ETV Bharat / state

ಚುನಾವಣಾ ಅಖಾಡದಲ್ಲಿ ಅಧಿಕಾರಿಗಳು: ಯಾರಿಗೆ ವಿಧಾನಸಭೆ ಪ್ರವೇಶಿಸುವ ಅವಕಾಶ? ಸಂಪೂರ್ಣ ವಿವರ - ವಿಧಾನಸಭೆ ಚುನಾವಣೆ ನಿವೃತ್ತ ಅಧಿಕಾರಿಗಳ ಸ್ಪರ್ಧೆ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ನಿವೃತ್ತ ಅಧಿಕಾರಿಗಳ ಫಲಿತಾಂಶದ ಅಪ್ಡೇಟ್‌ ಹೀಗಿದೆ.

Etv Bharat
Etv Bharat
author img

By

Published : May 13, 2023, 8:23 AM IST

Updated : May 13, 2023, 6:31 PM IST

ಬೆಂಗಳೂರು: ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಜಿ.ಪರಮೇಶ್ವರ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಐಎಎಸ್​ ಅಧಿಕಾರಿ ​ಬಿ.ಹೆಚ್‌.ಅನಿಲ್‌ ಕುಮಾರ್‌ ಸೋಲನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ವಿರುದ್ಧ ಮಾಜಿ ಐಎಎಸ್​ ಅಧಿಕಾರಿ ಬಿ.ಹೆಚ್‌.ಅನಿಲ್‌ ಕುಮಾರ್‌ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ನಿರ್ವಹಿಸಿದ್ದ ಅನಿಲ್‌ ಕುಮಾರ್‌ ಎಸ್​​ಸಿ ಎಡ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಷೇತ್ರದ ಮತದಾರರು ಕೈ ಹಿಡಿಯಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದರು.

ಆದರೆ, ಹಿರಿಯ ರಾಜಕಾರಣಿಯಾದ ಪರಮೇಶ್ವರ್‌ ತಮ್ಮದೇ ಆದ ಹಿಡಿತವನ್ನು ಕ್ಷೇತ್ರದಲ್ಲಿ ಹೊಂದಿದ್ದಾರೆ. 2010ರಿಂದ 18ರವರೆಗೆ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಇವರು, ಇದೇ ಕ್ಷೇತ್ರದಿಂದ 2008 ಮತ್ತು 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ 2013 ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್​ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಹೀಗಾಗಿ ಅವರಿಗೆ ಸಿಎಂ ಪಟ್ಟ ತಪ್ಪಿತು ಎಂಬ ಮಾತುಗಳಿವೆ. ಕಾಂಗ್ರೆಸ್​ನಲ್ಲಿ ಸಹಜವಾಗಿ ಕೆಪಿಸಿಸಿ ಅಧ್ಯಕರಾಗಿದ್ದವರೇ ಸಿಎಂ ಪಟ್ಟಕ್ಕೆ ಹೆಚ್ಚು ಒಲವು ಎಂಬ ಜನಜನಿತ ಮಾತಿದೆ. ಆದರೆ ಪರಮೇಶ್ವರ್​ ಸೋಲು ಅವರಿಗೆ ಆಘಾತವನ್ನು ತಂದಿಟ್ಟಿತ್ತು. ಇನ್ನು ಅನಿಲ್​ ಕುಮಾರ್​​​​ ಬಿಬಿಎಂಪಿ ಆಯುಕ್ತರಾಗಿ ಸಹ ಹೆಸರು ಮಾಡಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಬೆಳಗಾವಿಯ ರಾಯಬಾಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

  • ' class='align-text-top noRightClick twitterSection' data=''>

ಭಾಸ್ಕರ್‌ ರಾವ್‌ (ಚಾಮರಾಜಪೇಟೆ): ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಜಮೀರ್​ ಅಹ್ಮದ್ ಗೆಲುವು ಸಾಧಿಸಿದ್ದಾರೆ. ಮಾಜಿ ಐಪಿಎಸ್‌ ಅಧಿಕಾರಿ ಹಾಗು ಬೆಂಗಳೂರು ಮಾಜಿ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್‌ ರಾವ್‌ ಅವರು ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಪೊಲೀಸ್​ ಆಯಕ್ತರಾಗಿದ್ದ ಇವರು ತಮ್ಮ ಸೇವಾವಧಿ ಇನ್ನೂ ಇರುವಾಗಲೇ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿದ್ದರು. ಅಂದರೆ, ವಿಆರ್​ಎಸ್​ ಪಡೆದುಕೊಂಡಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದ ಮೇಲೆ ಅವರು, ಮೊದಲಿಗೆ ಆಮ್‌ ಆದ್ಮಿ ಪಾರ್ಟಿ ಪಕ್ಷ ಸೇರಿದ್ದರು. ಆಪ್​ ಉಪಾಧ್ಯಕ್ಷರಾಗಿದ್ದ ಇವರು ಚುನಾವಣೆ ಸಮೀಪದಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದ್ದರು.

ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ ಹಾಗೂ ಜಯನಗರ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆಗೆ ಕಮಲ ಪಾಳಯ ಭಾಸ್ಕರ್‌ ರಾವ್‌ ಅವರನ್ನು ಕಾಂಗ್ರೆಸ್​ನ ಜಮೀರ್​ ಅಹ್ಮದ್​ ಪ್ರತಿನಿಧಿಸುವ ಚಾಮರಾಜಪೇಟೆಯಲ್ಲಿ ಸ್ಪರ್ಧೆಗೆ ಇಳಿಸಿದೆ. ಇದೇ ಕ್ಷೇತ್ರದಿಂದ ಎರಡು ಬಾರಿ ಜೆಡಿಎಸ್​ ಮತ್ತು ಒಮ್ಮೆ ಕಾಂಗ್ರೆಸ್​ನಿಂದ ಜಮೀರ್​ ಅಹಮ್ಮದ್​ ಖಾನ್​​​​ ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದರು. ಈಗ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ.

ಕೆ.ಮಥಾಯಿ (ಶಾಂತಿನಗರ): ಶಾಂತಿನಗರದಲ್ಲಿ ಕಾಂಗ್ರೆಸ್​ನ ಎನ್.ಎ.ಹ್ಯಾರಿಸ್ ಜಯಭೇರಿ ಬಾರಿಸಿದ್ದಾರೆ. ಆಪ್​ನ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿಗೆ ಸೋಲಾಗಿದೆ. ಕರ್ನಾಟಕದ ಖೇಮ್ಕಾ ಎಂದೇ ಪ್ರಖ್ಯಾತಿ ಪಡೆದಿದ್ದ ಕೆ.ಮಥಾಯಿ ತಮ್ಮ ಹುದ್ದೆಗೆ ನಿವೃತ್ತಿ ಘೋಷಿಸಿ ಆಮ್​ ಆದ್ಮಿ ಪಕ್ಷದಿಂದ ಬೆಂಗಳೂರಿನ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಇಳಿದ ರಾಠೋಡ್​: ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಪ್ರಿಯಾಂಕ್ ಖರ್ಗೆ ಗೆದ್ದಿದ್ದಾರೆ. ಜೆಡಿಎಸ್​ ಸ್ಪರ್ಧಿ, ಮಾಜಿ ನ್ಯಾಯಧೀಶ ಡಾ.ಸುಭಾಶ್ಚಂದ್ರ ರಾಠೋಡ ಸೋಲನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಡಾ.ಸುಭಾಶ್ಚಂದ್ರ ರಾಠೋಡ ಚಿತ್ತಾಪುರದಲ್ಲಿ ಜೆಡಿಎಸ್​ನಿಂದ ಸ್ಪರ್ಧೆಗಿಳಿದಿದ್ದರು. ವಿಜಯಪುರದ ಮೂಲದ ಇವರು ಚಿತ್ತಾಪುರ ಕಿರಿಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾಗಿ, ಬಳಿಕ ಗದಗನಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಫೆಬ್ರವರಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರಿರುವ ಇವರು ಕ್ಷೇತ್ರದಲ್ಲಿ ಕಾಂಗ್ರೆಸ್​ನ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಎದುರಾಳಿಯಾಗಿ ಚುನಾವಣೆಗೆ ಇಳಿದಿದ್ದಾರೆ. 2019ರ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿ ಸೋಲು ಕಂಡಿದ್ದ ಪ್ರಿಯಾಂಕ್​ ಖರ್ಗೆ 2003 ಮತ್ತು 2008ರಲ್ಲಿ ಗೆಲುವು ಸಾಧಿಸಿದ್ದು, ಈಗ ಹ್ಯಾಟ್ರಿಕ್​ ವಿಜಯ ಸಾಧಿಸಿದ್ದಾರೆ.

ಅರ್ಜುನ ಹಲಗಿಗೌಡ (ತೆರದಾಳ): ತೆರದಾಳ ಕ್ಷೇತ್ರದಲ್ಲಿ ಬಿಜೆಪಿಯ ಸಿದ್ದು ಸವದಿ ಗೆಲುವು ಸಾಧಿಸಿದ್ದಾರೆ. ಆಮ್​ ಆದ್ಮಿ ಅಭ್ಯರ್ಥಿ ಮಾಜಿ ಪೊಲೀಸ್ ಅಧಿಕಾರಿ ಅರ್ಜುನ ಹಲಗಿಗೌಡ ಸೋಲನುಭವಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಮತ ಕ್ಷೇತ್ರದಲ್ಲಿ ಆಮ್​ ಅದ್ಮಿ ಪಕ್ಷದಿಂದ ಮಾಜಿ ಪೊಲೀಸ್​ ಅರ್ಜುನ ಹಲಗಿಗೌಡ ಚುನಾವಣಾ ಅಖಾಡಕ್ಕಿಳಿದಿದ್ದರು. ಗುಪ್ತಚರ ವಿಭಾಗದಲ್ಲಿ​ 19 ವರ್ಷ ಸೇವೆ ಸಲ್ಲಿಸಿರುವ ಇವರು ತಮ್ಮ ಸರ್ಕಾರಿ ಹುದ್ದೆ ತ್ಯಜಿಸಿ ರಾಜಕೀಯಕ್ಕೆ ಬಂದಿದ್ದರು. ಕಾಂಗ್ರೆಸ್​ನಿಂದ ಸಿದ್ದು ರಾಮಪ್ಪ ಕೋನ್ನೂರ ಸ್ಪರ್ಧೆ ಮಾಡಿದ್ದರು.

ಇದನ್ನೂ ಓದಿ: ಮತ ಎಣಿಕೆಗೆ ಕೌಂಟ್‌ಡೌನ್‌: ಮೊದಲು ಅಂಚೆ ಮತಗಳ ಎಣಿಕೆ- ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ

Last Updated : May 13, 2023, 6:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.