ಬೆಂಗಳೂರು: ರಾಜಗೋಪಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡ್ನಾಪ್ ಮತ್ತು ಹತ್ಯೆ ಪ್ರಕರಣ ಸಂಬಂಧ ಇಂದು ಮಹೇಶ್ ಎಂಬಾತನ ಮೃತದೇಹ ಹೊರ ತೆಗೆದಿರುವ ಪೊಲೀಸರು, ವಿಡಿಯೋ ಚಿತ್ರೀಕರಣ ಮಾಡಿ ತದನಂತರ ಪರಿಶೀಲನೆ ನಡೆಸಿದ್ದಾರೆ.
ಇದೇ ತಿಂಗಳ 21ರಂದು ಮಹೇಶ್ ಎಂಬಾತನನ್ನ ಅಪ್ಪಿ ಅಲಿಯಾಸ್ ಕೃಷ್ಣ ಸೇರಿ ಐವರು ಕ್ಷುಲ್ಲಕ ಕಾರಣಕ್ಕೆ ಹತ್ಯೆಗೈದು ಹೆಸರಘಟ್ಟ ಹೊರವಲಯದಲ್ಲಿ ಮೃತದೇಹವನ್ನು ಹೂತು ಹಾಕಿದ್ದರು. ಕೊಲಗೈದ ಪೈಕಿ ಇಬ್ಬರು ಆರೋಪಿಗಳು ಶರಣಾಗಿ ಹತ್ಯೆ ಮಾಡಿದ ವಿಚಾರ ಬಾಯಿಬಿಟ್ಟಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ನಿನ್ನೆ ಸ್ಥಳ ಪತ್ತೆ ಮಾಡಿ, ವೈದ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಮಹೇಶ್ ಮೃತದೇಹ ಹೊರತೆಗೆದು ಪರಿಶೀಲನೆ ನಡಿಸಿದ್ದಾರೆ.
ಮೃತದೇಹ ಹೊರತೆಗೆದಿರುವ ಪೊಲೀಸರು, ಸದ್ಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ತನಿಖೆ ಮುಂದುವರೆಸಿದ್ದಾರೆ.