ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಗೆ ಹುಟ್ಟು ಹಬ್ಬದ ಸಂಭ್ರಮ, ಕಿಚ್ಚನ ಹುಟ್ಟುಹಬ್ಬಕ್ಕೆ ಎರಡು ದಿನಗಳ ಮುಂಚೆಯೇ ಕಿಚ್ಚನ ಅಭಿಮಾನಿ ಬಿಡಿಸಿದ ಕಲಾಕೃತಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇಂದು ಮಧ್ಯರಾತ್ರಿ ಕಿಚ್ಚ ಸುದೀಪ್ ಅವರ ಪುಟ್ಟೇನಹಳ್ಳಿ ನಿವಾಸದ ಬಳಿ ಕರ್ನಾಟಕ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಪೈಲ್ವಾನ್ಗೆ ಜೈಕಾರ ಹಾಕುತ್ತಿದ್ದಾರೆ.
ಚಳಿಯನ್ನು ಲೆಕ್ಕಿಸದೆ ಗುಲ್ಬರ್ಗ, ಚಿತ್ರದುರ್ಗ, ಮಂಡ್ಯ, ರಾಯಚೂರಿನಿಂದ ಆಗಮಿಸಿರುವ ಕಿಚ್ಚನ ಅಭಿಮಾನಿಗಳು ತಮ್ಮ ಅಭೀಮಾನ ಮೆರೆದಿದ್ದಾರೆ.
ಸೆಪ್ಟೆಂಬರ್ 12 ಕಿಚ್ಚನ ಪೈಲ್ವಾನ್ ಸಿನಿಮಾ ರಿಲೀಸ್ ಆಗ್ತಿದ್ದು, ಹಬ್ಬದ ರೀತಿ ಆಚರಿಸ್ತೇವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಲ್ಲದೆ ಹುಟ್ಟು ಹಬ್ಬಕ್ಕೆ ಯಾರು ಕೂಡ ಕೇಕ್, ಹೂವಿನ ಹಾರಗಳು, ಪಟಾಕಿಗಳನ್ನು ತರಬಾರದೆಂದು ಸುದೀಪ್ ತಮ್ಮ ಅಭಿಮಾನಿಗಳಿಗೆ ಹೇಳಿದ್ದರಿಂದ ನೆಚ್ಚಿನ ನಟನ ಮಾತನ್ನು ಅಭಿಮಾನಿಗಳು ಪಾಲಿಸಿದ್ದಾರೆ.