ETV Bharat / state

ಬೆಂಗಳೂರಲ್ಲಿ ಕಿಡ್ನಾಪ್​​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಯಲ್ಲಿ ಶವ!

ಬೆಂಗಳೂರಿನಲ್ಲಿ ಸಾಲ ಪಡೆದುಕೊಂಡು ವಾಪಸ್ ನೀಡದೆ ಸತಾಯಿಸುತ್ತಿದ್ದ ಯುವಕನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಗೈದ ಆರೋಪಿಗಳಲ್ಲಿ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

kidnap-and-murder-of-youth-in-bengaluru-five-arrested
ಬೆಂಗಳೂರಲ್ಲಿ ಕಿಡ್ನಾಪ್​​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಯಲ್ಲಿ ಶವ : 9 ತಿಂಗಳ ಬಳಿಕ ಕೊಲೆಯ ರೋಚಕ ಕತೆ
author img

By

Published : Dec 27, 2022, 9:18 PM IST

Updated : Dec 27, 2022, 9:41 PM IST

ಬೆಂಗಳೂರಲ್ಲಿ ಕಿಡ್ನಾಪ್​​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಯಲ್ಲಿ ಶವ

ಬೆಂಗಳೂರು : ಸಾಲ ಪಡೆದುಕೊಂಡಿದ್ದ ಹಣವನ್ನು ಮರಳಿ ನೀಡಲು ಸತಾಯಿಸುತ್ತಿದ್ದ ಯುವಕನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಒಂಬತ್ತು ತಿಂಗಳ ನಂತರ ಬೆಳಕಿಗೆ ಬಂದಿದೆ. ಈ ಸಂಬಂಧ‌ ಐವರು ಆರೋಪಿಗಳನ್ನು ಕಬ್ಬನ್‌ಪಾರ್ಕ್ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನೂರಿನ ನಿವಾಸಿ ಶರತ್ ಎಂಬವರನ್ನು ಕೊಲೆ ಮಾಡಿದ ಆರೋಪದಡಿ, ಶರತ್ ಕುಮಾರ್, ಚಲಪತಿಗೌಡ, ಶ್ರೀಧರ್, ಧನುಷ್ ಸೇರಿ ಐವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಮತ್ತೆ ಮೂವರು ಭಾಗಿಯಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

ಯುವಕನಿಗೆ ಹಲ್ಲೆ ನಡೆಸಿದ ವಿಡಿಯೋ ವೈರಲ್​: ಇತ್ತೀಚೆಗೆ ಸಾಮಾಜಿಕ‌ ಜಾಲತಾಣದಲ್ಲಿ ಯುವಕನೋರ್ವನನ್ನು ಅರೆಬೆತ್ತಲೆಗೊಳಿಸಿ ಹಗ್ಗದಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ಹಾಗೂ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು‌‌‌. ಈ ವಿಡಿಯೋವನ್ನು ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ‌ ಗಮನಿಸಿದ್ದರು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಕೊತ್ತನೂರು ನಿವಾಸಿ ಶರಣ್ ಎಂಬಾತನನ್ನು ಕಳೆದ‌ ಮಾರ್ಚ್ 21ರಂದು ಬನಶಂಕರಿ ಬಸ್ ನಿಲ್ದಾಣದಿಂದ ಆರೋಪಿಗಳು ಕಾರಿನಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ‌ ಮಾಡಿರುವುದು ಗೊತ್ತಾಗಿದೆ. ಇನ್ನು ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳು ಶರತ್​ನನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಸುಮೊಟೊ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತ ಶರತ್ ಎಸ್ಸಿ-ಎಸ್ಟಿ ಯೋಜನೆಯಡಿ ಸರ್ಕಾರದಿಂದ ಸಿಗುವ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಹೇಳಿ‌‌ಕೊಂಡು ಜನರಿಂದ ಹಣ ಪಡೆದು ವಂಚಿಸುತ್ತಿದ್ದ. ಈತನ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಮತ್ತೊಂದೆಡೆ ಆರೋಪಿ ಶರತ್ ಕುಮಾರ್​ ತಂದೆ ಚಲಪತಿಗೌಡ ಚಿಕ್ಕಬಳ್ಳಾಪುರದಲ್ಲಿ ಕರವೇ ಅಧ್ಯಕ್ಷನಾಗಿದ್ದ. ಅಲ್ಲದೆ ಪ್ರಿಂಟಿಂಗ್ ಪ್ರೆಸ್ ವೊಂದರ ಮಾಲೀಕನಾಗಿದ್ದಾನೆ. ಫೈನಾನ್ಸ್ ವ್ಯವಹಾರವೂ ನಡೆಸುತ್ತಿದ್ದ ಮುಖಂಡನ ಮಗ ಶರತ್ ಕುಮಾರ್ ಕಳೆದ ವರ್ಷ ಮೃತನಿಗೆ 20 ಲಕ್ಷ ಸಾಲ‌ ಕೊಟ್ಟಿದ್ದ ಎನ್ನಲಾಗಿದೆ.‌ ಕೊಟ್ಟಿದ್ದ ಹಣವನ್ನು ನೀಡಲು ಸತಾಯಿಸುತ್ತಿದ್ದ‌ ಎಂದು ತಿಳಿದುಬಂದಿದೆ. ಹೀಗಾಗಿ ಕಳೆದ ಜನವರಿಯಲ್ಲಿ ಅಪಹರಿಸಿ ಹಣ ನೀಡುವಂತೆ ಆರೋಪಿ ಶರತ್ ಕುಮಾರ್​ ಪೀಡಿಸಿದ್ದ. ಕೆಲವೇ ದಿನಗಳಲ್ಲಿ ಹಣ ಕೊಡುವುದಾಗಿ ಹೇಳಿದ್ದ ಮೃತ ಶರತ್​, ನುಡಿದಂತೆ ನಡೆದುಕೊಳ್ಳದಿದ್ದರಿಂದ ಮಾರ್ಚ್ 23ರಂದು ಆರೋಪಿಗಳಿಂದ ಬನಶಂಕರಿಯಿಂದ ಮತ್ತೆ ಅಪಹರಿಸಲ್ಪಟ್ಟಿದ್ದ.

ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ: ಶರತ್​ನನ್ನು ಕಾರಿನಲ್ಲಿ ಅಪಹರಿಸಿ ಚಿಕ್ಕಬಳ್ಳಾಪುರದ ಫಾರ್ಮ್‌ ಹೌಸ್‌ವೊಂದಕ್ಕೆ ಕರೆತಂದ ಶರತ್ ಕುಮಾರ್​ ಹಾಗೂ ಆತನ ಸಹಚರರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಸತತ ಒಂದು ವಾರ ನಿರಂತರವಾಗಿ ದೈಹಿಕ ಹಲ್ಲೆ ನಡೆಸಿದ್ದಾರೆ. ಇನ್ನು ಅಪಹರಣ ಬಗ್ಗೆ ಅನುಮಾ‌ನ ಬಾರದಿರಲು ಆರೋಪಿಗಳು ಶರತ್ ಕಡೆಯಿಂದ ಪೋಷಕರಿಗೆ ಕರೆ‌ ಮಾಡಿಸಿ 'ಸಾಲಗಾರರ ತೊಂದರೆ ಹೆಚ್ಚಾಗಿದ್ದು ಬೇರೆ ಊರಿಗೆ ಹೋಗಿ ಹಣ ಸಂಪಾದ‌ನೆ‌ ಮಾಡಿಕೊಂಡು ಬರುತ್ತೇನೆ. ಹೀಗಾಗಿ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ' ಎಂದಷ್ಟೇ ಹೇಳಲು ಅವಕಾಶ ಕಲ್ಪಿಸಿ ಫೋನ್ ಸಂಪರ್ಕ ಕಡಿತಗೊಳಿಸಿದ್ದಾರೆ‌. ಅಂದೇ ಪೋನ್ ಸ್ವಿಚ್ ಆಫ್ ಮಾಡಿ ಲಾರಿಯೊಂದರ ಮೇಲೆ ಬಿಸಾಕಿದ್ದಾರೆ‌. ತೀವ್ರತರ ಹಲ್ಲೆಯಿಂದ ಬಳಲುತ್ತಿದ್ದರಿಂದ ಶರತ್ ಮಾರ್ಚ್ 29 ರಂದು ಮೃತನಾಗಿದ್ದ ಎಂದು ತಿಳಿದುಬಂದಿದೆ.

ಗೋಣಿ ಚೀಲದಲ್ಲಿ ಶವ ತುಂಬಿ ಚಾರ್ಮಾಡಿ ಘಾಟ್ ಗೆ ಬಿಸಾಕಿದ್ರು!: ಶರತ್​ನನ್ನು ಕೊಲೆ ಮಾಡಿದ ಬಳಿಕ ಸಾಕ್ಷ್ಯಾಧಾರ ನಾಶಪಡಿಸಲು ಮುಂದಾದ ಆರೋಪಿಗಳು ಗೋಣಿಚೀಲದಲ್ಲಿ ಶವ ಪ್ಯಾಕ್ ಮಾಡಿ ಕಾರಿನಲ್ಲಿ ಇಟ್ಟುಕೊಂಡು ಚಾರ್ಮಾಡಿ ಘಾಟ್​ನಲ್ಲಿ ಶವ ಬಿಸಾಕಿದ್ದಾರೆ. ಬಳಿಕ ಬೆಂಗಳೂರಿಗೆ ಬಂದು ಏನೂ ಆಗಿಲ್ಲವೆಂಬಂತೆ ಆರೋಪಿಗಳು ಓಡಾಡಿಕೊಂಡಿದ್ದರು.

ಆದರೆ, ಹಲ್ಲೆಯ ದೃಶ್ಯಾವಳಿ ವೈರಲ್ ಆಗಿತ್ತು. ಇದನ್ನು ಸ್ಥಳೀಯ ವ್ಯಕ್ತಿಯೋರ್ವ ಇಟ್ಟುಕೊಂಡು ಮಾಧ್ಯಮ ಸೋಗಿನಲ್ಲಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಇದಕ್ಕೆ ಆರೋಪಿ ಶರತ್ ಕುಮಾರ್​ ತಲೆಕೆಡಿಸಿಕೊಂಡಿರಲಿಲ್ಲ. ಈ ವಿಡಿಯೋ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಗಮನಕ್ಕೂ ಬಂದು ತನಿಖೆ ನಡೆಸಿದಾಗ ಕೊಲೆ‌‌‌ಯ ಸತ್ಯ ಸಂಗತಿ ಬಯಲಾಗಿದೆ‌.

ನಾಪತ್ತೆ ಪ್ರಕರಣವೂ ದಾಖಲಾಗಿರಲಿಲ್ಲ: ಮೃತ ಶರತ್, ಪೋಷಕರಿಗೆ ಕರೆ ಮಾಡಿ ಹಣ ಸಂಪಾದ‌ನೆ ಮಾಡಿಕೊಂಡು ಬರುತ್ತೇನೆಂದು ಹೇಳಿದ್ದರಿಂದ ಪೊಲೀಸರಿಗೆ‌ ದೂರು ನೀಡಿರಲಿಲ್ಲ. ಕೊಲೆ ವಿಚಾರ ಬಯಲಾಗುವವರೆಗೂ ತಮ್ಮ ಮಗ ಬದುಕಿದ್ದಾನೆ ಎಂದೇ ಶರತ್​ನ ಪೋಷಕರು ನಂಬಿದ್ದರು. ಹೀಗಾಗಿ‌ ಅವರು ದೂರು ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಪೆರೋಲ್ ಪಡೆದು ಪರಾರಿ, 15 ವರ್ಷಗಳ ನಂತರ ಸಿಕ್ಕಿಬಿದ್ದ ಅಪರಾಧಿ!

Last Updated : Dec 27, 2022, 9:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.