ETV Bharat / state

ಓಲಾ ಲೈಸನ್ಸ್ ರದ್ದುಗೊಳಿಸಿದ ಕರ್ನಾಟಕ ಸಾರಿಗೆ ಇಲಾಖೆ

ವಾಹನದ ನಿಯಮದ ಪ್ರಕಾರ ಬೈಕ್​ನ್ನು ಟ್ಯಾಕ್ಸಿ ಆಗಿ ಬಳಸುವುದು ಕಾನೂನು ಬಾಹಿರ. ಆದರೆ, ಓಲಾ ಸಂಸ್ಥೆ ಬೈಕ್ ಟ್ಯಾಕ್ಸಿಯನ್ನು ನಡೆಸುತ್ತಿದ್ದ ಕಾರಣ ಇಲಾಖೆ ಲೈಸನ್ಸ್ ಅನ್ನು ರದ್ದುಗೊಳಿಸಿದೆ.

ಓಲಾ ಲೈಸನ್ಸ್ ರದ್ದು
author img

By

Published : Mar 24, 2019, 4:14 AM IST

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ ಖಾಸಗಿ ಕ್ಯಾಬ್ ಸಂಸ್ಥೆಯಾದ ಓಲಾ ಲೈಸನ್ಸ್ ಅನ್ನು ರದ್ದುಗೊಳಿಸಿದೆ.

ಕರ್ನಾಟಕ ಮೋಟಾರ್ ವಾಹನದ ನಿಯಮದ ಪ್ರಕಾರ ಬೈಕ್​ನ್ನು ಟ್ಯಾಕ್ಸಿ ಆಗಿ ಬಳಸುವುದು ಕಾನೂನು ಬಾಹಿರ. ಆದರೆ, ಓಲಾ ಸಂಸ್ಥೆ ಬೈಕ್ ಟ್ಯಾಕ್ಸಿಯನ್ನು ನಡೆಸುತ್ತಿದ್ದ ಕಾರಣ ಇಲಾಖೆ ಲೈಸನ್ಸ್ ಅನ್ನು ರದ್ದುಗೊಳಿಸಿದೆ. ಈ ಬಗ್ಗೆ ಮಾತನಾಡಿದ ಓಲಾ, ಊಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ, ಓಲಾ ಸಂಸ್ಥೆಯು ಸರ್ವಾಧಿಕಾರಿ ಧೋರಣೆ ನಡೆಸುತ್ತಿದೆ ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದೆ. ಆದರೆ, ಸಂಸ್ಥೆಯನ್ನು ನಂಬಿದ ಚಾಲಕರು ಯಾವುದೇ ರೀತಿಯಲ್ಲಿ ಗಾಬರಿಪಡುವ ಅಗತ್ಯವಿಲ್ಲ ಎಂದರು.

ಓಲಾ ಲೈಸನ್ಸ್ ರದ್ದು

ಓಲಾ ಇಲ್ಲ ಅಂದರು ಬೇರೆ ಸಂಸ್ಥೆಗಳು ಇವೆ. ಈ ಸಂಸ್ಥೆಗಳು ಕೇವಲ ಮಧ್ಯವರ್ತಿ ಕೆಲಸ ಮಾಡುತ್ತಿದೆ. ಊಬರ್ ನಂತರ ಸಾಕಷ್ಟು ಸಂಸ್ಥೆಗಳು ಮಾರುಕಟ್ಟೆಯಲ್ಲಿದೆ. ಇಲ್ಲದಿದ್ದರೂ ಕಾಲ್ ಸೆಂಟರ್ ಅಥವಾ ಬೇರೆ ಅಂತರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಕ್ಯಾಬ್​ಗಳನ್ನು ಜೋಡಿಸಿ ದುಡಿಯಬಹುದು ಎಂದು ತಿಳಿಸಿದರು.

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ ಖಾಸಗಿ ಕ್ಯಾಬ್ ಸಂಸ್ಥೆಯಾದ ಓಲಾ ಲೈಸನ್ಸ್ ಅನ್ನು ರದ್ದುಗೊಳಿಸಿದೆ. ಕರ್ನಾಟಕ ಮೋಟಾರ್ ವಾಹನದ ನಿಯಮದ ಪ್ರಕಾರ ಬೈಕ್ ನನ್ನು ಟ್ಯಾಕ್ಸಿ ಆಗಿ ಬಳಸುವುದು ಕಾನೂನು ಬಾಹಿರ. ಆದರೆ ಓಲಾ ಸಂಸ್ಥೆ ಬೈಕ್ ಟ್ಯಾಕ್ಸಿಯನ್ನು ನಡೆಸುತ್ತಿದ್ದ ಕಾರಣ ಇಲಾಖೆ ಲೈಸನ್ಸ್ ಅನ್ನು ರದ್ದುಗೊಳಿಸಿದೆ. ಇದರ ಸಂಬಂಧಿಸಿದಂತೆ ಮಾತನಾಡಿದ ಓಲಾ ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ಓಲಾ ಸಂಸ್ಥೆಯು ಸರ್ವಾಧಿಕಾರಿ ಧೋರಣೆ ನಡೆಸುತ್ತಿದೆ ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದೆ ಆದರೆ ಸಂಸ್ಥೆಯನ್ನು ನಂಬಿದ ಚಾಲಕರು ಯಾವುದೇ ರೀತಿಯಲ್ಲಿ ಗಾಬರಿಪಡುವ ಅಗತ್ಯವಿಲ್ಲ. ಓಲಾ ಇಲ್ಲ ಅಂದರು ಬೇರೆ ಸಂಸ್ಥೆಗಳು ಇವೆ ಈ ಸಂಸ್ಥೆಗಳು ಕೇವಲ ಮಧ್ಯವರ್ತಿ ಕೆಲಸ ಮಾಡುತ್ತಿದೆ. ಉಬರ್ ನಂತರ ಸಾಕಷ್ಟು ಸಂಸ್ಥೆಗಳು ಮಾರುಕಟ್ಟೆಯಲ್ಲಿದೆ ಇಲ್ಲದಿದ್ದರೂ ಕಾಲ್ ಸೆಂಟರ್ ಅಥವಾ ಬೇರೆ ಅಂತರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಕ್ಯಾಬ್ ಗಳನ್ನು ಜೋಡಿಸಿ ದುಡಿಯಬಹುದು ಎಂದು ತಿಳಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.