ಬೆಂಗಳೂರು: ನಗರದಲ್ಲಿ ಇಂದು ಬಿಡುಗಡೆಯಾಗಿರುವ ಸಾರ್ವಜನಿಕ ಆಡಳಿತ ಸೂಚ್ಯಂಕ (ಪಿಎಐ)ದಲ್ಲಿ ಕರ್ನಾಟಕ ರಾಜ್ಯಕ್ಕೆ ಆರನೇ ಸ್ಥಾನ ಲಭಿಸಿದೆ. ಕೇಂದ್ರ ಸರ್ಕಾರದ ಮಾಹಿತಿ ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ವರದಿಯಲ್ಲಿ ಹರಿಯಾಣ ರಾಜ್ಯ ಮೊದಲ ಸ್ಥಾನ ಪಡೆದಿದೆ. ತಮಿಳುನಾಡು ದ್ವಿತೀಯ, ಕೇರಳ 3ನೇ ಸ್ಥಾನ ಗಳಿಸಿದೆ.
ಕರ್ನಾಟಕವು ಒಟ್ಟಾರೆ ಸಾಧನೆಯಲ್ಲಿ 6ನೇ ಸ್ಥಾನ ಗಳಿಸಿದೆ. 2021ನೇ ಸಾಲಿನಲ್ಲಿ ರಾಜ್ಯವು 7ನೇ ಸ್ಥಾನದಲ್ಲಿತ್ತು. ಈ ಸಾರಿ ರಾಜ್ಯದ ಸಾಧನೆ ಕೊಂಚ ಮೇಲಕ್ಕೇರಿದೆ. ಈ ಆಯ್ಕೆ ಪ್ರಕ್ರಿಯೆಗೆ ರಾಜ್ಯಗಳ ವಿಸ್ತೀರ್ಣ, ಜನಸಂಖ್ಯೆ ಆಧರಿಸಿ ದೊಡ್ಡ ಮತ್ತು ಸಣ್ಣ ರಾಜ್ಯಗಳನ್ನಾಗಿ ವರ್ಗ ಮಾಡಲಾಗುತ್ತದೆ. ಇವುಗಳನ್ನು ಕೇಂದ್ರ ಸರ್ಕಾರದ ಅಂಕಿ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
18 ದೊಡ್ಡ ರಾಜ್ಯಗಳ ಪೈಕಿ ಹರಿಯಾಣ ಅತ್ಯುತ್ತಮ ಆಡಳಿತದ ರಾಜ್ಯವಾಗಿ ಹೊರಹೊಮ್ಮಿದ್ದರೆ, 10 ಸಣ್ಣ ರಾಜ್ಯಗಳಲ್ಲಿ ಸಿಕ್ಕಿಂ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಪಿಎಸಿ ನಿರ್ದೇಶಕ ಜಿ ಗುರುಚರಣ್, ಪಿಎಸಿಯ ಮಾಜಿ ಅಧ್ಯಕ್ಷ ಡಾ.ಎ.ರವೀಂದ್ರ, ಹಿರಿಯ ನ್ಯಾಯವಾದಿ ವಿ.ಸುಧೀಶ ಪೈ ಈ ಕುರಿತು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಓಲಾ, ಉಬರ್ ಆಟೋ ರಿಕ್ಷಾ ಸೇವೆ: ಬಲವಂತದ ಕ್ರಮ ಬೇಡ, ಪ್ರಯಾಣ ಶುಲ್ಕ ನಿಗದಿಗೆ ಹೈಕೋರ್ಟ್ ಸೂಚನೆ