗ್ಸ್ ಕೇಸ್​ನಲ್ಲಿ ಬಂಧನವಾದ ಸುನೀಶ್ ಹೆಗ್ಡೆ ಮೇಲೆ ಮತ್ತೊಂದು ಕೇಸ್ ದಾಖಲು ಆಗಿದೆ. ಸದ್ಯ ಜಯನಗರ ಪೊಲೀಸರು ಎಫ್​ಐಆರ್ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.

ಸಿಸಿಬಿಯಿಂದ ಈಗಾಗಲೇ ಬಂಧಿತನಾದ ಪ್ರತಿಷ್ಠಿತ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಸ್ನೇಹಿತನನ್ನೇ ಜಯನಗರ ಬಳಿ ಇರುವ ಮನೆಗೆ ನುಗ್ಗಿ ಸುನೀಶ್ ಆ್ಯಂಡ್ ಗ್ಯಾಂಗ್ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾರೆ. ಶ್ರೀಕಿಯ ಆತ್ಮೀಯ ಸ್ನೇಹಿತನಾಗಿದ್ದ ಶಶಾಂಕನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಶ್ರೀಕಿಯ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಲವು ವೆಬ್​ಸೈಟ್, ಗೇಮ್ ಆ್ಯಪ್, ಸರ್ಕಾರಿ ಆ್ಯಪ್​ಗಳನ್ನು ಹ್ಯಾಕ್ ಮಾಡಿಕೊಡುವ ಕೆಲಸ ಮಾಡ್ತಿದ್ದ ಶ್ರೀಕಿ. ಸುನೀಶ್ ಹೆಗ್ಡೆಗೂ ಹ್ಯಾಕ್ ಮಾಡಿಕೊಡುವುದಾಗಿ‌ 50 ಲಕ್ಷ ಹಣವನ್ನು ಶ್ರೀಕಿ ಪಡೆದಿದ್ದ. ಆದರೆ ಆ್ಯಪ್​ಗಳನ್ನು ಹ್ಯಾಕ್ ಮಾಡಿಕೊಡದೆ ಶ್ರೀಕಿ ತಲೆಮರಿಸಿಕೊಂಡಿದ್ದ. ಹೀಗಾಗಿ ಶ್ರೀಕಿಯನ್ನು ಶಶಾಂಕನೇ ಅಡಗಿಸಿಟ್ಟಿದ್ದಾನೆ ಎಂದು ಅಕ್ಟೋಬರ್ 1 ರಂದು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದನು.

ಹಲ್ಲೆ ಬಳಿಕ ಶಶಾಂಕ್​ಗೆ ದೂರು ನೀಡಿದ್ರೆ ಸಾಯಿಸುವುದಾಗಿ ಹೆದರಿಸಿದ್ದ. ಘಟನೆ ‌ನಡೆದು ಎರಡು ತಿಂಗಳ ಆದ್ರೂ ದೂರು ನಿಡಿರಲಿಲ್ಲ. ಡ್ರಗ್ಸ್​ ಕೇಸ್​ನಲ್ಲಿ ಸುನೀಶ್ ಸಿಕ್ಕಿ ಬಿದ್ದ ಕಾರಣ ಶಶಾಂಕ್​ ಕುಟುಂಬದವರ ಒತ್ತಾಯದ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಸುನೀಶ್ ಹೆಗ್ಡೆ ಹಾಗೂ ಅವನ ಸಹಚರರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ಸದ್ಯ‌ತನಿಖೆ ನಡೆಸುತ್ತಿದ್ದಾರೆ. ಡ್ರಗ್ಸ್​ ಕೇಸ್ ಎದುರಿಸಿದ ಆರೋಪಿ ಸದ್ಯ ಕಿಡ್ನಾಪ್​ ಕೇಸ್​ನಲ್ಲಿ ಸಹ ಲಾಕ್ ಆಗಿದ್ದಾನೆ.

ಹಿನ್ನೆಲೆ...

ಸುನೀಶ್ ಹೆಗ್ಡೆಯನ್ನು ಕೆಂಪೇಗೌಡ ನಗರ ಪೊಲೀಸರು ಡ್ರಗ್ಸ್ ಕೇಸ್ ಮಾರಾಟ ಪ್ರಕರಣದಲ್ಲಿ ಬಂಧನ ಮಾಡಿದ್ರು. ಈತ ಫಾರಿನ್​ನಿಂದ ಡ್ರಗ್ಸ್​ನ್ನು ತರಿಸಿಕೊಳ್ಳುತ್ತಿದ್ದ. ತನಿಖೆ ವೇಳೆ ಕೆಲ ವೆಬ್​ಸೈಟ್​ ಹ್ಯಾಕ್ ಮಾಡಲು ಶ್ರೀಕಿ ಇವರಿಗೆ ಸಹಾಯ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಸುನೀಶ್ ಹೆಗ್ಡೆ ‌ಹಾಗೂ ಶ್ರೀಕಿಯನ್ನು ಬಂಧನ ಮಾಡಲಾಗಿದೆ. ಸದ್ಯ ಪ್ರಮುಖ ಆರೋಪಿ ಸುನೀಶ್ ಹೆಗ್ಡೆ ಮೇಲೆ ಕಿಡ್ನಾಪ್ ಕೇಸ್ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.