ಬೆಂಗಳೂರು : ಬೆಂಗಳೂರಿನ ಡ್ರಗ್ಸ್ ನೆಟ್ವರ್ಕ್ಗೆ ಕೇರಳ ಮಾಜಿ ಮಿನಿಸ್ಟರ್ ಪುತ್ರನ ನಂಟು ಇರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಇಡಿ ಇಲಾಖೆಯ ಅಧಿಕಾರಿಗಳು (ಜಾರಿ ನಿರ್ದೇಶನಾಲಯ) ಕೇರಳದ ಮಾಜಿ ಗೃಹ ಸಚಿವರ ಪುತ್ರ ಬಿನೀಶ್ ಕೊಡಿಯೇ ಎಂಬಾತನಿಗೆ ಸಮನ್ಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಬಿನೀಶ್ ಕೊಡಿಯೇರಿ ಕೇರಳದ ಮಾಜಿ ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನಾಗಿದ್ದು, ಡ್ರಗ್ ಮಾಫಿಯಾ ಸಂಬಂಧ ಎನ್ಸಿಬಿ ಕಾರ್ಯಚರಣೆ ಮಾಡಿ ಬೆಂಗಳೂರಿನಲ್ಲಿ ಬಂಧಿತನಾಗಿರುವ ಪೆಡ್ಲರ್ ಅನೂಪ್ ವಿಚಾರಣೆ ನಡೆಸಿದಾಗ ಬಿನೀಶ್ ಕೊಡಿಯೇರಿ ಸಂಬಂಧದ ಕೆಲ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ಅನೂಪ್ ಹೆಸರಿನಲ್ಲಿ ಕೆಲ ರೆಸ್ಟೋರೆಂಟ್ಗಳಿದ್ದು, ಇಲ್ಲಿನ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ತೆರೆಯಲು 50 ಲಕ್ಷ ಹಣವನ್ನ ಬಿನೀಶ್ ಕೊಡಿಯೇರಿ ನೀಡಿರುವ ವಿಚಾರ ಕೂಡ ಎನ್ಸಿಬಿಯ ತನಿಖೆ ವೇಳೆ ಬಯಲಾಗಿದೆ.
2015 ರಿಂದ ಡ್ರಗ್ಸ್ ಡೀಲಿಂಗ್ನಲ್ಲಿ ಅನೂಪ್ ತೊಡಗಿದ್ದು, ಸದ್ಯ ಹಲವು ಹಣದ ವ್ಯವಹಾರ ಹೊಂದಿರುವುದರಿಂದ ಎನ್ಸಿಬಿ ಮಾಹಿತಿಯಾಧಾರದ ಮೇರೆಗೆ ಸಮನ್ಸ್ ನೀಡಿದ ಕೂಡಲೇ ಇಡಿ ಅಧಿಕಾರಿಗಳ ಮುಂದೆ ಬಿನೀಶ್ ಕೊಡಿಯೇರಿ ಹಾಜರಾಗಬೇಕಾದದ್ದು ಅನಿವಾರ್ಯವಾಗಿದೆ.