ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ. ಸಾವಿರದ ಆಸುಪಾಸಿನಲ್ಲೇ ಹೊಸ ಪ್ರಕರಣ ವರದಿಯಾಗುತ್ತಿವೆ. ಇದೇ ಅವಧಿಯಲ್ಲಿ ಲಸಿಕಾ ಅಭಿಯಾನಕ್ಕೆ ಸರ್ಕಾರ ವೇಗವನ್ನೂ ನೀಡಿದೆ.
ಈ ಬೆನ್ನಲ್ಲೇ ಹೊಸ ಮೈಲಿಗಲ್ಲೊಂದನ್ನು ಮುಟ್ಟಿದ್ದು, ಕರ್ನಾಟಕ ರಾಜ್ಯವು 1 ಕೋಟಿ ಜನರಿಗೆ ಸಂಪೂರ್ಣ ಲಸಿಕೆ ಹಾಕಿದ 6ನೇ ರಾಜ್ಯವಾಗಿದೆ. ರಾಷ್ಟ್ರದ ಮಹಾನಗರಗಳಲ್ಲಿ ದೆಹಲಿಯ ನಂತರ 1 ಕೋಟಿ ಲಸಿಕಾ ಡೋಸ್ಗಳನ್ನು ಬೆಂಗಳೂರು ಮಹಾನಗರವು ನೀಡಿದೆ.
ರಾಜ್ಯದಲ್ಲಿಯೇ ಬೆಂಗಳೂರು ನಗರ ಜಿಲ್ಲೆ ಶೇ.100ರಷ್ಟು ಮೊದಲನೇ ಡೋಸ್ ಲಸಿಕೆ ನೀಡಿದ ಪ್ರಥಮ ಜಿಲ್ಲೆಯಾಗಿದೆ. ಬೆಂಗಳೂರು ನಗರ ಜಿಲ್ಲೆ (ಬಿಬಿಎಂಪಿ ಒಳಗೊಂಡಂತೆ) ಒಟ್ಟು 1 ಕೋಟಿಗೂ ಅಧಿಕ ಲಸಿಕಾ ಡೋಸ್ಗಳನ್ನು ನೀಡಿದೆ.
-
ಅದ್ಭುತ ಆಗಸ್ಟ್
— K'taka Health Dept (@DHFWKA) September 3, 2021 " class="align-text-top noRightClick twitterSection" data="
ಕರ್ನಾಟಕದಲ್ಲಿ ಕೋವಿಡ್-19 ಲಸಿಕಾಕರಣದ ಮೈಲಿಗಲ್ಲು.@CMofKarnataka @mla_sudhakar @hublimandi @Kalaburgivarthe @drmsbc @drmubl @DrmMys @Namducbpura@HaveriDipo @NammaBengaluroo @WFRising @DDChandanaNews @BelagaviKA @AIRBENGALURU1 @KarnatakaVarthe @PIBBengaluru pic.twitter.com/Jj3CTDIt5S
">ಅದ್ಭುತ ಆಗಸ್ಟ್
— K'taka Health Dept (@DHFWKA) September 3, 2021
ಕರ್ನಾಟಕದಲ್ಲಿ ಕೋವಿಡ್-19 ಲಸಿಕಾಕರಣದ ಮೈಲಿಗಲ್ಲು.@CMofKarnataka @mla_sudhakar @hublimandi @Kalaburgivarthe @drmsbc @drmubl @DrmMys @Namducbpura@HaveriDipo @NammaBengaluroo @WFRising @DDChandanaNews @BelagaviKA @AIRBENGALURU1 @KarnatakaVarthe @PIBBengaluru pic.twitter.com/Jj3CTDIt5Sಅದ್ಭುತ ಆಗಸ್ಟ್
— K'taka Health Dept (@DHFWKA) September 3, 2021
ಕರ್ನಾಟಕದಲ್ಲಿ ಕೋವಿಡ್-19 ಲಸಿಕಾಕರಣದ ಮೈಲಿಗಲ್ಲು.@CMofKarnataka @mla_sudhakar @hublimandi @Kalaburgivarthe @drmsbc @drmubl @DrmMys @Namducbpura@HaveriDipo @NammaBengaluroo @WFRising @DDChandanaNews @BelagaviKA @AIRBENGALURU1 @KarnatakaVarthe @PIBBengaluru pic.twitter.com/Jj3CTDIt5S
ರಾಜ್ಯವು 4 ಕೋಟಿ ಲಸಿಕಾ ಡೋಸ್ಗಳನ್ನು ನೀಡಿದೆ. ರಾಜ್ಯವು 3 ಕೋಟಿ ಫಲಾನುಭವಿಗಳಿಗೆ ಮೊದಲನೇ ಡೋಸ್ಗಳನ್ನು ನೀಡಿದೆ. 1 ಕೋಟಿ ಜನಸಂಖ್ಯೆ ಎರಡೂ ಡೋಸ್ಗಳನ್ನು ಪಡೆದಿದ್ದಾರೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.