ETV Bharat / state

ನಮಗೆ ಹೊಡೆಯುವವರ ಕೈ ಹಿಡಿದು ತಡೆಯಬಹುದು, ಆದ್ರೆ ಮಾತನಾಡುವವರ ನಾಲಿಗೆ ಹಿಡಿಯಲು ಸಾಧ್ಯವೇ: ಡಿಕೆಶಿ

author img

By

Published : Mar 12, 2022, 10:48 PM IST

ಪಕ್ಷ ಬಿಡುವವರು ಯೋಚಿಸಲಿ, ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ, ಈ ಪಕ್ಷದಿಂದ ಹೆಸರು ಮಾಡಿ ಈಗ ಬೇರೆ ಕಡೆ ಸೇರುವುದು ದೊಡ್ಡ ಸಾಧನೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್​ ಗರಂ ಆದರು.

d k shivakumar
ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಡಿ.ಕೆ‌.ಶಿವಕುಮಾರ್

ಬೆಂಗಳೂರು: ನಮಗೆ ಹೊಡೆಯುವವರ ಕೈ ಹಿಡಿದು ತಡೆಯಬಹುದು. ಆದರೆ ಮಾತನಾಡುವವರ ನಾಲಿಗೆ ಹಿಡಿಯಲು ಸಾಧ್ಯವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಸೂಚ್ಯವಾಗಿ ಜೆಡಿಎಸ್​ ಸೇರುತ್ತಿರುವ ಸಿ. ಎಂ. ಇಬ್ರಾಹಿಂಗೆ ತಿರುಗೇಟು ನೀಡಿದರು.

ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತ, ನಾವು ಅವರ ಜತೆ ಸರ್ಕಾರ ಮಾಡಿ, ಅವರ ತಂದೆಯವರನ್ನು ಪ್ರಧಾನಿ ಮಾಡಿ, ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ನಮ್ಮ ಕೆಲಸವನ್ನು ನಾಟಕ ಎಂದು ಹೇಳುತ್ತಾರೆ. ಇದನ್ನೆಲ್ಲಾ ಜನ ನೋಡಿದ್ದಾರೆ. ನಾಟಕ ಯಾರು ಮಾಡುತ್ತಿದ್ದಾರೆ ಎಂದು ಅವರೇ ಹೇಳುತ್ತಾರೆ ಜೆಡಿಎಸ್​ ನಾಯಕರ ವಿರುದ್ಧವೂ ಡಿಕೆಶಿ ಹರಿಹಾಯ್ದರು.

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ, ಪಕ್ಷ ಬಿಡುತ್ತಿರುವವರು ಒಮ್ಮೆ ಯೋಜಿಸಲಿ. ಅವರಿಗೆ ಇದುವರೆಗೂ ಅವಕಾಶ ಕೊಟ್ಟು ಬೆಳೆಸಿದವರು ಯಾರು ಎಂದು ಆಗ ಅವರಿಗೆ ತಿಳಿಯುತ್ತದೆ. ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ ಎಂದು ಕಿಡಿಕಾರಿದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಬೀಗುತ್ತಾರೆ. ಆದರೆ ಕರ್ನಾಟಕದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸೋಲು ಕಂಡದ್ದು ಮರೆಯುವಂತಿಲ್ಲ. ಅವರ ಮೇಲಿರುವ ರೀತಿ ಆರೋಪಗಳು ನಮ್ಮಲ್ಲಿ ಯಾರ ಮೇಲೂ ಇಲ್ಲ. ಈ ಎಲ್ಲಾ ವಿಚಾರಗಳನ್ನು ಜನರಿಗೆ ತಿಳಿಸುವ ಅಗತ್ಯ ಇದೆ ಎಂದರು.

ಯುವಕರಿಗೆ ಅವಕಾಶ ಕಲ್ಪಿಸುವ ಬಗ್ಗೆ ರಾಹುಲ್​ ಗಾಂಧಿ ಅವರೊಂದಿಗೆ ಚರ್ಚಿಸುತ್ತೇನೆ. ಸಾಮರ್ಥ್ಯ ಇದ್ದವರಿಗೆ ಅವಕಾಶ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು.. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಗ್ಗೆ ಸಿ.ಎಂ. ಇಬ್ರಾಹಿಂ ಅಧಿಕೃತ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.