ETV Bharat / state

ಸ್ಥಳೀಯ ರಕ್ಷಣಾ ಉತ್ಪಾದನೆಗೆ ಒತ್ತು: ಕೇಂದ್ರ ನೀತಿಯನ್ನು ಸ್ವಾಗತಿಸಿದ ಕಾಸಿಯಾ ಅಧ್ಯಕ್ಷ - ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಧ್ ಸಿಂಗ್

ಎಂ.ಎಸ್.ಎಂ.ಇಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಿ.ಎಲ್.ಸಿ.ಎಸ್.ಎಸ್. ಯೋಜನೆಯನ್ನು ಹೆಚ್ಚಿನ ಹಣಕಾಸು ನೆರವಿನೊಂದಿಗೆ ಪರಿಷ್ಕರಿಸಬೇಕಾದ ಅವಶ್ಯಕತೆಯಿದೆ ಎಂದು ಕಾಸಿಯಾ ಅಧ್ಯಕ್ಷರು ತಿಳಿಸಿದ್ದಾರೆ.

Kasia President
ಕಾಸಿಯಾ ಅಧ್ಯಕ್ಷ ಕೆಬಿ ಅರಸಪ್ಪ
author img

By

Published : Aug 9, 2020, 9:56 PM IST

ಬೆಂಗಳೂರು: ಕೇಂದ್ರ ಸರ್ಕಾರದ ಆತ್ಮನಿರ್ಭರ ಅಂಗವಾಗಿ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಇಲ್ಲಿಯವರೆಗೆ ಆಮದು ಮಾಡಿಕೊಳ್ಳುತ್ತಿದ್ದ 101 ರಕ್ಷಣಾ ವಸ್ತುಗಳನ್ನು ನಿರ್ಬಂಧಿಸುವುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿರುವುದನ್ನು ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಸ್ವಾಗತಿಸಿದ್ದಾರೆ.

ರಕ್ಷಣಾ ವಸ್ತುಗಳ ಉತ್ಪಾದನೆಯ ದೇಶೀಕರಣವನ್ನು ಹೆಚ್ಚಿಸುವ ಸಲುವಾಗಿ 101 ವಸ್ತುಗಳ ಮೇಲಿನ ನಿರ್ಬಂಧವನ್ನು ರಕ್ಷಣಾ ಸಚಿವಾಲಯದ ಈ ಪ್ರಸ್ತಾಪವನ್ನುಎಂ.ಎಸ್.ಎಂ.ಇ. ಗಳು ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಲು ಉತ್ತೇಜಿಸುತ್ತದೆ ಮತ್ತು ಎಂ.ಎಸ್.ಎಂ.ಇ.ಗಳಿಗೆ ದೊರಕಲಿರುವ ಉದಯೋನ್ಮುಖ ಅವಕಾಶಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿದೆಎಂದು ಕಾಸಿಯಾ ಅಧ್ಯಕ್ಷ ಕೆಬಿ ಅರಸಪ್ಪ ಹೇಳಿದ್ದಾರೆ.

ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಹೇಳಿಕೆ...

“ಎಂ.ಎಸ್.ಎಂ.ಇ.ಗಳು ತಮ್ಮದೇ ಆದ ವಿನ್ಯಾಸವನ್ನು ಬಳಸಿಕೊಂಡು ಅಥವಾ ಡಿ.ಆರ್.ಡಿ.ಓ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಪ್ರತಿಬಂಧಿತ ಪಟ್ಟಿಯಲ್ಲಿರುವ ವಸ್ತುಗಳನ್ನು ತಯಾರಿಸಲು ಉತ್ತಮ ಅವಕಾಶವಾಗಿದೆ” ಎಂದು ಹೇಳಿರುವ ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ, ಅಧಿಕೃತ ವರದಿಗಳ ಪ್ರಕಾರ ದೇಶೀಯ ರಕ್ಷಣಾ ಉದ್ಯಮವು ಮುಂದಿನ 6-7 ವರ್ಷಗಳಲ್ಲಿ 4 ಲಕ್ಷ ಕೋಟಿ ರೂ.ಗಳ ರಕ್ಷಣಾ ವಸ್ತುಗಳ ಉತ್ಪಾದನಾ ಒಪ್ಪಂದವನ್ನು ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ 2019-2020ರ ನಡುವೆ 3.5 ಲಕ್ಷ ಕೋಟಿ ಮೊತ್ತದಷ್ಟು ನಿರ್ಬಂಧಿತ ಪಟ್ಟಿಯಲ್ಲಿರುವ ವಸ್ತುಗಳ ಸರಬರಾಜಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಕ್ಷಣಾ ಸಚಿವಾಲಯದ ಪ್ರಕಾರ ಸಶಕ್ತ ಪಡೆಗಳಿಗೆ ಒಗ್ಗಿಕೊಳ್ಳಲು ಸಮಯವನ್ನು ನೀಡಲು ಮತ್ತು ದೇಶೀಯ ಉದ್ಯಮಗಳಿಗೆ ತಯಾರಿಗಾಗಿ ಸಮಯವನ್ನ ಒದಗಿಸಲು ಈ ಘೋಷಣೆಯನ್ನು ಮುಂಚಿತವಾಗಿ ಮಾಡಲಾಯಿತು.

ಬಂಡವಾಳ ಹೂಡಿಕೆ ಪ್ರಕ್ರಿಯೆಯನ್ನು ದೇಶಿಯ ಮತ್ತು ವಿದೇಶಿ ಬಂಡವಾಳದ ನಡುವೆ ವಿಭಜಿಸಲಾಗಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ 52,00 ಕೋಟಿ ರೂ. ವಿನಿಯೋಗದೊಂದಿಗೆ ದೇಶಿಯ ಬಂಡವಾಳ ಹೂಡಿಕೆಗಾಗಿ ಪ್ರತ್ಯೇಕ ಬಜೆಟ್ ನೀಡಲಾಗಿದೆ. ಸರ್ಕಾರಕ್ಕೆ ನಮ್ಮ ಏಕೈಕ ಮನವಿ ಏನೆಂದರೆ, ಖರೀದಿ ಮಾರ್ಗಸೂಚಿಗಳಲ್ಲಿ ತೊಡಕುಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಡಿ.ಆರ್.ಡಿ.ಓ. ಮತ್ತು ಇತರೆ ಪ್ರಯೋಗಾಲಯಗಳು ವಿಷಯಗಳನ್ನು ಪರಿಣಾಮಕಾರಿಯಾಗಿ ಮಾಡಲು ಅಗತ್ಯವಾದ ಹ್ಯಾಂಡ್ಹೋಲ್ಡಿಂಗ್ ಅನ್ನು ಒದಗಿಸಬೇಕು.

ಸರಿಯಾದ ಚೌಕಟ್ಟುಗಳ ಮೂಲಕ ಹಣಕಾಸು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರವೇಶವನ್ನು ಸರಾಗಗೊಳಿಸುವ ಅವಶ್ಯಕತೆಯಿದೆ. ಎಂ.ಎಸ್.ಎಂ.ಇಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡವ ನಿಟ್ಟಿನಲ್ಲಿ ಸಿ.ಎಲ್.ಸಿ.ಎಸ್.ಎಸ್. ಯೋಜನೆಯನ್ನು ಹೆಚ್ಚಿನ ಹಣಕಾಸು ನೆರವಿನೊಂದಿಗೆ ಪರಿಷ್ಕರಿಸಬೇಕಾದ ಅವಶ್ಯಕತೆಯಿದೆ. ಸದ್ಯ ಕರ್ನಾಟಕ ರಾಜ್ಯವು ಅತ್ಯುತ್ತಮ ಸ್ಥಾನದಲ್ಲಿರುವುದರಿಂದ, ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳು ಮತ್ತು ಲಾಜಿಸ್ಟಿಕ್ ನೊಂದಿಗೆ ಎಂ.ಎಸ್.ಎಂ.ಇ ಗಳ ರಕ್ಷಣಾ ಕ್ಲಸ್ಟರ್ ಅನ್ನು ಸ್ಥಾಪಿಸುವಂತೆ ಕಾಸಿಯಾ ಅಧ್ಯಕ್ಷ ಕೆಬಿ ಅರಸಪ್ಪ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.