ETV Bharat / state

ರಾಷ್ಟ್ರೀಯ ಶಿಕ್ಷಣ ನೀತಿ- 2020 ಅನುಷ್ಠಾನದಲ್ಲಿ ರಾಜ್ಯವೇ ನಂ.1 ಆಗಲಿದೆ : ಡಿಸಿಎಂ ಅಶ್ವತ್ಥ್‌ ನಾರಾಯಣ - DCM Ashwatthanarayan

ಪ್ರಪಂಚದ ಯಾವುದೇ ಮೂಲೆಯ ಸದ್ವಿಚಾರಗಳನ್ನು ತಿಳಿದುಕೊಳ್ಳಲು ಹಾಗೂ ಎಲ್ಲೇ ಕುಳಿತು ಜ್ಞಾನಾರ್ಜನೆಗೆ ನೆರವಾಗಲು ರಾಷ್ಟ್ರೀಯ ಶಿಕ್ಷಣ ನೀತಿ-2020ರಿಂದ ಸಾಧ್ಯವಾಗಲಿದೆ. ಶಿಕ್ಷಣ ಕ್ಷೇತ್ರ ಜಾಗತೀಕರಣದ ಕಾಲದಲ್ಲಿಯೂ ಮತ್ತೊಮ್ಮೆ ಉನ್ನತ ಸ್ಥಾನಕ್ಕೆ ತಲುಪಲು ಈ ನೀತಿ ನೆರವಾಗಲಿದೆ..

ಡಿಸಿಎಂ ಅಶ್ವತ್ಥನಾರಾಯಣ್
ಡಿಸಿಎಂ ಅಶ್ವತ್ಥನಾರಾಯಣ್
author img

By

Published : Sep 14, 2020, 4:25 PM IST

ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ- 2020 ಕ್ಷಿಪ್ರಗತಿಯಲ್ಲಿ ಸಮರ್ಪಕ ರೀತಿ ಅನುಷ್ಠಾನದೊಂದಿಗೆ ರಾಜ್ಯವನ್ನು ನಂ.1 ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಡಿಸಿಎಂ ಡಾ.ಸಿ ಎನ್ ಅಶ್ವತ್ಥ್‌ ನಾರಾಯಣ್ ಹೇಳಿದ್ದಾರೆ.

ಮೈಸೂರಿನ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಆಶ್ರಯದಲ್ಲಿ ನಡೆಯುತ್ತಿರುವ 'ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ: ಅವಕಾಶಗಳು ಮತ್ತು ಸವಾಲುಗಳು' ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಸಿಎಂ ಭಾಗಿಯಾದರು.

ಪ್ರಪಂಚದ ಯಾವುದೇ ಮೂಲೆಯ ಸದ್ವಿಚಾರಗಳನ್ನು ತಿಳಿದುಕೊಳ್ಳಲು ಹಾಗೂ ಎಲ್ಲೇ ಕುಳಿತು ಜ್ಞಾನಾರ್ಜನೆಗೆ ನೆರವಾಗಲು ರಾಷ್ಟ್ರೀಯ ಶಿಕ್ಷಣ ನೀತಿ-2020ರಿಂದ ಸಾಧ್ಯವಾಗಲಿದೆ. ಸನಾತನ ಸಂಸ್ಕೃತಿ-ಪರಂಪರೆಯಲ್ಲಿ ಉನ್ನತಿಯಲ್ಲಿದ್ದ ಶಿಕ್ಷಣ ಕ್ಷೇತ್ರ ಜಾಗತೀಕರಣದ ಕಾಲದಲ್ಲಿಯೂ ಮತ್ತೊಮ್ಮೆ ಉನ್ನತ ಸ್ಥಾನಕ್ಕೆ ತಲುಪಲು ಈ ನೀತಿ ನೆರವಾಗಲಿದೆ ಎಂಬುದು ನನ್ನ ದೃಢ ನಂಬಿಕೆ ಎಂದರು.

ಇದಕ್ಕೆ ಪೂರಕವಾಗುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಟಾಸ್ಕ್‌ಫೋರ್ಸ್ ಹಾಗೂ ವಿಶ್ವವಿದ್ಯಾಲಯಗಳು ಸಲಹೆ-ಅಭಿಪ್ರಾಯ ಸಂಗ್ರಹಿಸಿ ಅನುಷ್ಠಾನ ಕಾರ್ಯದಲ್ಲಿ ಈಗಾಗಲೇ ನಿರತವಾಗಿವೆ. ಕ್ಷಿಪ್ರಗತಿಯಲ್ಲಿ ಸಮರ್ಪಕ ರೀತಿಯ ಅನುಷ್ಠಾನದೊಂದಿಗೆ ರಾಜ್ಯವನ್ನು ನಂ.1 ಮಾಡಲು ನಾವು ಬದ್ಧರಾಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.