ETV Bharat / state

"ದಿ ವಿಲನ್" ಪ್ರೇಮ್ ಜೊತೆ ಮತ್ತೆ ಸಿನಿಮಾ ಮಾಡ್ತೇನೆ.. ಕಿಚ್ಚ ಸುದೀಪ್ - Villain movie

"ದಿ ವಿಲನ್" ಚಿತ್ರದ ಬಳಿಕ ನಿರ್ದೇಶಕ ಪ್ರೇಮ್ ಜೊತೆ ಕಿಚ್ಚ ಸುದೀಪ್ ಚಿತ್ರ ಮಾಡಲ್ಲ ಎಂಬ ಸಾಮಾಜಿಕ ಜಾಲತಾಣಗಳ ಊಹಾಪೋಹಗಳಿಗೆ ಸ್ವತಃ ಸುದೀಪ್ ತೆರೆ ಎಳೆದಿದ್ದು, ಪ್ರೇಮ್ ನನ್ನ ಸಹೋದರ. ಅದಕ್ಕಿಂತ ಹೆಚ್ಚು ಆತ ಒಬ್ಬ ಒಳ್ಳೆಯ ವ್ಯಕ್ತಿ. ಪ್ರೇಮ್ ಜೊತೆ ಕೆಲಸ ಮಾಡಲು ನಾನು ಯಾವತ್ತೂ ರೆಡಿ, ಅದು ಎಂತಹ ಫ್ಲಾಪ್ ಸಿನಿಮಾ ಅದ್ರೂ ನಾನು ಕೆಲಸ ಮಾಡ್ತೇನೆ ಎಂದಿದ್ದಾರೆ.

ಕಿಚ್ಚ ಸುದೀಪ್
author img

By

Published : Sep 2, 2019, 11:01 PM IST

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ನಿರ್ದೇಶಕ ಪ್ರೇಮ್ ಜೊತೆ ಕೆಲಸ ಮಾಡಿದ ಮಲ್ಟಿ ಸ್ಟಾರ್ ದಿ ವಿಲನ್ ಚಿತ್ರ ರಿಲೀಸ್ ಅದ್ಮೇಲೆ ನಿರ್ದೇಶಕ ಪ್ರೇಮ್, ಶಿವಣ್ಣ ಫ್ಯಾನ್ಸ್‌ಗೆ ನಿಜವಾದ ವಿಲನ್ ಆಗಿಬಿಟ್ಟರು.

ಸ್ಯಾಂಡಲ್​ವುಡ್​ನಲ್ಲಿ ದಿ ವಿಲನ್ ದೊಡ್ಡ ಸೌಂಡ್ ಮಾಡದಿದ್ದರೂ, ನಿರ್ಮಾಪಕ ಹಾಕಿದ ಬಂಡವಾಳಕ್ಕೆ ಏ‌ನು ಮೋಸ ಆಗಿರಲ್ಲಿಲ್ಲ. ಅಲ್ಲದೆ ವಿಲನ್ ಚಿತ್ರದ ನೆಗೆಟಿವ್ ಎಫೆಕ್ಟ್‌ನಿಂದ ಕಿಚ್ಚ, ಇನ್ಮುಂದೆ ನಾನು ಮಲ್ಟಿಸ್ಟಾರ್ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ವಿಲನ್ ಚಿತ್ರ ಬಳಿಕ ಕಿಚ್ಚನಿಗೆ ಸಾಕಷ್ಟು ನೆಗೆಟಿವ್ ಕಮೆಂಟ್ಸ್​ಗಳೂ ಬಂದಿತ್ತು.

ಕಿಚ್ಚ ಸುದೀಪ್

ಆದರೆ, ಕೆಲವು ದಿನಗಳಿಂದ‌ ಸೋಷಿಯಲ್ ಮೀಡಿಯಾಗಳಲ್ಲಿ ಸುದೀಪ್ ಮತ್ತೆ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಹರಿದಾಡ್ತಿತ್ತು. ಇಂದು ಹುಟ್ಟು ಹಬ್ಬದ ದಿನ ಸುದೀಪ್ ಆ ಗಾಳಿ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ನಿರ್ದೇಶಕ ಪ್ರೇಮ್, ನನ್ನ ಒಳ್ಳೆಯ ಸಹೋದರ, ಗೆಳೆಯ. ಅದಕ್ಕೂ ಮೊದಲು ಆತ ಉತ್ತಮ ವ್ಯಕ್ತಿ. ಉತ್ತಮ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ನನಗಿಷ್ಟ. ಪ್ರೇಮ್ ಯಾವಾಗಲೂ ಸಿನಿಮಾವನ್ನು ಪ್ರೀತಿಯಿಂದ ಮಾಡ್ತಾರೆ, ಅದು ನನಗಿಷ್ಟ. ಎಲ್ಲರೂ ಅದ್ಭುತ ಸಿನಿಮಾ ಮಾಡಲು ಸಾಧ್ಯವಿಲ್ಲ. ಪ್ರೇಮ್ ಈ ಹಿಂದೆ ಒಳ್ಳೆ ಸಿನಿಮಾ ಕೊಟ್ಟಿದ್ದಾರೆ. ಯಾವ್ದೋ ಒಂದು ಸಿನಿಮಾ ಚೆನ್ನಾಗಿಲ್ಲವೆಂದು ಅವರನ್ನು ಜಡ್ಜ್ ಮಾಡಲು ಹೋಗಬಾರದು. ಸಿನಿಮಾ ಇಂಡಸ್ಟ್ರಿಗೆ ಅವರು ತುಂಬಾ ಕೊಡುಗೆ ನೀಡಿದ್ದಾರೆ. ನನಗೆ ಪ್ರೇಮ್ ಜೊತೆ ಸಿನಿಮಾ ಮಾಡಲು ಎಂದಿಗೂ ಇಷ್ಟ. ಅದು ಬಿಗ್ ಫ್ಲಾಪ್ ಸಿನಿಮಾ ಆದ್ರೂ ಸರಿ. ಅವರೊಟ್ಟಿಗೆ ಮತ್ತೆ ಸಿನಿಮಾ ಮಾಡುತ್ತೇನೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಆದರೆ, ಸದ್ಯ ಸುದೀಪ್ ‌ದಬಾಂಗ್ 3, ಸೈರಾ ಹಾಗೂ ಕೋಟಿಗೊಬ್ಬ 3 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಪ್ರೇಮ್ ಕೂಡ ಅವರ ಬಾಮೈದನನ್ನು ಹಾಕಿಕೊಂಡು ಏಕ್ ಲವ್ ಯಾ ಚಿತ್ರದಲ್ಲಿ ಬ್ಯುಸಿ ಇದ್ದು, ಇವರಿಬ್ಬರ ಕಾಂಬಿನೇಷನ್ ನಲ್ಲಿ ಮತ್ತೆ ಯಾವಾಗ ಸಿನಿಮಾ ಮೂಡಿ ಬರುತ್ತೋ ಕಾದು ನೋಡಬೇಕು.

Intro:" ದಿ ವಿಲನ್" ಪ್ರೇಮ್ಸ್ ಜೊತೆಗೆ ನಾನು ಮತ್ತೆ ಸಿನಿಮಾ ಮಾಡ್ತೇನೆ.ಕಿಚ್ಚ ಸುದೀಪ್...!

ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್ ದಿ ವಿಲನ್ ಸಿನಿಮಾದಲ್ಲಿ ನಿರ್ದೇಶಕ ಪ್ರೇಮ್ ಜೊತೆ ಕೆಲಸ ಮಾಡಿ್ರುದ್ರು. ಮಲ್ಟಿ ಸ್ಟಾರ್ ದಿ ವಿಲನ್ ಚಿತ್ರ ರಿಲೀಸ್ ಅದ್ಮೇಲೆ ನಿರ್ದೇಶಕ ಪ್ರೇಮ್ ಶಿವಣ್ಣನಫ್ಯಾನ್ಸ್ ಗಳಿಗೆ ನಿಜವಾದ ವಿಲನ್ ಆಗಿಬಿಟ್ಟರು.ಸ್ಯಾಂಡಲ್ ವುಡ್ ನಲ್ಲಿ
ದಿ ವಿಲನ್ ದೊಡ್ಡ ಸೌಂಡ್ ಮಾಡದಿದ್ದರು ನಿರ್ಮಾಪಕ ಹಾಕಿದ ಬಂಡವಾಳಕ್ಕೆ ಏ‌ನು ಮೋಸ ಆಗಿರಲ್ಲಿಲ್ಲ.ಅಲ್ಲದೆ
" ದಿ ವಿಲನ್ " ಚಿತ್ರದ ನೆಗೆಟಿವ್ ಎಫೆಕ್ಟ್ ನಿಂದ ಕಿಚ್ಚ ಇನ್ನು ಮುಂದೆ ನಾನು ಮಲ್ಟಿಸ್ಟಾರ್ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ರು. ಅಲ್ಲದೆ ವಿಲನ್ ಚಿತ್ರ ಬಂದಾಗಿನಿಂದಲೂ ಸಾಕಷ್ಟು ನೆಗೆಟಿವ್ ಕಮೆಂಟ್ಸ್ ಬಂದಿತ್ತು .ಅದರೆ ಕೆಲವು ದಿನಗಳಿಂದ‌ ಸೋಷಿಯಲ್ ಮೀಡಯಾದಲ್ಲಿ ಸುದೀಪ್ ಮತ್ತೆ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಕಾಣಿಸ್ತಾರೆ ಎಂಬ ಮಾತು ಹರಿದಾಡ್ತಿದ್ದು‌. ಇಂದು ಸುದೀಪ್ ಆ ಗಾಳಿ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.‌Body:ಪ್ರೇಮ್ ನನ್ನ ಒಳ್ಳೆಯ ಸಹೋದರ. ಗೆಳೆಯ ಅದಕ್ಕೂ ಮೊದಲು ಆತ ಉತ್ತಮ ವ್ಯಕ್ತಿ. ಉತ್ತಮ ವ್ಯಕ್ತಿಗಳೊಟ್ಟಿಗೆ ಕೆಲಸ ಮಾಡಲು ನನಗಿಷ್ಟ. ಪ್ರೇಮ್ ಯಾವಾಗಲೂ ಸಿನಿಮಾವನ್ನ ಪ್ರೀತಿಯಿಂದ ಮಾಡ್ತಾರೆ .ಅದು ನನಗಿಷ್ಟ. ಎಲ್ಲರೂ ಅದ್ಭುತ ಸಿನಿಮಾ ಮಾಡಲು ಸಾಧ್ಯವಿಲ್ಲ. ಹಾಗಂತ ಹಿಂದೆ ಒಳ್ಳೆ ಸಿನಿಮಾ ಕೊಟ್ಟಿದ್ದಾರೆ. ಯಾವ್ದೋ ಒಂದು ಸಿನಿಮಾ ಚೆನ್ನಾಗಿಲ್ಲ ಅಂತ ಅವರನ್ನು ಜಡ್ಜ್ ಮಾಡಲು ಹೋಗಬಾರದು. ಸಿನಿಮಾ ಇಂಡಸ್ಟ್ರಿಗೆ ಅವರು ತುಂಬಾ ಕೊಡುಗೆ ನೀಡಿದ್ದಾರೆ. ನನಗೆ ಪ್ರೇಮ್ ಜೊತೆ ಸಿನಿಮಾ ಮಾಡಲು ಎಂದಿಗೂ ಇಷ್ಟ. ಅದು ಬಿಗ್ ಫ್ಲಾಪ್ ಸಿನಿಮಾ ಆದ್ರೂ ಸರಿ. ಅವರೊಟ್ಟಿಗೆ ಮತ್ತೆ ಸಿನಿಮಾಮಾಡುತ್ತೇನೆ ಎಂದು ಹೇಳಿದ್ರು.ಅದ್ರೆ ಸದ್ಯ ಸುದೀಪ್ ‌ದಬಾಂಗ್೩. ಸೈರಾ, ಹಾಗೂಕೋಟಿಗೊಬ್ಬ೩ಚಿತ್ರದಲ್ಲಿಬ್ಯಸಿಯಿದ್ದಾರೆ.ಅ.ಲ್ಲದೆ ಪ್ರೇಮ್ ಈಗ ಅವರ ಬಾಮೈದನ ಹಾಕಿಕೊಂಡು ಏಕ್ ಲವ್ ಯಾ ಚಿತ್ರದಲ್ಲಿ ಬ್ಯುಸಿ ಇದ್ದು .ಇವರಿಬ್ಬರ ಕಾಂಬಿನೇಷನ್ ನಲ್ಲಿ ಮತ್ತೆ ಯಾವಾಗ ಸಿನಿಮಾ ಮೂಡಿ ಬರುತ್ತೊ ಗೊತ್ತಿಲ್ಲ...

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.