ETV Bharat / state

ಕೆಇಎ ಕೆ ಸೆಟ್ ಪರೀಕ್ಷೆ ಜನವರಿ 13ಕ್ಕೆ ಮುಂದೂಡಿಕೆ - ಕೆಇಎ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಲುವಾಗಿ ನಡೆಸುವ ಅರ್ಹತಾ ಪರೀಕ್ಷೆ ಕೆಸೆಟ್​ ಜನವರಿ‌ 13ಕ್ಕೆ ಮುಂದೂಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.

KEA
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
author img

By ETV Bharat Karnataka Team

Published : Dec 13, 2023, 8:39 PM IST

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಲುವಾಗಿ ನಡೆಸುವ ಅರ್ಹತಾ ಪರೀಕ್ಷೆ ಡಿಸೆಂಬರ್ 31ರ ಬದಲಿಗೆ ಜನವರಿ‌ 13ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.

Karnataka Examination Authority
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕೆಸೆಟ್‌-2023ರ ಅರ್ಹತಾ ಪರೀಕ್ಷೆಗೆ ಆನ್‌ಲೈನ್‌ ನೋಂದಣಿ ಮಾಡುವ ವೇಳೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವಾಗಿ ಕಲಬುರಗಿ ಎಂದು ಆಯ್ಕೆ ಮಾಡಿದ್ದವರು ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಬೇಕು. ವಿಜಯಪುರ ಎಂದು ಆಯ್ಕೆ ಮಾಡಿದ್ದವರು ತುಮಕೂರು ನಗರದಲ್ಲಿ ಪರೀಕ್ಷೆ ಬರೆಯಬೇಕು.

ಧಾರವಾಡ ಜಿಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹಾವೇರಿ ಜಿಲ್ಲಾ ಪರೀಕ್ಷಾ ಕೇಂದ್ರಗಳನ್ನು ಮತ್ತು ಮೈಸೂರು ಜಿಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮಂಡ್ಯ ಜಿಲ್ಲಾ ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿರುತ್ತದೆ. ಉಳಿದ ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂಓದಿ:ವಿದ್ಯಾರ್ಥಿ ವೇತನ ಪಾವತಿಗೆ ಆಯವ್ಯಯದಲ್ಲಿ 105 ಕೋಟಿ ಅನುದಾನ ನಿಗದಿ: ಶಿವರಾಜ ತಂಗಡಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.